ಕೌನ್ ಬನೇಗಾ ಕರೋಡ್ ಪತಿ 17ನೇ ಸೀಸನ್ನ ವಿಶೇಷ ಸಂಚಿಕೆಯೊಂದರಲ್ಲಿ, ಅಸಲಿ ಅಮಿತಾಭ್ ಬಚ್ಚನ್ ಅವರಿಗೆ ನಕಲಿ ಅಮಿತಾಭ್ ಬಚ್ಚನ್ ಎದುರಾಗಿದ್ದಾರೆ. ಪಾನೀಪುರಿ ಬಗ್ಗೆ ಕೇಳಿದ ವಿಚಿತ್ರ ಪ್ರಶ್ನೆ ಸೇರಿದಂತೆ ಇವರಿಬ್ಬರ ನಡುವಿನ ಹಾಸ್ಯದ ಜುಗಲ್ಬಂದಿ ಪ್ರೇಕ್ಷಕರಲ್ಲಿ ನಗುವಿನ ಅಲೆ ಎಬ್ಬಿಸಿದೆ.
ಕೌನ್ ಬನೇಗಾ ಕರೋಡ್ ಪತಿ (Kaun Banega Crorepati) ಇದೀಗ 17ನೇ ಸೀಸನ್ ನಡೆಯುತ್ತಿದೆ. ಇಷ್ಟೂ ವರ್ಷಗಳೂ ಇದನ್ನು ನಟ ಅಮಿತಾಭ್ ಬಚ್ಚನ್ ಅವರೇ ನಡೆಸಿಕೊಡ್ತಿರೋದು ವಿಶೇಷ. ಈ ಷೋನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ, ಸಾಮಾನ್ಯ ಜನರಿಂದು ಹಿಡಿದು ಸೆಲೆಬ್ರಿಟಿಗಳವರೆಗೆ, ಬೇರೆ ಬೇರೆ ಭಾಷೆಗಳ ತಾರೆಯರು, ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಎಲ್ಲರೂ ಹಾಟ್ ಸೀಟ್ನಲ್ಲಿ ಕುಳಿತಿದ್ದಾರೆ. ಆರಂಭದಲ್ಲಿ ಒಂದು ಕೋಟಿ ರೂಪಾಯಿಗೆ ಸೀಮಿತವಾಗಿದ್ದ ಈ ಷೋ ಇದೀಗ ಏಳು ಕೋಟಿಗೆ ಬಂದು ತಲುಪಿದೆ. ಹಲವಾರು ಮಂದಿ ಕೋಟಿ ಕೋಟಿ ಗೆದ್ದು ಬೀಗಿದ್ದಾರೆ.
ಇಂಟರೆಸ್ಟಿಂಗ್ ಎಪಿಸೋಡ್
ಇವೆಲ್ಲಕ್ಕಿಂತಲೂ ತುಂಬಾ ಇಂಟರೆಸ್ಟಿಂಗ್ ಎನ್ನಿಸುವಂಥ ಎಪಿಸೋಡ್ ಒಂದು ಇದೀಗ ತೆರೆ ಕಾಣಲಿದೆ. ಇದರ ಪ್ರೊಮೋ ರಿಲೀಸ್ ಆಗುತ್ತಿದೆ. ಇದರಲ್ಲಿ ಅಮಿತಾಭ್ ಬಚ್ಚನ್ ಅವರನ್ನು ಅಮಿತಾಭ್ ಬಚ್ಚನ್ ಅವರೇ ಪ್ರಶ್ನಿಸ್ತಿದ್ದಾರೆ! ಏನೋ ಕನ್ಫ್ಯೂಸ್ ಆಗಬೇಡಿ, ಪ್ರಶ್ನೆ ಕೇಳುವವರೂ ಅಮಿತಾಭ್, ಉತ್ತರ ಹೇಳುವವರೂ ಅಮಿತಾಭ್. ಆದರೆ, ಒಂದೇ ಒಂದು ಟ್ವಿಸ್ಟ್ ಎಂದರೆ, ಪ್ರಶ್ನೆ ಕೇಳುವವರು ನಕಲಿ ಹಾಗೂ ಉತ್ತರ ಹೇಳುವವರು ಬಾಲಿವುಡ್ ಬಿಗ್ ಬಿ ಅಸಲಿ ಅಮಿತಾಭ್ ಬಚ್ಚನ್.
ಜೋಕ್ಸ್ ಮೇಲೆ ಜೋಕ್ಸ್
ಈ ಎಪಿಸೋಡ್ನ ಹಲವಾರು ಪ್ರೊಮೋಗಳು ಇದಾಗಲೇ ರಿಲೀಸ್ ಆಗಿವೆ. ಇದರಲ್ಲಿ ನಕಲಿ ಅಮಿತಾಭ್ ಬಚ್ಚನ್ ಮತ್ತು ಅಸಲಿ ನಡುವೆ ಹಾಸ್ಯದ ಹೊನಲೇ ಹರಿದಿದೆ. ಇವರಿಬ್ಬರೂ ಸೇರಿ ಹಲವಾರು ರೀತಿಯಲ್ಲಿ ಜೋಕ್ಸ್ ಮಾಡಿ ನಕ್ಕು ನಗಿಸಿದ್ದಾರೆ. ಆರಂಭದಲ್ಲಿ ಅಮಿತಾಭ್ ಬಚ್ಚನ್ ಅವರು ನಕಲಿ ಅಮಿತಾಭ್ಗೆ ಪ್ರಶ್ನೆ ಕೇಳಿದ್ರೆ, ಕೊನೆಯಲ್ಲಿ ಅಮಿತಾಭ್ ಬಚ್ಚನ್ ಅವರಿಗೇ ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗಳನ್ನು ಕೇಳಿ ಅಮಿತಾಭ್ ಬಚ್ಚನ್ ಬಿದ್ದೂ ಬಿದ್ದೂ ನಕ್ಕಿದ್ದಾರೆ.
ಎದುರಾಯ್ತು ಪಾನೀಪುರಿ ಪ್ರಶ್ನೆ
ಅಷ್ಟಕ್ಕೂ ಈಗ ರಿಲೀಸ್ ಆಗಿರೋ ಪ್ರೊಮೋದಲ್ಲಿ ಮೊದಲಿ ನಕಲಿ ಅಮಿತಾಭ್ ಅವರು, ಸಣ್ಣ ದೀಪಾವಳಿಯು ದೊಡ್ಡ ದೀಪಾವಳಿಗಿಂತ ಎಷ್ಟು ದೊಡ್ಡದಾಗಿದೆ ಎಂದು ಪ್ರಶ್ನಿಸಿದ್ದಾರೆ. ಇಷ್ಟಾ, ಇಷ್ಟಾ, ಇಷ್ಟಾ ಎಂದು ಕೈಯಲ್ಲಿ ತೋರಿಸಿದ್ದಾರೆ. ಇದನ್ನು ಕೇಳಿ ಅಮಿತಾಭ್ ಜೋರಾಗಿ ನಕ್ಕಿದ್ದಾರೆ. ಎರಡನೆಯ ಪ್ರಶ್ನೆಯಲ್ಲಿ ಪಾನೀಪುರಿಯಲ್ಲಿ ರಂಧ್ರ ಮಾಡುವಾಗ ಯಾವ ಬೆರಳನ್ನು ಬಳಸುತ್ತಾರೆ ಎಂದು ಕೇಳಿದಾಗಲಂತೂ ಅಮಿತಾಭ್ ಸೇರಿದಂತೆ ಅಲ್ಲಿದ್ದವರು ಬಿದ್ದೂ ಬಿದ್ದೂ ನಕ್ಕಿದ್ದಾರೆ. ಆ ಬಳಿಕ ನಕಲಿ ಅಮಿತಾಭ್, ನಿಮಗೆ ಯಾವ ಹಾಯ್ ಇಷ್ಟ ಎಂದು ಜೋರಾಗಿ, ಸಾಫ್ಟ್ ಆಗಿ ಹಾಯ್ ಎಂದು ಪ್ರಶ್ನಿಸಿದ್ದಾರೆ. ಇದರ ಫುಲ್ ಎಪಿಸೋಡ್ ಅನ್ನು ನೀವು ಸೋನಿ ಟಿವಿಯಲ್ಲಿಯೇ ನೋಡಬೇಕಿದೆ.
ಇದನ್ನು ಓದಿ: ಅಮಿತಾಭ್ ಜೊತೆ ಅಧಿಕಪ್ರಸಂಗ ಮಾಡಿದ ಬಾಲಕನ ಸುದ್ದಿ ನಡುವೆಯೇ ಯದುವೀರ ದತ್ತ ಮಾತೀಗ ವೈರಲ್


