ಖ್ಯಾತ ಸಂಗೀತ ನಿರ್ದೇಶಕ, ಬಿಗ್‌ ಬಾಸ್‌ ಕನ್ನಡ ಸೀಸನ್‌ 7 ಸ್ಪರ್ಧಿ ವಾಸುಕಿ ವೈಭವ್‌, ಬೃಂದಾ ಅವರು ಈ ಹಿಂದೆ ನಡೆದ ಘಟನೆಯೊಂದನ್ನು ʼಮಜಾ ಟಾಕೀಸ್ʼ‌ ಶೋನಲ್ಲಿ ಮೆಲುಕು ಹಾಕಿದ್ದಾರೆ. 

ವಾಸುಕಿ ವೈಭವ್‌, ಬೃಂದಾ ವಿಕ್ರಮ್‌ ಪ್ರೀತಿಸಿ ಮದುವೆಯಾದವರು. ಇವರು ತಮ್ಮ ಪ್ರೀತಿ ವಿಷಯವನ್ನು ಜಗತ್ತಿಗೆ ಹೇಳುವ ಮುಂಚೆ ಕೆಲವರು ಈ ಜೋಡಿ ಪ್ರೀತಿಸುತ್ತಿದೆ ಎಂದು ತಿಳಿದುಕೊಂಡಿದ್ದರಂತೆ. ಈ ಅಪರೂಪದ ಘಟನೆ ಬಗ್ಗೆ ʼಮಜಾ ಟಾಕೀಸ್ʼ‌ ಶೋನಲ್ಲಿ ವಾಸುಕಿ ವೈಭವ್‌ ಅವರು ಮಾತನಾಡಿದ್ದಾರೆ. 

ʼಪ್ರೇಮಿಗಳ ದಿನʼ
ʼಪ್ರೇಮಿಗಳ ದಿನʼದ ಪ್ರಯುಕ್ತ ವಾಸುಕಿ ವೈಭವ್‌-ಬೃಂದಾ ವಿಕ್ರಮ್‌, ನಾಗಭೂಷಣ್-ಪೂಜಾ ಅವರು ಭಾಗವಹಿಸಿದ್ದರು, ಆ ವೇಳೆ ಬೃಂದಾ ಅವರು ಈ ಹಿಂದೆ ನಡೆದ ಘಟನೆ ಬಗ್ಗೆ ಮಾತನಾಡಿದ್ದಾರೆ.

ಒಂದೇ ಮನೆಯಲ್ಲಿ ಇಬ್ರು ರಕ್ಷಿತಾ; ಅವಳ ಹೆಸರಲ್ಲಿ ಇವಳನ್ನ ಕೂಗ್ಬುಟ್ಟು ಜೀವಂತ ಉಳ್ಕೊಂತಾರಾ ಜೋಗಿ ಪ್ರೇಮ್‌?

ಈ ಹಿಂದೆ ಆಗಿದ್ದೇನು?
“ನಾವು ರೆಸಿಡೆನ್ಶಿಯಲ್‌ ಏರಿಯಾದಲ್ಲಿ ರಸ್ತೆಯಲ್ಲಿ ನಿಂತು ಮಾತನಾಡುತ್ತಿದ್ದೆವು. ನಾವಿಬ್ಬರೂ ರಂಗಭೂಮಿಯಿಂದಲೂ ಸ್ನೇಹಿತರು. ಆಗ ಪೊಲೀಸರೊಬ್ಬರು ಬಂದು ಇಲ್ಯಾಕೆ ಇದ್ದೀರಿ? ಈ ಏರಿಯಾದಲ್ಲಿ ಈ ರೀತಿ ನಿಂತುಕೊಂಡು ಇರಬಾರದು ಹೋಗಿ ಅಂತ ಬೈದರು. ಯಾವಾಗಲೂ ಮೆದು ದನಿಯಲ್ಲೇ ಮಾತನಾಡುತ್ತಿದ್ದ ವಾಸುಕಿ ಫುಲ್‌ ಸೀರಿಯಸ್‌ ಆಗಿ ಜಗಳಕ್ಕೆ ನಿಂತರು” ಎಂದು ಬೃಂದಾ ಹೇಳಿದ್ದಾರೆ.

ವಾಸುಕಿ ವೈಭವ್‌ನ ಕೂಸುಮರಿ ಮಾಡಿದ ಪತ್ನಿ; ಆನಿವರ್ಸರಿ ಫೋಟೋ ವೈರಲ್

ವಾಸುಕಿ ವೈಭವ್‌ ಏನಂದ್ರು? 
ಆಗ ವಾಸುಕಿ ವೈಭವ್‌ ಅವರು “ನಾವು ಎಷ್ಟು ಕ್ಲೋಸ್‌ ಆಗಿದ್ದೀವಿ ಅಂದ್ರೆ ನಾವು ಲವ್ವರ್ಸ್‌ ಅಂತ ಘೋಷಣೆ ಮಾಡೋಕೂ ಮುನ್ನ ಜನರೇ ನಾವು ಲವ್ವರ್ಸ್‌ ಅಂತ ಅಂದುಕೊಂಡಿದ್ದರು. ಪೊಲೀಸರು ಬಂದು ನಾವು ಲವ್ವರ್ಸ್‌ ಅಂತ ಹೇಳಿದಾಗ ಸಿಟ್ಟು ಬಂತು” ಎಂದು ವಾಸುಕಿ ವೈಭವ್‌ ಹೇಳಿದ್ದಾರೆ. 

ಜನಪ್ರಿಯತೆ ಪಡೆದಿರುವ ವಾಸುಕಿ ವೈಭವ್!
ʼರಾಮಾ ರಾಮ ರೇʼ ಹಾಗೂ ʼಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡುʼ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿ ಅದ್ಭುತ ಹಾಡುಗಳನ್ನು ನೀಡಿದ ವಾಸುಕಿ ವೈಭವ್‌ ಅವರು ʼಬಿಗ್‌ ಬಾಸ್‌ ಕನ್ನಡ ಸೀಸನ್‌ʼ ಶೋನಲ್ಲಿ ಭಾಗವಹಿಸಿದ್ದರು. ವಾಸುಕಿ ವೈಭವ್‌ ಅವರ ಆಟ ಅನೇಕರಿಗೆ ಇಷ್ಟ ಆಗಿತ್ತು. ಅದ್ಭುತವಾದ ಧ್ವನಿ, ಸಂಗೀತ ಸಂಯೋಜನೆ ಮೂಲಕ ಇಂದು ವಾಸುಕಿ ವೈಭವ್‌ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. 

ಶೈನ್, ಭೂಮಿ, ಪ್ರಿಯಾಂಕಾ, ವಾಸುಕಿ...ಮತ್ತೆ ಒಂದೆಡೆ ಸೇರಿದ ಬಿಗ್ ಬಾಸ್ 7 ಸ್ಪರ್ಧಿಗಳು!

ಪ್ರೀತಿಸಿ ಮದುವೆಯಾದ್ರು! 
ಬೃಂದಾ ವಿಕ್ರಮ್‌ ಹಾಗೂ ವಾಸುಕಿ ವೈಭವ್‌ ಅವರು ರಂಗಭೂಮಿಯಿಂದಲೂ ಸ್ನೇಹಿತರು. ವಾಸುಕಿ ಅವರ ಕಷ್ಟದ ದಿನಗಳಲ್ಲಿ ಕೂಡ ಬೃಂದಾ ಸಾಥ್‌ ನೀಡಿದ್ದರು. ಈ ಜೋಡಿ ಎಲ್ಲಿಯೂ ಪ್ರೀತಿ ವಿಷಯವನ್ನು ಹೇಳಿಕೊಂಡಿರಲಿಲ್ಲ. ವಾಸುಕಿ ವೈಭವ್‌ ಅವರ ಜೊತೆ ಇನ್ನೂ ಕೆಲ ನಟಿಯರ ಹೆಸರು ಥಳುಕು ಹಾಕಿಕೊಂಡಾಗಲೂ ಕೂಡ ಇವರು ಯಾವುದಕ್ಕೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆ ನಂತರದಲ್ಲಿ ಚಿತ್ರರಂಗದ ಗಣ್ಯರ ಸಾಕ್ಷಿಯಾಗಿ ವಾಸುಕಿ ವೈಭವ್‌, ಬೃಂದಾ ಮದುವೆಯಾಗಿದ್ದಾರೆ. ಬೃಂದಾ ಅವರು ಟೀಚರ್‌ ಆಗಿದ್ದು, ಹಾಡುತ್ತಾರೆ, ಡ್ಯಾನ್ಸ್‌ ಮಾಡುತ್ತಾರೆ, ನಟಿಸುತ್ತಾರೆ. ಒಟ್ಟಿನಲ್ಲಿ ವಾಸುಕಿ, ಬೃಂದಾ ಇವರಿಬ್ಬರು ಪ್ರತಿಭಾವಂತರು. 

ಅಂದಹಾಗೆ‌ ಐದು ವರ್ಷಗಳ ನಂತರದಲ್ಲಿ ʼಮಜಾ ಟಾಕೀಸ್ʼ ಶೋ ಪ್ರಸಾರ ಆಗುತ್ತಿದೆ. ಈ ಬಾರಿ ಶ್ವೇತಾ ಚೆಂಗಪ್ಪ, ಅಪರ್ಣಾ, ಇಂದ್ರಜಿತ್‌ ಲಂಕೇಶ್‌, ರೆಮೋ ಬದಲು ಬೇರೆ ಕಲಾವಿದರಿದ್ದು, ಎಂದಿನಂತೆ ಸೃಜನ್‌ ಲೋಕೇಶ್‌ ಸಾರಥ್ಯವಿದೆ.