Yaduveer Wadiyar: ಯದುವೀರ್ ಸ್ಪರ್ಧೆ..ಅಸಲಿ ಲೆಕ್ಕಾಚಾರ ಏನು? ಒಡೆಯರ್‌ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತಾ?

ಯದುವೀರ್ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತಾ?
ಮೈಸೂರಲ್ಲಿ ಜಾತಿ ಲೆಕ್ಕ ಮೀರಿ ಚುನಾವಣೆ ಗೆಲ್ಲುವ ನಿರೀಕ್ಷೆ
ಕಾಂಗ್ರೆಸ್ ಕಟ್ಟಿ ಹಾಕಲು ಯದುವೀರ್ ಬ್ರಹ್ಮಾಸ್ತ್ರ ಸಿಕ್ತಾ?

Share this Video
  • FB
  • Linkdin
  • Whatsapp

ಮೈಸೂರಲ್ಲಿ ಬಿಜೆಪಿ ಹೈಕಮಾಂಡ್ ಹೊಸ ತಂತ್ರ ರೂಪಿಸಿದ್ದು, ಮೈಸೂರು ಮಹಾರಾಜ ಯದುವೀರ್‌ ಒಡೆಯರ್‌ಗೆ(Yaduveer Wadiyar) ಟಿಕೆಟ್‌ ನೀಡಲಾಗಿದೆ. ಯದುವೀರ್ ಸ್ಪರ್ಧೆಯಿಂದ ಬಿಜೆಪಿಗೆ(BJP) ಲಾಭವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಮೈಸೂರಲ್ಲಿ ಜಾತಿ ಲೆಕ್ಕ ಮೀರಿ ಚುನಾವಣೆ ಗೆಲ್ಲುವ ನಿರೀಕ್ಷೆ ಇದೆ. ಕಾಂಗ್ರೆಸ್(Congress) ಕಟ್ಟಿ ಹಾಕಲು ಬಿಜೆಪಿಗೆ ಯದುವೀರ್ ಬ್ರಹ್ಮಾಸ್ತ್ರ ಸಿಕ್ಕಂತೆ ಆಗಿದೆ. ಬಿಜೆಪಿಗೆ ಮತ್ತೊಂದು ರಾಜವಂಶ ಸೇರ್ಪಡೆಯಾಗಿದ್ದು, ಈಗಾಗಲೇ ದೇಶದ ಹಲವು ರಾಜಮನೆತನಗಳು ಬಿಜೆಪಿ ಜತೆಗಿವೆ. ಮೈಸೂರು(Mysore) ಮನೆತನ ಸೇರ್ಪಡೆ ಮೂಲಕ ಪಕ್ಷದ ಘನತೆ ಹೆಚ್ಚಳವಾಗಿದೆ. ರಾಜಮನೆತನ ಬಗ್ಗೆ ಹಳೇ ಮೈಸೂರು ಜನರಿಗೆ ಗೌರವವಿದ್ದು, ಈ ಗೌರವ ಮತವಾಗಿ ಪರಿವರ್ತನೆಯಾಗುವ ನಿರೀಕ್ಷೆ ಇದೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಚಿತ್ರದುರ್ಗ ಹೀಗೆ ಅನೇಕ ಕ್ಷೇತ್ರಗಳಲ್ಲಿ ಮತ ಪರಿವರ್ತನೆ ಆಗುವ ಸಾಧ್ಯತೆ ಇದೆ. 

ಇದನ್ನೂ ವೀಕ್ಷಿಸಿ: ಎನ್‌ಡಿಎ ಮೈತ್ರಿಕೂಟದ ಭಾಗವಾಗ್ತಾರಾ ಜನಾರ್ದನ ರೆಡ್ಡಿ..? ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುತ್ತಾರಾ ?

Related Video