
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್, ಭಾರತಕ್ಕೆ ಪುಟಿನ್ ಈ ರೀತಿ ಭೇಟಿ ಕೊಟ್ಟು, ಬರೋಬ್ಬರಿ 4 ವರ್ಷಗಳೇ ಕಳೆದು ಹೋಗಿತ್ತು.. ಆದ್ರೆ ಈ ಭೇಟಿ, ಈ ಸಮಯದಲ್ಲಿ ನೀಡಿರೋ ಈ ಭೇಟಿ, ಹೊಸ ಚರಿತ್ರೆಗೆ ಮುನ್ನುಡಿ ಬರೆದಿದೆ.. ಅದೇನು ಅನ್ನೋದರ ಕತೆ, ಇಲ್ಲಿದೆ ನೋಡಿ..
ಪುಟಿನ್ ಭಾರತಕ್ಕೆ ಬಂದಿದ್ದೂ ಒಂದು ಮಹತ್ತರ ಘಟನೆಯಾದ್ರೆ, ಭಾರತ ಪುಟಿನ್ಗೆ ಅದ್ದೂರಿ ಸ್ವಾಗತ ಕೋರಿದ್ದೂ ಕೂಡ, ಐತಿಹಾಸಿಕ ಘಟನೆಯೇ.. ಯಾವುದೋ ಎರಡು ದೇಶಗಳ ನಾಯಕರು, ಭೇಟಿಯಾಗ್ತಾರೆ, ಅವರವರಿಗೆ ಅನುಕೂಲವಾಗುವಂಥಾ ಒಪ್ಪಂದದ ಮಾತಾಡಿಕೊಳ್ತಾರೆ ಅಂದ್ರೆ, ಅದನ್ನ ಅಮೆರಿಕಾದಂಥಾ ಅಮೆರಿಕಾ, ಕಣ್ಣುಗಳನ್ನೇ ಕೆಂಡದುಂಡೆ ಮಾಡ್ಕೊಂಡು ನೋಡ್ತಾ ಇದೆ.. ಪಾಕಿಸ್ತಾನ, ಚೀನಾ ಅಂತೂ, ಯಾವಾಗ ನಮ್ಮ ಗ್ರಹಚಾರ ಆಫೀಷಿಯಲ್ಲಾಗಿ ಹದಗೆಟ್ಟು ಹೋಗುತ್ತೋ ಅಂತ ಟೆನ್ಷನ್ನಲ್ಲಿದಾವೆ.. ಅಷ್ಟಕ್ಕೂ ಪುಟಿನ್ ಭಾರತ ಭೇಟಿಯ ಹಿಂದೆ, ಈ ಪರಿ ಕ್ಯೂರಿಯಾಸಿಟಿ ಹುಟ್ಟಿಕೊಂಡಿದ್ದು ಯಾಕೆ?