Chamarajanagar

Share this Video
  • FB
  • Linkdin
  • Whatsapp

ಬಂಡೀಪುರ ಅರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಪ್ರಯಾಣಿಕರ ಚೇಷ್ಟೆ ಮುಂದುವರಿದಿದೆ. ಕಾಡಾನೆ ಮುಂದೆ ಕೀಟಲೆ ಮಾಡಿದ್ದ ಓರ್ವ ಪ್ರವಾಸಿಗನಿಗೆ ಕಳೆದ ವಾರವಷ್ಟೆ ಅರಣ್ಯ ಇಲಾಖೆ 25 ಸಾವಿರ ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ನೀಡಿತ್ತು. ಆದಾಗ್ಯು ಎಚ್ಚೆತ್ತುಕೊಳ್ಳದ ಕೆಲವು ಪ್ರಯಾಣಿಕರು ಕಾಡಿನ ಮದ್ಯೆ ರಸ್ತೆಯಲ್ಲಿ ವಾಹನಗಳಿಂದ ಇಳಿದು ಒಂಟಿ ಸಲಗದ ಸಮೀಪದಲ್ಲೇ ನಿಂತು ಫೋಟೋ ಮತ್ತು ವೀಡಿಯೋ ಮಾಡುವುದನ್ನು ಮುಂದುವರಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಪ್ರವಾಸಿಗರು ಆನೆ ದಾಳಿಗೆ ಬಲಿಯಾಗುವ ಅಪಾಯವಿದೆ ಎಂದು ಪರಿಸರಪ್ರೇಮಿಗಳು ಎಚ್ಚರಿಸಿದ್ದಾರೆ. ಆನೆ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಇಲ್ಲವೇ ಈ ಮಾರ್ಗದಲ್ಲಿ ಗಸ್ತು ಹೆಚ್ಚಿಸಿ ಕಾಡಾನೆಗೆ ಕೀಟಲೆ ಮಾಡುವ ಪ್ರವಾಸಿಗರ ಮೇಲೆ ಕಠಿಣ ಕ್ರಮ ವಹಿಸುವಂತೆ ಅವರು ಎಚ್ಚರಿಸಿದ್ದಾರೆ..https://media.rhinoaffiliates.com/redirect.aspx?pid=15713&bid=2327&utm_source=display&utm_medium=asianet&utm_campaign=any_kan_2 Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video