ನಟಿ ರಚಿತಾ ರಾಮ್ ಮದುವೆಯ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಹಿಂದೆ ಮದುವೆಯ ಬಗ್ಗೆ ಯಾವುದೇ ನಿರ್ಧಾರ ತಿಳಿಸದ ಅವರು, ಇತ್ತೀಚೆಗೆ ಜೀ ಕನ್ನಡದ ರಿಯಾಲಿಟಿ ಶೋನಲ್ಲಿ ರವಿಚಂದ್ರನ್ ಅವರು ರಚಿತಾ ಮದುವೆ ಈ ವರ್ಷ ನಡೆಯಲಿದೆ ಎಂದು ಹೇಳಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಆಶ್ಚರ್ಯವಾಗಿದೆ. ರಚಿತಾ ೨೦೧೩ ರಲ್ಲಿ 'ಬುಲ್ ಬುಲ್' ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದರು.

ಸ್ಯಾಂಡಲ್‌ವುಡ್‌ ಬುಲ್ ಬುಲ್, ಡಿಂಪಲ್​ ಕ್ವೀನ್​ ರಚಿತಾ ರಾಮ್ (Rachita Ram) ಸದ್ಯಕ್ಕೆ ಬೇಡಿಯ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದಿರುವ ನಟಿಯರಲ್ಲಿ ಒಬ್ಬರು. 32 ವರ್ಷದ ಚೆಲುವೆ ರಚಿತಾ ರಾಮ್ ಅದ್ಯಾವಾಗ ಮದುವೆಯ ಬಗ್ಗೆ ಸಕತ್​ ಸದ್ದು ಮಾಡುತ್ತಲೇ ಇರುತ್ತಾರೆ. ಇವರು ಯಾವಾಗ ಸಿಹಿ ಸುದ್ದಿ ಕೊಡ್ತಾರೆ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಅವರ ಮದುವೆ 2019ರಲ್ಲಿ ಹಸೆಮಣೆ ಏರಿದ್ದರು. ಆದರೆ ರಚಿತಾ ಮಾತ್ರ ಮದುವೆಯ ಬಗ್ಗೆ ಹೇಳದೇ ಇರುವುದು ಫ್ಯಾನ್ಸ್​ಗೆ ನಿರಾಸೆಯಾಗಿದೆ. ಮದುವೆ ಅನ್ನೋದು ಸುಂದರವಾದ ಕ್ಷಣ ನನಗೆ. ಮದುವೆ ಯಾವಾಗ ಆಗುತ್ತೀನಿ ಎಂದು ನನಗೆ ಗೊತ್ತಿಲ್ಲ. ಮದುವೆಯಾಗುವ (marriage) ಪ್ಲ್ಯಾನ್ ಮಾಡಿಲ್ಲ. ಮದುವೆ ಆಗ್ತೀನಿ ಅನ್ನೋ ವಿಚಾರವನ್ನ ಖುಷಿಯಾಗಿ ಹಂಚಿಕೊಳ್ತೀನಿ. ದೇವಸ್ಥಾನದಲ್ಲಿ ಮದುವೆಯಾಗಬೇಕು ಅಥವಾ ಮನೆಯಲ್ಲಿ ದೇವರ ಮನೆ ಮುಂದೆ ಮದುವೆಯಾಗಬೇಕು. ಏಕೆಂದರೆ ನಾವು ವಾಸ ಮಾಡುವ ಮನೆಯಲ್ಲಿ ಎನರ್ಜಿ ಇರುತ್ತದೆ ಎಂದಿದ್ದರು ನಟಿ. ಆದರೆ ಇದುವರೆಗೂ ಮದುವೆಯ ವಿಷಯ ಎತ್ತಿರಲಿಲ್ಲ.

ಆದರೆ ಇದೀಗ ಜೀ ಕನ್ನಡದ ಬ್ಯಾಚುಲರ್ಸ್​ ಪಾರ್ಟಿ ರಿಯಾಲಿಟಿ ಷೋನಲ್ಲಿ, ತೀರ್ಪುಗಾರರಾಗಿರುವ ರವಿಚಂದ್ರನ್​ ಅವರು ರಚಿತಾ ರಾಮ್​ ಮದುವೆಯ ವಿಷಯ ರಿವೀಲ್​ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದು ಏಕೆಂದರೆ, ಡಾಲಿ ಧನಂಜಯ್ ನಿರ್ಮಾಣದ, ನಾಗಭೂಷಣ, ಧನಂಜಯ್, ಮಲೈಕಾ ವಸುಪಾಲ್ ನಟನೆಯ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರೆಲ್ಲಾ ಚಿತ್ರದ ಪ್ರೊಮೋಷನ್​ಗಾಗಿ ಈ ಷೋಗೆ ಬಂದಿದ್ದರು. ಈ ಸಮಯದಲ್ಲಿ ಈಚೆಗೆ ಮದ್ವೆಯಾದ ನಟ ಡಾಲಿ ಧನಂಜಯ್‌ ಬ್ಯಾಚುಲರ್‌ ಲೈಫಿನ ಬಗ್ಗೆ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಮದ್ವೆಗೂ ಮುನ್ನ, ಮದ್ವೆ ಆದ್ಮೇಲೆ ಹೇಗಿದೆ ಜೀವನ ಕೇಳಿದಾಗ ಅವರು, ‘ಮದುವೆ ಮೊದಲು ನಾಗ ಸಿಕ್ಕರೆ ಅಲ್ಲೇ ಸೆಟಲ್, ನಿರಂಜನ್ ಸಿಕ್ಕರೆ ಅಲ್ಲೇ ಸೆಟಲ್. ಈಗ ಮನೆಗೆ ಹೋಗಬೇಕು’ ಎಂದು ತಮಾಷೆಯಾಗಿ ಹೇಳಿದರು.

ವೇದಿಕೆ ಮೇಲೆಯೇ ತಾಳಿ ಕಟ್ಟಿದ ಬಳಿಕ ರಚಿತಾ ರಾಮ್​ ಕೆನ್ನೆ ಸವರಿದ ಡ್ರೋನ್​ ಪ್ರತಾಪ್​! ಕಣ್​ಕಣ್​ ಬಿಟ್ಟ ಫ್ಯಾನ್ಸ್​..

ಇದೇ ಸಂದರ್ಭದಲ್ಲಿ ಡಾಲಿ ಅವರು, ರಚಿತಾ ರಾಮ್ ಇನ್ನೂ ಬ್ಯಾಚುಲರ್​ ಆಗಿರೋದು ನೋಡಿ ಹೊಟ್ಟೆ ಉರಿಯುತ್ತಿದೆ’ ಎಂದಾಗಿ ಒಗಟಾಗಿ ರವಿಚಂದ್ರನ್​ ಅವರು ಇದೇ ವರ್ಷ ಅವರ ಮದುವೆಯಾಗುತ್ತದೆ ಎಂದುಬಿಟ್ಟರು. ಇದು ಹೇಳುತ್ತಿದ್ದಂತೆಯೇ ಯುವಕರ ಹಾರ್ಟ್​ ಬ್ರೇಕ್​ ಆಗಿ ಹೋಗಿದೆ! ರವಿಚಂದ್ರನ್​ ಹೇಳಿರುವ ಹಿಂದಿನ ಅರ್ಥವೇನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. 

ಅಷ್ಟಕ್ಕೂ 2013ರಲ್ಲಿ ತೆರೆಕಂಡ 'ಬುಲ್‌ಬುಲ್' ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದ ರಚಿತಾ ಕೈಯಲ್ಲಿ ಈಗ ಕೆಲ ಚಿತ್ರಗಳಿವೆ. ಪ್ರಥಮ ಚಿತ್ರ ಬುಲ್​ಬುಲ್​ನಲ್ಲಿಯೇ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು ನಟನೆಯಿಂದ ಮನ ಗೆದ್ದ ಬೆಡಗಿ ಈಕೆ. ಇದರ ಯಶಸ್ಸಿನ ಬೆನ್ನಲ್ಲೇ ಅಂಬರೀಶ್, `ದಿಲ್ ರಂಗೀಲಾ', `ರನ್ನ', `ರಥಾವರ', `ಚಕ್ರವ್ಯೂಹ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಖ್ಯಾತ ಚಿತ್ರನಟರ ಜೊತೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಕನ್ನಡದ ಬಹುಬೇಡಿಕೆಯ ನಟಿಯಾಗಿರೋ ರಚಿತಾ ಅವರಿಗೆ ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌತ್​ ಪ್ರಶಸ್ತಿ ಕೂಡ ಲಭಿಸಿದೆ.

ಈ ವರ್ಷವೇ 'ಅನುಪತಿ' ಆಗಮನ ಎಂದ ಆ್ಯಂಕರ್​ ಅನುಶ್ರೀ: ಭಾವಿ ಗಂಡನ ಬಗ್ಗೆ ನೇರಪ್ರಸಾರದಲ್ಲಿ ಮಾತು...