ಫಿಕ್ಸ್ ಆಯ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಕಲ್ಯಾಣ; ಮದುವೆಗೆ ಬರ್ತಾರಾ ನಟ ದರ್ಶನ್?

ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿ ಬುಲ್ ಬುಲ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದ ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ಕಳೆದೊಂದು ದಶಕದಿಂದಲೂ ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟಿಮಣಿ. ಈ ಸಾರಿ ತನ್ನ ಬರ್ತ್​ಡೇನ ಫ್ಯಾನ್ಸ್ ಜೊತೆ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ ರಚಿತಾ ರಾಮ್. 

Share this Video
  • FB
  • Linkdin
  • Whatsapp

ಸ್ಯಾಂಡಲ್​ವುಡ್​ನ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಈ ಸಾರಿ ಫ್ಯಾನ್ಸ್ ಜೊತೆಗೆ ಅದ್ದೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಬರ್ತ್​ಡೇ ದಿನವೇ ಒಂದಿಷ್ಟು ಸಿಹಿ ಸುದ್ದಿನೂ ಕೊಟ್ಟಿದ್ದಾರೆ. ಮದುವೆ, ಮನೆ, ದರ್ಶನ್ ಕೇಸು, ರಮ್ಯಾ ರಾಮಾಯಣ.. ಎಲ್ಲದರ ಬಗ್ಗೆನೂ ರಚ್ಚು ರಗಡ್ ಆಗಿ ಹೇಳಿದ್ದೇನು.? ನೋಡೋಣ ಬನ್ನಿ.

ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿ ಬುಲ್ ಬುಲ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಬಂದ ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ಕಳೆದೊಂದು ದಶಕದಿಂದಲೂ ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟಿಮಣಿ. ಈ ಸಾರಿ ತನ್ನ ಬರ್ತ್​ಡೇನ ಫ್ಯಾನ್ಸ್ ಜೊತೆ ಸೆಲೆಬ್ರೇಟ್ ಮಾಡಿಕೊಂಡಿರೋ ರಚಿತಾ, ಬರ್ತ್​ಡೇ ಸಂಭ್ರಮದಲ್ಲೇ ಒಂದು ಬಿಗ್ ನ್ಯೂಸ್​ ಅನ್ನೂ ಕೊಟ್ಟಿದ್ದಾರೆ.

ರಚ್ಚುಗೆ ಎಲ್ಲರೂ ಪದೇ ಪದೇ ಕೇಳುವ ಪ್ರಶ್ನೆ ಅಂದ್ರೆ ಮದ್ವೆ ಯಾವಾಗ ಅಂತ.. ಸದ್ಯ ರಚಿತಾ ಕೂಡ ಮದುವೆಗೆ ಸಿದ್ದವಾಗಿದ್ದು ಅತೀ ಶೀಘ್ರದಲ್ಲಿ ಮದುವೆಯಾಗ್ತಿನಿ ಅಂತ ಘೋಷಣೆ ಮಾಡಿದ್ದಾರೆ.

ಯೆಸ್ ಯಾವ ಡ್ರೀಮ್ ಬಾಯ್ ಕೂಡ ಇಲ್ಲ. ಲವ್ವು ಗಿವ್ವು ನಂಗಾಗಲ್ಲ. ಅಪ್ಪ ಅಮ್ಮನಿಗೆ ಹುಡುಗನ್ನ ಹುಡುಕೋದಕ್ಕೆ ಹೇಳಿದ್ದೀನಿ. ಅವರು ಹುಡುಕಿ ಮದುವೆ ಆಗು ಅಂದುಕೂಡಲೇ ಮದುವೆಯಾಗ್ತೀನಿ ಅಂದಿದ್ದಾರೆ ರಚಿತಾ.

ಇತ್ತೀಚಿಗೆ ರಚಿತಾ ಕೂಲಿ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಕೆಲಸ ಮಾಡಿದ್ದು ಗೊತ್ತೇ ಇದೆ. ವಿಶೇಷ ಅಂದ್ರೆ ತಲೈವಾ , ರಚಿತಾಗೆ ಕರೆ ಮಾಡಿ ಬರ್ತ್​ಡೇ ವಿಶ್ ಮಾಡಿದ್ರಂತೆ.

ಯೆಸ್ ದುನಿಯಾ ವಿಜಯ್ ನಟನೆಯ ಲ್ಯಾಂಡ್​ಲಾರ್ಡ್​ನಲ್ಲಿ ರಚಿತಾ ರಾಮ್ ನಟಿಸ್ತಾ ಇದ್ದು, ರಚ್ಚು ಬರ್ತ್​ಡೇಗೆ ಲ್ಯಾಂಡ್​ಲಾರ್ಡ್ ಗ್ಲಿಂಪ್ಸ್ ರಿವೀಲ್ ಆಗಿದೆ. ಇದ್ರಲ್ಲಿ ರಚಿತಾ ಕ್ಯಾರೆಕ್ಟರ್, ಗೆಟಪ್ ನೋಡಿದವರು ರಚ್ಚುನಾ ಲೇಡಿ ಕಾಟೇರ ಅಂತಿದ್ದಾರೆ.

ಅಸಲಿಗೆ ಈ ಪಾತ್ರ ಬಂದಾಗ ರಚಿತಾ ದರ್ಶನ್ ಸಲಹೆ ಕೇಳಿದ್ರಂತೆ. ದರ್ಶನ್ ಕೂಡ ಈ ಪಾತ್ರವನ್ನ ಕಳೆದುಕೊಳ್ಳಬೇಡ ,. ಮಾಡು ಅಂತ ಹೇಳಿದ್ರಂತೆ. ಲ್ಯಾಂಡ್​ಲಾರ್ಡ್ ಸಿನಿಮಾದಲ್ಲಿ ರಚಿತಾ , 18 ವರ್ಷದ ಹೆಣ್ಣುಮಗಳ ತಾಯಿ ಪಾತ್ರ ಮಾಡ್ತಾ ಇದ್ದಾರೆ.

ದರ್ಶನ್ ಬಗ್ಗೆ ಮಾತನಾಡದೇ , ರಚಿತಾ ಜೊತೆಗಿನ ಮಾತುಕತೆ ಕಂಪ್ಲೀಟ್ ಆಗೋದಿಲ್ಲ. ಯಾಕಂದ್ರೆ ರಚಿತಾ ಪಾಲಿಗೆ ದರ್ಶನ್ ಗಾಡ್​ಫಾದರ್. ಸೀರಿಯಲ್​ನಲ್ಲಿ ನಟಿಸ್ತಾ ಇದ್ದ ರಚಿತಾಗೆ ಬುಲ್ ಬುಲ್ ಸಿನಿಮಾದ ಅವಕಾಶ ಕೊಟ್ಟು ಬಿಗ್ ಸ್ಕ್ರೀನ್​ಗೆ ಕರೆತಂದಿದ್ದೇ ದರ್ಶನ್.

ದರ್ಶನ್ ಜೊತೆಗೆ ರಚಿತಾ ಮೂರು ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಒಂದು ಸಿನಿಮಾದಲ್ಲಿ ಗೆಸ್ಟ್ ಅಪೀಯರೆನ್ಸ್ ಮಾಡಿದ್ದಾರೆ. ಕನ್ನಡ ಸಿನಿಪ್ರಿಯರ ನೆಚ್ಚಿನ ಜೋಡಿ ಇದು.

ದರ್ಶನ್ ಜೈಲಿಗೆ ಹೋದ ಮೇಲೆ , ಜೈಲಿಗೆ ಹೋಗಿ ಭೇಟಿ ಮಾಡಿದ್ದ ರಚಿತಾ ಅವರು ತಪ್ಪು ಮಾಡಿದ್ರೆ ಶಿಕ್ಷೆ ಆಗಲಿ ಆದ್ರೆ ಅವರು ನನ್ನ ಗಾಡ್​ಫಾದರ್ ಅನ್ನೋದನ್ನ ಬದಲು ಮಾಡ್ಲಿಕ್ಕೆ ಆಗಲ್ಲ ಅಂದಿದ್ರು. ಮತ್ತೀಗ ದರ್ಶನ್​ ಜೈಲಿನಲ್ಲಿ ಕಷ್ಟ ಪಡ್ತಾ ಇರೋದ್ರ ಕುರಿತು ಬರ್ತಿರೋ ಸುದ್ದಿಗಳ ಬಗ್ಗೆ ನಂಗೆ ನಂಬಿಕೆ ಇಲ್ಲ ಅಂದಿದ್ದಾರೆ ರಚಿತಾ.

ಒಟ್ನಲ್ಲಿ ಹುಟ್ಟು ಹಬ್ಬದ ಸಂಭ್ರಮ, ಮದುವೆ ತಯಾರಿ ಇದೆಲ್ಲದರ ನಡುವೆಯೂ ರಚಿತಾಗೆ ದರ್ಶನ್ ವಿಚಾರದಲ್ಲಿ ಮಾತ್ರ ನೋವಿದೆ. ಇನ್ನೂ ರಮ್ಯಾ ಮತ್ತು ದರ್ಶನ್ ಫ್ಯಾನ್ಸ್ ನಡುವೆ ನಡೆದ ಜಟಾಪಟಿ ಬಗ್ಗೆನೂ ರಚಿತಾ ಮಾತನಾಡಿದ್ದಾರೆ.

ಖುದ್ದು ತನಗೂ ಕೆಟ್ಟ ಕಮೆಂಟ್, ಮೆಸೇಜ್ ಬರ್ತಾವೆ ಅಂದಿರೋ ರಚಿತಾ ಅವುಗಳನ್ನ ನೆಗ್ಲೆಟ್ ಮಾಡ್ತಿನಿ ಅಂದಿದ್ದಾರೆ. ಬರ್ತ್​ಡೇ ನೆಪದಲ್ಲಿ ರಚ್ಚು ಹಲವು ಹೊಸ ಸುದ್ದಿ ಹಂಚಿಕೊಂಡಿದ್ದಾರೆ. ಇದಿಷ್ಟೇ ಅಲ್ಲ ಸದ್ಯದಲ್ಲೇ ಇದಕ್ಕಿಂತ ದೊಡ್ಡ ಸುದ್ದಿ ಕೊಡ್ತಿನಿ ಇರಿ ಅಂದಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..

Related Video