ಯಶ್ ನೋಡಿದ್ರೆ ಸಿನಿಮಾ ಓಡುತ್ತಾ? ರಾಕಿಭಾಯ್​​ಗೆ ಅಮ್ಮ ಹಾಕಿದ ಸವಾಲ್!

ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್, 'ಕೊತ್ತಲವಾಡಿ' ಚಿತ್ರವನ್ನು ನಿರ್ಮಿಸಿದ್ದಾರೆ. ಯಶ್ ಚಿತ್ರ ನೋಡಿದರೆ ಓಡಲ್ಲ, ಜನ ನೋಡಿದರೆ ಮಾತ್ರ ಹಣ ಬರುತ್ತದೆ ಎಂದು ತಮ್ಮ ಮಗನಿಗೆ ಟಾಂಗ್ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್, ಕೊತ್ತಲವಾಡಿ ಚಿತ್ರವನ್ನು ತಮ್ಮ ಪಿಎ ಪ್ರೊಡಕ್ಷನ್ಸ್ ಬ್ಯಾನರ್‌ನಿಂದ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಪ್ರಚಾರಕ್ಕೆ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಯಶ್ ತಾಯಿಗೆ ಸಹಜವಾಗೇ ನಿಮ್ಮ ಮಗನಿಗೆ ಸಿನಿಮಾ ತೋರಿಸಿದ್ರಾ., ರಾಕಿಂಗ್ ಸ್ಟಾರ್ ನಿಮ್ಮ ಸಿನಿಮಾ ನೋಡಿ ಏನಂದ್ರು ಅನ್ನೋ ಪ್ರಶ್ನೆ ತೂರಿಬಂದಿದೆ. , “ಯಶ್ ನೋಡಿದ್ರೆ ಸಿನಿಮಾ ಓಡಲ್ಲ, ಜನ ನೋಡಿದ್ರೆ ಮಾತ್ರ ಹಣ ಬರುತ್ತದೆ” ಎಂದು ತಮ್ಮ ಮಗನಿಗೆ ಹಾಸ್ಯದಲ್ಲಿ ಟಾಂಗ್ ಕೊಟ್ಟಿದ್ದಾರೆ. “ಅವನ ದಾರಿ ಅವನದು, ನನ್ನ ದಾರಿ ನನ್ನದು” ಎಂದು ಪುಷ್ಪಾ ಹೇಳಿದ್ದಾರೆ. ಅಸಲಿಗೆ ಯಶ್ ತಾಯಿಯ ಮಾತುಗಳನ್ನ ಕೇಳಿದ್ರೆ ಯಶ್ ಫ್ಯಾನ್ಸ್​ಗೆ ಶಾಕ್ ಆಗೋದು ಖಚಿತ. ರಾಕಿಯಷ್ಟೇ ಅಲ್ಲ ರಾಕಿ ಮದರ್ ಕೂಡ ಖಂಡ ತುಂಡ. ನಮ್ಮ ಮನೇಲಿ ಸೆಂಟಿಮೆಂಟ್ ಎಲ್ಲಾ ಇಲ್ಲ ಅಂತಾರೆ ಯಶ್ ತಾಯಿ. ಯಶ್ ತಾಯಿ ತಮ್ಮ ಸಿನಿಮಾಗೆ ಯಶಸ್ಸು ಬಯಸಿ, ಎಲ್ಲ ಅಭಿಮಾನಿಗಳನ್ನು ಚಿತ್ರ ನೋಡಿ ಬೆಂಬಲಿಸಲು ಮನವಿ ಮಾಡಿದ್ದಾರೆ.

Related Video