ಭಾರತ ನಡೆಸಿದ ಆಪರೇಶನ್ ಸಿಂದೂರ್ ಸರಿಯಾಗಿದೆ. ಶುರು ಮಾಡಿದ್ದು ಪಾಕಿಸ್ತಾನ, ಈಗ ಭಾರತ ದಾಳಿ ಮಾಡಿದಾಗ ಶಾಂತಿ ಸಂದೇಶ ನೀಡುವುದು ಎಷ್ಟು ಸರಿ? 26 ಅಮಾಯಕರು ಮೇಲಿನ ದಾಳಿ ವೇಳೆ ಇಲ್ಲದ ಶಾಂತಿ ಈಗ್ಯಾಕೆ? ಭಾರತ ಯುದ್ಧ ಮಾಡುತ್ತಿಲ್ಲ, ತನ್ನ ಮೇಲಾದ ದಾಳಿಗೆ ಪ್ರತಿಕ್ರಿಯೆ ನೀಡಿದೆ. ಇದು ಪಾಕಿಸ್ತಾನಿ ಯುವಕನೊಬ್ಬ ವಿಡಿಯೋ ಮೂಲಕ ಭಾರತಕ್ಕೆ ಬೆಂಬಲ ನೀಡಿ ಹೇಳಿದ ಮಾತು. ಈ ಪಾಕಿಸ್ತಾನಿ ಯುವಕ ಹೇಳಿದ್ದೇನು?
ನವದೆಹಲಿ(ಮೇ.09) ಪೆಹಲ್ಗಾಂ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಉಲ್ಬಣಗೊಂಡಿದೆ. ಅಮಾಯಕರ ಮೇಲಿನ ದಾಳಿಗೆ ಭಾರತ ಆಪರೇಶನ್ ಸಿಂದೂರ್ ಮೂಲಕ ಉತ್ತರ ನೀಡಿದೆ. ಆದರೆ ಭಾರತ ಯುದ್ಧ ಮಾಡುತ್ತಿದೆ ಎಂದು ಪಾಕಿಸ್ತಾನ ಡ್ರೋನ್, ಕ್ಷಿಪಣಿ ದಾಳಿ ನಡೆಸುತ್ತಿದೆ. ಗಡಿಯ ಎಲ್ಲಾ ಭಾಗದಿಂದ ಪಾಕಿಸ್ತಾನ ದಾಳಿ ಮಾಡುತ್ತಿದೆ. ಇದಕ್ಕೆ ಭಾರತ ತಕ್ಕ ಉತ್ತರ ನೀಡಿದೆ. ಯಾವಾಗ ಪಾಕಿಸ್ತಾನಕ್ಕೆ ಹಿನ್ನಡೆಯಾಗಲು ಆರಂಭಗೊಂಡಿತೋ, ಅಲ್ಲಿಂದ ಪಾಕಿಸ್ತಾನ ನಾವು ಶಾಂತಿ ಬಯಸುತ್ತಿದ್ದೇವೆ. ಆದರೆ ಭಾರತ ಪ್ರಚೋದಿಸುತ್ತಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೇಳುತ್ತಿದೆ. ಇದೀಗ ಪಾಕಿಸ್ತಾನದ ಕಪಟ ನಾಟಕವನ್ನು ಪಾಕಿಸ್ತಾನಿ ಯುವಕನೊಬ್ಬ ಬಯಲು ಮಾಡಿದ್ದಾನೆ. ಇಷ್ಟೇ ಅಲ್ಲ ಭಾರತದ ಆಪರೇಶನ್ ಸಿಂದೂರ್‌ಗೆ ಬೆಂಬಲ ನೀಡಿದ್ದಾರೆ.
ವಿಡಿಯೋದಲ್ಲಿ ಯುವಕ ಹೇಳಿದ್ದೇನು?
ಅಭಯ್ಯ್ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಾನು ಪಾಕಿಸ್ತಾನಿ ಎಂದು ಹೇಳಿಕೊಂಡಿರುವ ಯುವಕ ವಿಡಿಯೋ ಸಂದೇಶ ನೀಡಿದ್ದಾನೆ. ವಿಡಿಯೋದ ಆರಂಭದಲ್ಲೇ ಯುವಕ ತಾನು ಪಾಕಿಸ್ತಾನಿ ಎಂದಿದ್ದಾನೆ. ಈ ಮೂಲಕ ಮಹತ್ವದ ಸಂದೇಶವನ್ನು ನೀಡಿದ್ದಾರೆ. ಈ ವಿಡಿಯಯೋದಲ್ಲಿ ಯುವಕ, ಭಾರತಕ್ಕೆ ಪ್ರತಿದಾಳಿ ನಡೆಸುವ ಎಲ್ಲಾ ಹಕ್ಕಿದೆ. ಮೊದಲು ನೀವು(ಪಾಕಿಸ್ತಾನ) ಅವರ ನಾಗರೀಕರ ಮೇಲೆ ದಾಳಿ ಮಾಡಿದ್ದೀರಿ. ಯಾವಗ ಭಾರತ ಪ್ರತಿ ದಾಳಿ ಮಾಡಲು ಆರಂಭಿಸಿದಾಗ ದಿಢೀರ್ ಶಾಂತಿಯ ಮಂತ್ರ ಪಠಿಸುತ್ತಿದ್ದೀರಿ. ಜೊತೆಗೆ ಮಾನವ ಹಕ್ಕುಗಳ ಕುರಿತು ಮಾತಾನಾಡುತ್ತೀರಿ. ಇದು 26 ಅಮಾಯಕರ ಜೀವ ಹೋದಾಗ ಇರಲೇ ಇಲ್ಲ. ಭಾರತ ಪ್ರತಿ ದಾಳಿ ನಡೆಸಲು ಆರಂಭಿಸಿದಾಗ ಈಗ ಸಂತ್ರಸ್ತರ ರೀತಿ ವರ್ತಿಸುತ್ತಿದ್ದೀರಿ. ಯಾರೂ ಕೂಡ ಯುದ್ಧ ಬಯಸಲ್ಲ. ಅತ್ತ ಭಾರತಕ್ಕೂ ಯುದ್ಧ ಬೇಡ, ಇತ್ತ ಪಾಕಿಸ್ತಾನಕ್ಕೂ ಯುದ್ಧ ಬೇಡ. ಆದರೆ ಭಯೋತ್ಪಾದಕತೆಗೆ ಪ್ರೋತ್ಸಾಹ ನೀಡಿದಾಗ, ತಿರುಗೇಟು ಪ್ರತಿದಾಳಿಯಾಗುತ್ತೆ ಅನ್ನೋದು ಖಚಿತ. ನಿಮ್ಮ ಜನರ ಪ್ರಾಣ ಹೋದಾಗ ನಿಮಗೆ ಸುಲಭವಾಗಿ ಶಾಂತಿ ಮಂತ್ರ ಪಠಿಸುತ್ತೀರಿ. ಮತ್ತೊಂದು ಮುಖ್ಯ ವಿಚಾರ ಎಂದರೆ ಭಾರತ ಇದನ್ನು ಶುರು ಮಾಡಿಲ್ಲ. ನೀವು(ಪಾಕಿಸ್ತಾನ) ಆರಂಭಿಸಿದ್ದೀರಿ. ನಿಮ್ಮ ದಾಳಿಗೆ ಭಾರತ ಪ್ರತಿಕ್ರಿಯಿಸಿದೆ. ಇದು ಯುದ್ಧವಲ್ಲ, ಇದು ಜಸ್ಟೀಸ್ ಎಂದು ಪಾಕಿಸ್ತಾನಿ ಎಂದು ಹೇಳಿರುವ ಯುವಕ ವಿಡಿಯೋ ಮೂಲಕ ಸಂದೇಶ ನೀಡಿದ್ದಾನೆ.
ಅಣ್ಣಾ ತುಂಬಾ ಲಾಸ್ ಆಗಿದೆ ಸಾಲ ಕೊಡಿ, ಪಾಕ್ ಮನವಿ ವೈರಲ್ ಬೆನ್ನಲ್ಲೇ ಹ್ಯಾಕ್ ಸಮರ್ಥನೆ
ಗಡಿಯಲ್ಲಿ ಪಾಕಿಸ್ತಾನದ ಆಕ್ರಮಣಕ್ಕೆ ತಿರುಗೇಟು
ಗಡಿಯಲ್ಲಿ ಪಾಕಿಸ್ತಾನ ಸತತ ದಾಳಿ ನಡೆಸುತ್ತಿದೆ. ಭಾರತದ ಹಲವು ನಗರ, ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ದಾಳಿಗೆ ಮುಂದಾಗಿತ್ತು. ಮಿಸೈಲ್ ಹಾಗೂ ಡ್ರೋನ್ ಮೂಲಕ ಭಾರತದ ಮೇಲೆ ದಾಳಿ ನಡೆಸಿತ್ತು.ಆದರೆ ಭಾರತ ತಕ್ಕ ಉತ್ತರ ಕೊಟ್ಟಿದೆ. ಪಾಕಿಸ್ತಾನದ ಫೈಟರ್ ಜೆಟ್ ಹೊಡೆದುರುಳಿಸಿದೆ. ಇನ್ನು ಎಲ್ಲಾ ಮಿಸೈಲ್ ದಾಳಿಗಳನ್ನು ವಿಫಲಗೊಳಿಸಿದೆ. ಡ್ರೋನ್ ದಾಳಿಯನ್ನು ವಿಫಲಗೊಳಿಸಿದೆ. ಸತತ ದಾಳಿಗಳು ವಿಫಲಗೊಂಡಾಗ ಗಡಿಯಲ್ಲಿ ನಾಗರೀಕರ ಗುರಿಯಾಗಿಸಿ ಪಾಕಿಸ್ತಾನ ದಾಳಿ ಮಾಡಿದೆ. ಈ ದಾಳಿಯಲ್ಲಿ ಭಾರತದ 15 ನಾಗರೀಕರು ಮೃತಪಟ್ಟಿದ್ದಾರೆ.
150 ಉಗ್ರರು ಮಟಾಶ್
ಭಾರತ ನಡೆಸಿದ ಆಪರೇಶನ್ ಸಿಂದೂರ್ ದಾಳಿಯಲ್ಲಿ 9 ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ಧ್ವಂಸ ಮಾಡಲಾಗಿತ್ತು. ಪಾಕಿಸ್ತಾನಕ್ಕೆ ಉಗ್ರರ ನೆಲೆಗಳ ಮೇಲೆ ಬಾಂಬ್, ಕ್ಷಿಪಣಿ ದಾಳಿಯಾದಾಗಲೇ ಕಣ್ಣುಬಿಟ್ಟಿದೆ. ಅದಕ್ಕೂ ಮೊದಲು ಭಾರತದ ದಾಳಿಯನ್ನು ಪಾಕಿಸ್ತಾನದ ಯಾವ ರೇಡಾರ್ ಕೂಡ ಪತ್ತೆ ಹಚ್ಚಿಲ್ಲ. ಭಾರತ ಉಗ್ರರ ಮೇಲೆ ನಡೆಸಿದ ದಾಳಿಯಲ್ಲಿ 150ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. 60ಕ್ಕೂ ಹೆಚ್ಚು ಉಗ್ರರು ಗಾಯಗೊಂಡಿದ್ದಾರೆ.
ಗಡಿ ಸಂಘರ್ಷದಿಂದ ಮದುವೆ, ಈವೆಂಟ್‌ನಲ್ಲಿ ಡ್ರೋನ್, ಪಟಾಕಿ ಬ್ಯಾನ್; ಹರ್ಷ ಸಂಘವಿ ಆದೇಶ


