ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌, ಜನಪ್ರಿಯ ಜಾನಪದ ಭಕ್ತಿಗೀತೆ 'ಮಾದೇಶ್ವರ ದಯಬಾರದೆ'ಯನ್ನು ಹಾಡಿ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ಕನ್ನಡೇತರರಾದ ಶಿವಶ್ರೀ, ತಮ್ಮ ಪತಿಯಿಂದಲೇ ಈ ಹಾಡನ್ನು ಕಲಿತು ಸ್ಪಷ್ಟವಾಗಿ ಹಾಡಿರುವುದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು (ಡಿ.16): ಮಲೆ ಮಹದೇಶ್ವರ ಎಂದಾಗ ಯೂಟ್ಯೂಬ್‌ನಲ್ಲಿ 'ಮಾದೇಶ್ವರ ದಯಬಾರದೆ..; ಜಾನಪದ ಶೈಲಿಯ ಭಕ್ತಿಗೀತೆ ಸಖತ್‌ ಫೇವರಿಟ್‌. ಮಳವಳ್ಳಿ ಎಂ ಮಹದೇವಸ್ವಾಮಿ ಹಾಡಿರುವ ಇಲ್ಲಿಯವರೆಗೂ 14 ಮಿಲಿಯನ್‌ ವೀವ್ಸ್‌ ಪಡೆದುಕೊಂಡಿದೆ. ಜಾನಪದ ಶೈಲಿಯಲ್ಲಿರುವ ಈ ಭಕ್ತಿಗೀತೆ ಹಾಡುವುದು ಕೂಡ ಅಷ್ಟು ಸುಲಭವಲ್ಲ. ಮಹದೇಶ್ವರನ ಮುಂದೆ ದೀನನಾಗಿ ಬೇಡಿಕೊಳ್ಳುವ ಗೀತೆ ಇದಾಗಿದ್ದು, ಭಾವಪರವಶರನ್ನಾಗಿ ಮಾಡುತ್ತದೆ. ಈಗ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಇದೇ ಗೀತೆಯನ್ನು ಹಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಶಿವಶ್ರೀ ಸ್ಕಂದಪ್ರಸಾದ್‌ ಕನ್ನಡದವರಲ್ಲ. ಕನ್ನಡದ ಕೆಲವೇ ಕೆಲವು ಗೀತೆಗಳನ್ನು ಹಾಡಿದ್ದ ಶಿವ್ರಶ್ರಿ ಸ್ಕಂದಪ್ರಸಾದ್‌, ಮದುವೆಯ ಬಳಿಕ ಅತ್ಯಂತ ಸ್ಪಷ್ಟವಾಗಿ ಕನ್ನಡ ಮಾತನಾಡೋದನ್ನು ಕಲಿತಿದಿದ್ದಾರೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತಿದೆ ಈ ಗೀತೆ.

ಮಾದೇಶ್ವರ ದಯಬಾರದೆ..ಗೀತೆಯನ್ನು ಹಾಡಿ ಅದನ್ನು ಯೂಟ್ಯೂಬ್‌ನಲ್ಲಿ ಕೆಲ ದಿನಗಳ ಹಿಂದೆ ಅವರು ಅಪ್‌ಲೋಡ್‌ ಮಾಡಿದ್ದಾರೆ. ಹೆಚ್ಚಿನವರು ನೀವು ಇಷ್ಟು ಬೇಗ ಕನ್ನಡದ ಜನಪದ ಭಕ್ತಿ ಗೀತೆ ಹಾಡಲು ಆರಂಭಿಸಿರುವುದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.

ಅದರೊಂದಿಗೆ ವಿವರಗಳನ್ನು ಬರೆದುಕೊಂಡಿರುವ ಶಿವಶ್ರೀ, ತೇಜಸ್ವಿ ಸೂರ್ಯ ಅವರಿಗೆ ಈ ಹಾಡು ಬಹಳ ಇಷ್ಟ. ಅದನ್ನು ಸಾಮಾನ್ಯವಾಗಿ ಹಾಡುತ್ತಲೇ ಇರುತ್ತಾರೆ. ಅದರಿಂದಲೇ ಈ ಹಾಡನ್ನು ಕಲಿತು ಹಾಡಿದ್ದೇನೆ ಎಂದಿದ್ದಾರೆ.

ಗಂಡನಿಂದ ಕಲಿತ ಹಾಡು ಎಂದ ಶಿವ್ರಶ್ರೀ

'ಮಹದೇವಸ್ವಾಮಿ ಅವರ ಈ ಸುಂದರ ಹಾಡನ್ನು ನಾನು ಇತ್ತೀಚೆಗೆ ಕೇಳಿದೆ, ಆಕಸ್ಮಿಕವಾಗಿ ಅಲ್ಲ, ಬದಲಾಗಿ ನನ್ನ ಪತಿಯ ಮೂಲಕ, ಅವರಿಗೆ ಇದು ತುಂಬಾ ಇಷ್ಟ. ಅವರು ಈ ಹಾಡನ್ನು ಎಷ್ಟು ಮುಗ್ಧವಾಗಿ ಮತ್ತು ಭಕ್ತಿಯಿಂದ ಹಾಡುತ್ತಾರೆಂದರೆ, ಈ ಹಾಡು ನಿಧಾನವಾಗಿ ನನ್ನ ಹೃದಯಕ್ಕೂ ಪ್ರವೇಶಿಸಿತು. ಈ ಹಿಂದಿನ ಕಾರ್ತಿಕ ಮಾಸದಲ್ಲಿ ಅವರು ಈ ಹಾಡನ್ನು ನಾನು ಹಲವು ಬಾರಿ ಕೇಳುವಂತೆ ಮಾಡಿದರು, ಮತ್ತು ಪ್ರತಿ ಬಾರಿಯೂ ಅವರ ಧ್ವನಿ ಮತ್ತು ಅದರಲ್ಲಿರುವ ಭಕ್ತಿ ಹಾಡನ್ನು ಹೊಸದಾಗಿ, ಜೀವಂತವಾಗಿ ಮತ್ತು ಭಕ್ತಿಪರವಶವಾಗಿ ತುಂಬಿರುವಂತೆ ಮಾಡಿತು.

ಕೆಲವು ಹಾಡುಗಳು ವಿಶೇಷವಾಗಿರುವುದು ಕೇವಲ ಸಂಗೀತದ ಇಂಪಿನಿಂದಲ್ಲ, ಬದಲಾಗಿ ಅವುಗಳನ್ನು ನಿಮ್ಮ ಜೀವನದಲ್ಲಿ ತರುವ ವ್ಯಕ್ತಿಯಿಂದಲೂ. ನನಗೆ ಈ ಹಾಡು ತೇಜಸ್ವಿ ಸೂರ್ಯ ಅವರ ಭಕ್ತಿಯಿಂದ ಹೆಣೆಯಲ್ಪಟ್ಟಿದೆ.

ಹಾಗಾಗಿ ಇಂದು ನಾನು ನನ್ನದೇ ಆದ ವಿನಮ್ರ ಗಾಯನವನ್ನು ಪ್ರದರ್ಶನವಾಗಿ ಅಲ್ಲ, ಬದಲಾಗಿ ನಮ್ಮ ಮನೆಗಳನ್ನು ರಕ್ಷಿಸುವ, ಮಾರ್ಗದರ್ಶನ ನೀಡುವ ಮತ್ತು ಶಕ್ತಿ ಮತ್ತು ಬೆಳಕಿನಿಂದ ತುಂಬುವ ಮಹಾದೇವಸ್ವಾಮಿಗೆ ಒಂದು ಸಣ್ಣ ಪ್ರಾರ್ಥನೆಯಾಗಿ ಅರ್ಪಿಸುತ್ತಿದ್ದೇನೆ. ನಾನು ಕರೋಕೆ ಟ್ರ್ಯಾಕ್‌ನೊಂದಿಗೆ ಮೂಲ ಹಾಡಿನ ಕವರ್‌ ಮಾಡಲು ಪ್ರಯತ್ನಿಸಿದ್ದೇನೆ. ಈ ಹಾಡು ನಿಮಗೆ ಶಾಂತಿ, ಭಕ್ತಿ ಅಥವಾ ಒಂದು ಕ್ಷಣದ ಮೌನದ ಸಂಪರ್ಕವನ್ನು ತಂದರೆ, ನೀವು ದೇವರೊಂದಿಗೆ ಹೇಗೆ ಸಂಪರ್ಕ ಹೊಂದಿದ್ದೀರಿ ಎಂಬುದನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಳ್ಳಿ' ಎಂದು ಶಿವಶ್ರೀ ಸ್ಕಂದಪ್ರಸಾದ್ ಬರೆದುಕೊಂಡಿದ್ದಾರೆ.

ತೇಜಸ್ವಿ ಸೂರ್ಯ ಪತ್ನಿ ಹಾಡಿಗೆ ಮೆಚ್ಚುಗೆ

ಇದಕ್ಕೆ ಕಾಮೆಂಟ್‌ ಮಾಡಿರುವ ಹಲವರು, 'ಇನ್ನೂ ಹೆಚ್ಚೆಚ್ಚು ಕನ್ನಡದ ಹಾಡುಗಳನ್ನು ಹಾಡಿ ಮೇಡಂ... ನಿಮ್ಮನ್ನು ನಾವೆಲ್ಲ ಕನ್ನಡಿಗರು ಬೆಳೆಸಿ, ಹರಸಿ, ಹಾರೈಸುತ್ತೇವೆ...ನಿಮ್ಮ ಸುಮುಧರ ಕಂಠಕ್ಕೆ ನಾವು ಮನಸೋತಿದ್ದೇವೆ ಮೇಡಂ' ಎಂದು ಬರೆದಿದ್ದಾರೆ. 'ನೀವು ಎಲ್ಲೇ ವಾಸಿಸುತ್ತಿದ್ದರೂ ಸ್ಥಳೀಯ ಭಾಷೆಯನ್ನು ಕಲಿಯಲು ಜನರಿಗೆ ಇವರೇ ಸರಿಯಾದ ಉದಾಹರಣೆ. ಅದು ನಿಮ್ಮ ನಗರ ಅಥವಾ ದೇಶದ ಮೇಲಿನ ಗೌರವದ ವಿಷಯ.ಬೆಂಗಳೂರು ಮತ್ತು ಕರ್ನಾಟಕ ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ನಾನು ಅಲ್ಲಿ ಅಧ್ಯಯನ ಮಾಡಿದೆ, ನನ್ನ ಪತಿ ಬೆಂಗಳೂರಿನವರು, ಮತ್ತು ನನ್ನ ಕುಟುಂಬದಲ್ಲಿ ಕೆಲವು ಕನ್ನಡಿಗರೂ ಇದ್ದಾರೆ. ಶಿವಶ್ರೀಗೆ ಚುನಾವಣೆಗೆ ನಿಲ್ಲಲು ಟಿಕೆಟ್ ನೀಡಿ! ಎಂದು ಮತ್ತೊಬ್ಬರು ಬರೆದಿದ್ದಾರೆ.

Madeshwara Dayabarade | Sivasri Skandaprasad | Mahadevaswamy | Kannada Devotional