ಬಿಗ್‌ಬಾಸ್‌ನಲ್ಲಿ ಫೈನಲಿಸ್ಟ್‌ ಆಗಿದ್ದ ತುಕಾಲಿ ಸಂತೋಷ್‌, ಪತ್ನಿ ಮಾನಸಾಗೆ ಹೊಸ ಮಂಗಳಸೂತ್ರ ಕೊಡಿಸಿದ್ದಾರೆ. ಮಾನಸಾ ಐದನೇ ವಾರದಲ್ಲೇ ಹೊರಬಂದಿದ್ದರು. ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳುತ್ತಿರುವಾಗ ಮಂಗಳಸೂತ್ರದ ಬಗ್ಗೆ ಪಾಪರಾಜಿಗಳು ಕೇಳಿದಾಗ ತಮಾಷೆಯಾಗಿ ಉತ್ತರಿಸಿದ ಸಂತೋಷ್, "ಪ್ರೀತಿ ಕಡಿಮೆ ಆಗುತ್ತೆ, ಗ್ರಾಂ ಹೇಳಲ್ಲ" ಎಂದರು. ಮಾನಸಾ ಬಿಗ್‌ಬಾಸ್‌ನಲ್ಲಿ ಸಜೆಷನ್‌ ಪಾಲಿಸದ್ದೇ ತಪ್ಪಾಯಿತೆಂದಿದ್ದಾರೆ.

'ಬಿಗ್ ಬಾಸ್' ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ತುಕಾಲಿ ಸಂತೋಷ್​ ಸಾಕಷ್ಟು ಫೇಮಸ್​ ಆಗಿದ್ರು, ಜೊತೆಗೆ ಒಂದಿಷ್ಟು ಒಳ್ಳೆಯ ಹೆಸರುಗಳನ್ನೂ ಗಳಿಸಿದ್ದಾರೆ. ಫೈನಲ್​ ತನಕ ಹೋಗಿದ್ದರು. ಆದರೆ ಅವರ ಪತ್ನಿ ಮಾನಸಾ ಐದೇ ವಾರದಲ್ಲಿ ವಾಪಸ್​ ಆಗಿದ್ದರು. ಮಾನಸಾ ಅವರು ಪತಿ ಸಂತೋಷ್​ ರೀತಿಯಲ್ಲಿಯೇ ಅಂತಿಮ ಕ್ಷಣದವರೆಗೂ ಇರುತ್ತಾರೆ ಎಂದೇ ಅವರ ಅಭಿಮಾನಿಗಳು ಆರಂಭದಲ್ಲಿ ಅಂದುಕೊಂಡದ್ದು ಇದೆ. ಆದರೆ ಅವರು ಎಲಿಮಿನೇಟ್​ ಆಗಿ ಬಂದರು. ಅವರ ಮಾತುಗಳೇ ಅವರಿಗೆ ಮುಳುವಾಗಿದ್ದವು. ಇದೇ ಕಾರಣಕ್ಕೆ ಸೋಷಿಯಲ್​ ಮೀಡಿಯಾಗಳಲ್ಲಿಯೂ ಮಾನಸ ಅವರು ಆದಷ್ಟು ಟ್ರೋಲ್​ ಇನ್ಯಾರೂ ಆಗಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಟ್ಟು ಹೊರಕ್ಕೆ ಬಂದರು ಎಂದರೆ ಅವರಿಗೆ ಸಿಗುವಷ್ಟು ರಾಜಮರ್ಯಾದೆಯೇ ಬೇರೆ. ಬಿಗ್​ಬಾಸ್​ಗೆ ಹೋಗುವ ಮೊದಲೇ ಟಿವಿ ಷೋಗಳಿಂದಾಗಿ ತುಕಾಲಿ ಸಂತೋಷ್​ ಫೇಮಸ್​ ಆಗಿದ್ದರು, ಈಗ ಅವರ ಪತ್ನಿ ಮಾನಸ ಅವರೂ ಈಗ ಜೊತೆಯಾಗಿದ್ದಾರೆ. 

ಅಷ್ಟಕ್ಕೂ ಇವರಿಬ್ಬರದ್ದು ಹೇಳಿ ಮಾಡಿಸಿದ ಜೋಡಿ. ಸದಾ ತಮಾಷೆ ಮಾಡುತ್ತಲೇ ಇರುತ್ತಾರೆ? ಸಂತೋಷ್​ ಮತ್ತು ಮಾನಸಾ ಅವರು ಬರುತ್ತಿರುವ ಸಂದರ್ಭದಲ್ಲಿ ಇದೇನಿದು ಎಂದು ಪಾಪರಾಜಿಗಳು ಪ್ರಶ್ನಿಸಿದ್ದಾರೆ. ಈಗ ಪ್ರೀ ವೆಡ್ಡಿಂಗ್​ ಶೂಟ್​ ಮಾಡಿಸಿಕೊಳ್ತಾ ಇದ್ದೇವೆ. ಮದುವೆಗಿಂತ ಮೊದಲು ಮಾಡಿರಲಿಲ್ಲ, ಅದಕ್ಕೇ ಈಗ ಮಾಡಿಸಿಕೊಳ್ತಾ ಇದ್ದೇವೆ ಎಂದು ತಮಾಷೆ ಮಾಡಿದ್ದಾರೆ ಮಾನಸಾ. ಕೊನೆಗೆ ಕ್ಯಾಮೆರಾದ ಕಣ್ಣು ಅವರ ಮಂಗಳಸೂತ್ರದ ಮೇಲೆ ಬಿದ್ದಿದೆ. ಹೊಸ ಮಂಗಳಸೂತ್ರ ಹಾಕಿಕೊಂಡಿದ್ದಾರೆ, ಚಿನ್ನದ್ದಾ ಎಂದು ಪ್ರಶ್ನಿಸಿದ್ದಾರೆ ಪಾಪರಾಜಿಗಳು. ಎಷ್ಟು ಗ್ರಾಂ ಎಂದು ಕೇಳಿದ್ದಾರೆ. ಅದರ ಗಾತ್ರ ನೋಡಿದ್ರೆ ಗೊತ್ತಾಗತ್ತೆ, ಇದು ಭಾರಿ ಪ್ರಮಾಣದ್ದು ಎನ್ನುವುದು.

ಸಂತು ಬಿಟ್ರೆ ದನ-ಕರು ನೋಡ್ಕೊಂಡು ಆರಾಮಾಗಿರ್ತೀನಿ: ಬಿಗ್​ಬಾಸ್​ ಮಾನಸಾ ಮನದ ಮಾತು ಕೇಳಿ

ಆಗ ಮಾನಸಾ ಅವರು, ಎಷ್ಟು ಗ್ರಾಮ್​ದು ಅಂತ ಹೇಳಿ ಎಂದಿದ್ದಾರೆ. ಆದರೆ ಇದಕ್ಕೆ ಜಾಣತನದ ಉತ್ತರ ಕೊಟ್ಟ ತುಕಾಲಿ ಅವರು, ಗ್ರಾಮ್​ ಹೇಳಿದ್ರೆ ಪ್ರೀತಿ ಕಡಿಮೆ ಆಗುತ್ತೆ. ಇದು ಈಗಷ್ಟೇ ಕೊಡಿಸಿರೋದು, ಹೊಚ್ಚ ಹೊಸತು. ಜನ ಏನೂ ಕೊಡ್ಸಿಲ್ಲ ಏನೂ ಕೊಡ್ಸಿಲ್ಲ ಅಂತ ಕೇಳ್ತಾ ಇದ್ರು. ಅದಕ್ಕಾಗಿ ಫೈನಲ್​ ಆಗಿ ಇದನ್ನು ಕೊಡಿಸಿದ್ದೇನೆ. ಗ್ರಾಂ, ಬೆಲೆಯೆಲ್ಲಾ ಹೇಳಲು ಆಗಲ್ಲ, ಪ್ರೀತಿ ಕಡಿಮೆ ಆಗುವುದು ನನಗೆ ಇಷ್ಟ ಇಲ್ಲ ಎಂದು ಕೇಳಿದವರನ್ನೇ ಸುಸ್ತು ಮಾಡಿದ್ದಾರೆ. ಇದರ ವಿಡಿಯೋ ಅನ್ನು ಸಿನೆ ಹಾಟ್​ಸ್ಪಾಟ್​ ಶೇರ್​ ಮಾಡಿಕೊಂಡಿದೆ. ಕೆಜಿ ಇದ್ಯಾ ಕೇಳಿದಾಗ, ಆಕೆಯೇನು ಅಷ್ಟು ದೊಡ್ಡ ಹೊರಲು ಅಂಬಾರಿಯೇ ಎಂದು ಚಟಾಕಿ ಹಾರಿಸಿದ್ದಾರೆ. 

ಈ ಹಿಂದೆ ಸಂದರ್ಶನವೊಂದರಲ್ಲಿ ತುಕಾಲಿ ಸಂತೋಷ್​ ಅವರು ಪತ್ನಿ ಬಗ್ಗೆ ಮಾತನಾಡುತ್ತಾ, ಇಎಂಐ ತೀರಿಸಲು ಬಿಗ್​ಬಾಸ್​ಗೆ ಹೋಗಿದ್ಲು, ಆದರೆ ಐದೇ ವಾರಕ್ಕೆ ವಾಪಸ್​ ಬಂದಳು. ಮುಂದೆ ಸಮಸ್ಯೆ ಇದದ್ದೇ ಅಲ್ವಾ ಎಂದರು ಸಂತೋಷ್​​. ಇದೇ ವೇಳೆ ತಾವು ಬಿಗ್​ಬಾಸ್​ ಒಳಗೆ ಹೋಗುವಾಗ ಸಂತೋಷ್​ ಅವರ ಸಜೆಷನ್​ ತೆಗೆದುಕೊಂಡಿರಲಿಲ್ಲ. ಅದೇ ಮಾಡಿದ ತಪ್ಪು ಎನ್ನಿಸತ್ತೆ. ಅವರ ಹಾಗೆ ನಾನು ಆಗುವುದು ಬೇಡ, ನನ್ನ ಸ್ಟೈಲ್​ನಲ್ಲಿಯೇ ನಾನು ಇರೋಣ ಅಂದುಕೊಂಡೆ. ಸಂತು ಕೂಡ ಹಾಗೇ ಹೇಳಿದ್ರು. ಆದ್ರೆ ಸಜೆಷನ್​ ತಗೋಬಿಕಿತ್ತೇನೋ ಎಂದರು. ಇದೇ ವೇಳೆ, ಬಿಗ್​ಬಾಸ್​ನಿಂದ ಬೇರೆಯವರಿಗೆ ಗೌರವ ಕೊಡಬೇಕು, ಮಾತಿನ ಮೇಲೆ ನಿಗಾ ಇಡಬೇಕು ಎನ್ನುವುದನ್ನು ಕಲಿತೆ. ಯೋಚನೆ ಮಾಡಿ ಮಾತನಾಡಬೇಕು ಎನ್ನುವುದನ್ನು ಬಿಗ್​ಬಾಸ್​ ಕಲಿಸಿತು ಎಂದಿದ್ದರು. ಹಾಗಿದ್ರೆ ಈಗ ಬಹುಶಃ ಇಎಂಐ ತೀರಿರಬೇಕು, ಅದಕ್ಕಾಗಿ ಭರ್ಜರಿ ಮಾಂಗಲ್ಯ ಕೊಡಿಸಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

ಬಿಗ್​ಬಾಸ್​ನಲ್ಲಿ ಸಿಕ್ಕ ಪೇಮೆಂಟ್​ ಎಷ್ಟು? ಮಾಧ್ಯಮದ ಮುಂದೆ ಅಸಮಾಧಾನ ತೋಡಿಕೊಂಡ ಮಾನಸಾ!

YouTube video player