ಮಕ್ಕಳು ಕೆಟ್ಟ ಚಟಗಳಿಗೆ ದಾಸರಾದಾಗ ಅತೀ ಹೆಚ್ಚು ನೊಂದುಕೊಳ್ಳುವುದು ಪೋಷಕರು. ಮಕ್ಕಳ ಕೆಟ್ಟ ಚಟ ಬಿಡಿಸುವುದಕ್ಕೆ ಪೋಷಕರು ಬುದ್ದಿ ಹೇಳುವ ಪ್ರಯತ್ನ ಮಾಡುತ್ತಾರೆ. ಆದರೆ ಇಲ್ಲೊಂದು ಕಡೆ ಮಕ್ಕಳ ಸರಿ ದಾರಿಗೆ ತರಬೇಕಾದ ತಾಯಿಯೇ ದಾರಿ ತಪ್ಪಿದ್ದಾಳೆ.

ಮಕ್ಕಳು ಕೆಟ್ಟ ಚಟಗಳಿಗೆ ದಾಸರಾದಾಗ ಅತೀ ಹೆಚ್ಚು ನೊಂದುಕೊಳ್ಳುವುದು ಪೋಷಕರು. ಮಕ್ಕಳ ಕೆಟ್ಟ ಚಟ ಬಿಡಿಸುವುದಕ್ಕೆ ಪೋಷಕರು ಬುದ್ದಿ ಹೇಳುವ ಪ್ರಯತ್ನ ಮಾಡುತ್ತಾರೆ. ಕೇಳದೇ ಹೋದಾಗ ಬೈದು ತಿದ್ದಲು ಪ್ರಯತ್ನಿಸುತ್ತಾರೆ. ಆದರೆ ಮಕ್ಕಳ ಸರಿ ದಾರಿಗೆ ತರಬೇಕಾದ ತಾಯಿಯೇ ದಾರಿ ತಪ್ಪಿದ್ದಾಳೆ. ಬರೀ ಅಷ್ಟೇ ಅಲ್ಲ ಬುದ್ಧಿ ಹೇಳುವುದಕ್ಕೆ ಬಂದ ತನ್ನ ಹದಿಹರೆಯದ ಮಗಳನ್ನೇ ಕೊಲೆ ಮಾಡಿದ್ದಾಳೆ. ಅಂದಹಾಗೆ ಈ ಆಘಾತಕಾರಿ ಘಟನೆ ನಡೆದಿರುವುದ ನೆರೆಯ ಪಾಕಿಸ್ತಾನದಲ್ಲಿ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದ ಬಸ್ತಿ ಸೊಕರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

45 ವರ್ಷದ ನಬೀಲಾ ಅಹ್ಮದ್ ಕೊಲೆ ಮಾಡಿದ ತಾಯಿ, 16 ವರ್ಷದ ಪುತ್ರಿ ಆಯೇಷಾ ಕೊಲೆಯಾದವರು. ತಾಯಿ ನಬೀಲಾಗೆ ಸಿಗರೇಟ್ ಎಳೆಯುವ ಚಟವಿತ್ತು. ಆದರೆ ತಾಯಿ ಧೂಮಪಾನ ಮಾಡುವುದು ಮಗಳು ಆಯೇಷಾಗೆ ಇಷ್ಟವಿರಲಿಲ್ಲ, ತಾಯಿ ನಬೀಲಾ ಸಾರ್ವಜನಿಕವಾಗಿ ಸಿಗರೇಟ್ ಎಳೆಯುತ್ತಿದ್ದು, ಇದರಿಂದ ಮಗಳು ಆಯೇಷಾಗೆ ತೀವ್ರ ಮುಜುಗರವಾಗುತ್ತಿತ್ತು. ಹೀಗಾಗಿ ಆಕೆ ತಾಯಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಳು. ಇದೇ ವಿಚಾರಕ್ಕೆ ತಾಯಿ ಹಾಗೂ ಮಗಳ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಅದೇ ರೀತಿ ಶನಿವಾರವೂ ತಾಯಿ ಮಗಳ ಮಧ್ಯೆ ಗಲಾಟೆ ನಡೆದಿದೆ. ತಾಯಿಗೆ ಧೂಮಪಾನ ಮಾಡದಂತೆ ಮಗಳು ಹೇಳಿದ್ದಾಳೆ.

ಇದರಿಂದ ಸಿಟ್ಟಿಗೆದ್ದ ಆಯೇಷಾ, ಕೋಪದಲ್ಲೇ ಮಗಳನ್ನು ಉಸಿರುಕಟ್ಟಿಸಿ ಸಾಯಿಸಿದ್ದಾಳೆ. ಘಟನೆಯ ಬಳಿಕ ತಾಯಿ ನಬೀಲಾ ಪರಾರಿಯಾಗಿದ್ದಾಳೆ. ಆದರೆ ಕುಟುಂಬ ಸದಸ್ಯರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ತಾಯಿ ನಬೀಲಾಳನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಘಟನಾ ಸ್ಥಳದಿಂದ ಸಾಕ್ಷಿ ಸಂಗ್ರಹ ಮಾಡಿದ್ದಾರೆ. ಕೊಲೆಯಾದ ಆಯೇಷಾಳ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಯಝಮನ್ ಟಿಹೆಚ್‌ಕ್ಯೂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ರೋಟಿ ಬಡಿಸಲು ತಡ ಮಾಡಿದಳು ಅಂತ ಬಿಸಿ ತವಾದಿಂದ ಹೆಂಡ್ತಿ, 4 ವರ್ಷದ ಮಗನ ಮೇಲೆ ಹಲ್ಲೆ

ತಾಯಿಯಾದವಳು ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸಬೇಕು. ಆದರೆ ಇಲ್ಲಿ ತಾಯಿಯೇ ಅಡ್ಡದಾರಿ ಹಿಡಿದು ಬುದ್ಧಿ ಹೇಳಲು ಬಂದ ಮಗಳ ಕೊಲೆ ಮಾಡಿದ್ದು, ಮಾತ್ರ ದುರಂತ. ಕೆಲ ದಿನಗಳ ಹಿಂದೆ ಇದೇ ರೀತಿಯ ಮತ್ತೊಂದ ಘಟನೆಯೊಂದರಲ್ಲಿ 17 ವರ್ಷದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಯುವತಿಯನ್ನು ಕೊಲೆ ಮಾಡಲಾಗಿತ್ತು. ಸಾನಾ ಯೂಸುಫ್ ಕೊಲೆಯಾದ ಯುವತಿ. ಟಿಕ್‌ಟಾಕ್ ಇನ್ಸ್ಟಾಗ್ರಾಂ ಮುಂತಾದ ಸೋಶಿಯಲ್ ಮೀಡಿಯಾಗಳಲ್ಲಿ ಈಕೆಗೆ 5 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳಿದ್ದರು.

ಇದನ್ನೂ ಓದಿ: ಈ ರಾಜ್ಯದ ಶೇ.70ರಷ್ಟು ಬಾಂಗ್ಲಾ ಅಕ್ರಮ ವಲಸಿಗರ ಬಳಿ ಇದೆ ವೋಟರ್‌ ಐಡಿ