India's Military Strength: ಭಾರತದ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರ ರಾಶಿ: ರಕ್ಷಣಾ ಕ್ಷೇತ್ರಕ್ಕೆ ಆತ್ಮನಿರ್ಭರ ಶಕ್ತಿ!

ಭಾರತದ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರ ರಾಶಿ: ದೇಶಿ ಕ್ಷಿಪಣಿ ಪರೀಕ್ಷೆಗೆ ಸಿದ್ಧತೆ..!
ರುದ್ರಂ ಅಸ್ತ್ರ.. ಸುಖೋಯ್ ಶಸ್ತ್ರಾಸ್ತ್ರ: ರಕ್ಷಣಾ ಕ್ಷೇತ್ರಕ್ಕೆ ಆತ್ಮನಿರ್ಭರ ಶಕ್ತಿ..!
 

Share this Video
  • FB
  • Linkdin
  • Whatsapp

ನವದೆಹಲಿ (ಮೇ. 09): ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ದೇಶಿ ನಿರ್ಮಿತ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಪ್ರಧಾನಿ ಮೋದಿಯವರು ಆತ್ಮನಿರ್ಭರ ಭಾರತ ಅಡಿಯಲ್ಲಿ ಒತ್ತು ನೀಡಿದ್ದಾರೆ. ಈ ನಿಟ್ಟಿನಲ್ಲಿ ವಿಕಿರಣ ನಿರೋಧಕ ಕ್ಷಿಪಣಿಗಳು, ವಾಯು ದಾಳಿಯ ಕ್ಷಿಪಣಿಗಳು ಸೇರಿದಂತೆ ಅನೇಕ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳ ಸರಣಿ ಪರೀಕ್ಷೆಗೆ ಭಾರತ ಸಿದ್ಧತೆ ನಡೆಸಿದೆ. ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಮತ್ತು ನಿರ್ಮಿಸಿದ ಹಲವು ಶಸ್ತ್ರಗಳ ಪರೀಕ್ಷೆಗೆ ಭಾರತ ಸಿದ್ಧತೆ ನಡೆಸಿದೆ. ಇದರಲ್ಲಿ ಏರ್ ಟು ಏರ್ ಮಿಸೈಲ್, ವಿಕಿರಣ ನಿರೋಧಕ ಕ್ಷಿಪಣಿಯಿಂದ ಹಿಡಿದು ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ಶಸ್ತ್ರಗಳು ಮತ್ತು ದೂರದ ಗೈಡ್ ಬಾಂಬ್‌ಗಳು ಒಳಗೊಂಡಿವೆ.

ಇದನ್ನೂ ಓದಿ:ಆಗ ಅಬ್ದುಲ್ ಕಲಾಂ, ಈಗ ಆರೀಫ್ ಖಾನ್! ಹಿಂದೂ ಹುಲಿಗಳ ಆಡಳಿತದಲ್ಲಿ ಮುಸ್ಲಿಂ ರಾಷ್ಟ್ರಪತಿಗೆ ಮಣೆ?

ಭಾರತೀಯ ರಕ್ಷಣಾ ಇಲಾಖೆಗೆ ಪ್ರಧಾನಿ ಮೋದಿಯವರ ಆತ್ಮ ನಿರ್ಭರ ಭಾರತ್ ಯೋಜನೆ ದೊಡ್ಡ ಶಕ್ತಿಯಾಗಿದೆ. ಕಾರಣ ಇಷ್ಟು ದಿನ ಬಲಿಷ್ಟ ದೇಶಗಳ ಕಡೆಯಿಂದ ಶಸ್ತ್ರಾಸ್ತ್ರಗಳನ್ನ ಆಮದು ಮಾಡಿಕೊಳ್ತಿತ್ತು. ರಷ್ಯ, ಅಮೆರಿಕ, ಚೀನ, ಜಪಾನ್ ದೇಶಗಳು ಭಾರತಕ್ಕೆ ದುಬಾರಿ ದರದಲ್ಲಿ ಶಸ್ತ್ರಾಸ್ತ್ರಗಳನ್ನ ನೀಡುತ್ತಿತ್ತು. ಆದ್ರೆ ಈಗ ಆತ್ಮ ನಿರ್ಭರ ಭಾರತದ ಅಡಿಯಲ್ಲಿ ಸ್ವದೇಶಿ ಕಂಪನಿಗಳಿಗೆ ಒತ್ತು ನೀಡಿದ ಬೆನ್ನಲ್ಲೇ ಈಗ ಬಲಿಷ್ಟ ರಾಷ್ಟ್ರಗಳಿಗೆ ಭಾರತ ವೆಪನ್ಸ್ ಸಪ್ಲೈ ಮಾಡ್ತಿದೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ

Related Video