
ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್ಎ ಆಗಬೇಕಿದ್ದವಳು ಜೈಲು ಪಾಲು!
ಅವಳು ಸುಂದರ ನಟಿ, ಮಾಡೆಲ್, ಆದ್ರೆ ಸಿನಿಮಾ ಕ್ಷೇತ್ರದಿಂದ ರಾಜಕೀಯ ರಂಗ ಪ್ರವೇಶ ಮಾಡಿದ್ಲು.. ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ಲು.. ನಾಯಕಿಯಾಗಿ ಬೆಳೆಯುತ್ತಿದ್ದಳು. ಒಮ್ಮೆ ಎಲೆಕ್ಷನ್ಗೂ ನಿಂತು ಸೋತಿದ್ಲು.. ಆದ್ರೆ ಇಷ್ಟನ್ನೇ ಮಾಡಿಕೊಂಡು ಹೋಗಿದ್ದಿದ್ರೆ..
ಅವಳು ಸುಂದರ ನಟಿ, ಮಾಡೆಲ್, ಆದ್ರೆ ಸಿನಿಮಾ ಕ್ಷೇತ್ರದಿಂದ ರಾಜಕೀಯ ರಂಗ ಪ್ರವೇಶ ಮಾಡಿದ್ಲು.. ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ಲು.. ನಾಯಕಿಯಾಗಿ ಬೆಳೆಯುತ್ತಿದ್ದಳು. ಒಮ್ಮೆ ಎಲೆಕ್ಷನ್ಗೂ ನಿಂತು ಸೋತಿದ್ಲು.. ಆದ್ರೆ ಇಷ್ಟನ್ನೇ ಮಾಡಿಕೊಂಡು ಹೋಗಿದ್ದಿದ್ರೆ ಇವತ್ತು ನಾವು ಈಕೆ ಬಗ್ಗೆ ಹೇಳುತ್ತಲೇ ಇರಲಿಲ್ಲ. ಆದ್ರೆ ಮಾಡಬಾರದನ್ನ ಮಾಡಿ ಇವತ್ತು ಜೈಲು ಸೇರಿದ್ದಾಳೆ.. ಅಷ್ಟಕ್ಕೂ ಯಾರು ಈ ನಟಿ..? ಈಕೆ ಮಾಡಿದ ಕೆಲಸವಾದ್ರೂ ಏನು..? ಒಬ್ಬ ಸುಂದರ ನಟಿಯ ಸಿನಿಮಾ ಟು ಜೈಲಿನ ಕಥೆಯೇ ಇವತ್ತಿನ ಎಫ್.ಐ.ಆರ್. ಅಸ್ಗರ್ ಮೇಲೆ ಅಟ್ಯಾಕ್ ಮಾಡಿದ್ದ ಖಾಲೀದ್ ಹಿಂದೆ ಬಿದ್ದ ಪೊಲೀಸರಿಗೆ ಅವನ ಬದಲಿಗೆ ಸಿಕ್ಕಿದ್ದು ಇದೇ ಸವಿತಾ..?
ಹಾಗಾದ್ರೆ ಅಸ್ಗರ್ ಅಟ್ಯಾಕ್ಗೂ ಈ ಸವಿತಾಗೂ ಏನ್ ಸಂಬಂಧ..? ಈಕೆಯೇ ಅಟ್ಯಾಕ್ ಮಾಡಿಸಿದ್ದ..? ಈ ಕೇಸ್ನಲ್ಲಿ ಏನಿವಳ ಪಾತ್ರ..? ಅವರಿಬ್ಬರದ್ದು ವರ್ಷಗಳ ಹಿಂದಿನ ದ್ವೇಷ.. ಸೋಷಿಯಲ್ ಮೀಡಿಯಾಗಳಲ್ಲೂ ಒಬ್ಬರನ್ನೊಬ್ಬರು ಆರೋಪ ಮಾಡಿಕೊಂಡು ವಿಡಿಯೋ ಮಾಡ್ತಿದ್ರು. ತಿಂಗಳ ಹಿಂದಷ್ಟೇ 7 ವರ್ಷದ ಬಾಲಕಿ ಮೇಲೆ 54 ವರ್ಷದವನು ಅತ್ಯಾ*ಚಾರ ವೆಸಗಿದ್ದ ಅನ್ನೋ ಆರೋಪ ಕೇಳಿಬಂದಿತ್ತು.. ಈ ಕೇಸ್ನಲ್ಲಿ ಅಸ್ಗರ್ ಪಂಚಾಯ್ತಿ ಮಾಡಿಸಿದ್ದ ಅಂತ ಖಾಲೀದ್ ಆರೋಪ ಮಾಡಿದ್ದ. ಈ ವಿಚಾರವಾಗಿಯೂ ಆಗಿಂದಾಗೆ ಇಬ್ಬರ ನಡುವೆ ವಾರ್ ನಡೆಯುತ್ತಲೇ ಇತ್ತು.
ಪರಿಸ್ಥಿತಿ ಹೀಗಿರುವಾಗ್ಲೇ ಆವತ್ತು ಖಾಲೀದ್, ಅಸ್ಗರ್ ಮೇಲೆ ಅಟ್ಯಾಕ್ ಮಾಡಿಸಿಯೇಬಿಟ್ಟ.. ಇನ್ನೂ ಸ್ವತಹ ಅಸ್ಗರ್ ಖಾಲೀದೇ ಅಟ್ಯಾಕ್ ಮಾಡಿಸಿದ್ದು ಅಂದ್ರೂ ಪೊಲೀಸರು ಕ್ರಮ ತಗೆದುಕೊಂಡಿರಲಿಲ್ಲ.. ಸತತ 13 ದಿನವಾದ್ರೂ ಆ ಕಿರಾತಕ ಸಿಕ್ಕಿರಲಿಲ್ಲ.. ಎಲ್ಲಿದ್ದಾನೆ ಇವನು ಅಂತ ಹುಡುಕಬೇಕಾದ್ರೇನೇ ಈ ಸವಿತಾ ಅವರಿಗೆಲ್ಲಾ ಆಶ್ರಯ ನೀಡಿದ್ದಾಳೆ ಅನ್ನೋದು ಗೊತ್ತಾಗಿದ್ದು. ಪೊಲೀಸರು ಸದ್ಯಕಂತೂ ಯಾವುದೇ ಮಾಹಿತಿ ಬಿಟ್ಟು ಕೊಡ್ತಿಲ್ಲ.. ಪ್ರಕರಣದಲ್ಲಿ ತಳಕು ಹಾಕಿಕೊಂಡ ಪೋಕ್ಸೋ ಕೇಸ್ ಸತ್ಯಾಸತ್ಯತೆ ಕೂಡ ಗೊತ್ತಾಗಬೇಕಿದೆ. ಆ ರೀತಿ ಘಟನೆ ನಡೆದಿದ್ರೆ ಆರೋಪಿಗಳ ಬಂಧನವಾಗಬೇಕಿದೆ.