ಮುಂಬೈ ಏರ್‌ಪೋರ್ಟ್‌ನಲ್ಲಿ ಮಗಳು ಆರಾಧ್ಯ ಬಚ್ಚನ್‌ಗಾಗಿ ಐಶ್ವರ್ಯಾ ರೈ ಬಚ್ಚನ್ ಕಾಯುತ್ತಿದ್ದ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತಾಯಿ-ಮಗಳ ನಡುವಿನ ಸುಂದರ ಬಾಂಧವ್ಯ ಸೆರೆಯಾಗಿದ್ದು, ನೆಟ್ಟಿಗರ ಮನಗೆದ್ದಿದೆ.

ಐಶ್ವರ್ಯಾ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ನಡುವಿನ ತಾಯಿ-ಮಗಳ ಪ್ರೀತಿಯ ಕ್ಷಣವೊಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡ್ತಿದೆ. ಗ್ಲಾಮರ್, ರೆಡ್ ಕಾರ್ಪೆಟ್ ಎಲ್ಲವನ್ನೂ ಬದಿಗಿಟ್ಟು, ತಾಯಿ-ಮಗಳ ಸಹಜ ಬಾಂಧವ್ಯವನ್ನು ತೋರಿಸುವ ಈ ವಿಡಿಯೋ ನೆಟ್ಟಿಗರ ಮನಸ್ಸು ಗೆದ್ದಿದೆ.

ಒಂದು ಸಾಮಾನ್ಯ ಕ್ಷಣವೇ ವಿಶೇಷವಾಯಿತು!

ಮುಂಬೈ ಏರ್‌ಪೋರ್ಟ್‌ನಲ್ಲಿ ಐಶ್ವರ್ಯಾ ರೈ, ಬೇರೆ ಪೋಷಕರ ಜೊತೆ ತುಂಬಾನೇ ಸಿಂಪಲ್ ಆಗಿ ಕಾಯುತ್ತಿದ್ದರು. ಯಾವುದೇ ಸ್ಟಾರ್‌ ಗತ್ತು, ಗೈರತ್ತು ಇಲ್ಲದೆ, ಬಿಳಿ ಶರ್ಟ್ ಮತ್ತು ಡೆನಿಮ್ ಧರಿಸಿ, ಮಗಳ ಬರುವಿಕೆಗಾಗಿ ಕಾತುರದಿಂದ ಕಾಯುವ ತಾಯಿಯಾಗಿ ಕಾಣಿಸಿಕೊಂಡರು. ಆರಾಧ್ಯ ತನ್ನ ಗ್ರೂಪ್ ಜೊತೆ ಹೊರಬರುತ್ತಿದ್ದಂತೆ, ಐಶ್ವರ್ಯಾ ಮೆಲ್ಲಗೆ ತಮ್ಮ ಫೋನ್ ತೆಗೆದು ಆ ಕ್ಷಣವನ್ನು ಸೆರೆಹಿಡಿಯಲು ಸಿದ್ಧರಾದರು.

View post on Instagram

ಆ ರಿಯಾಕ್ಷನ್‌ಗೆ ಎಲ್ಲರೂ ಫಿದಾ

ಈ ವಿಡಿಯೋದಲ್ಲಿ ಎಲ್ಲರ ಗಮನ ಸೆಳೆದಿದ್ದು ಆರಾಧ್ಯಳ ರಿಯಾಕ್ಷನ್. ತಾಯಿಯನ್ನು ನೋಡಿದ ತಕ್ಷಣ ಆಕೆಯ ಮುಖದಲ್ಲಿ ಅರಳಿದ ಖುಷಿ, ಆ ಕ್ಷಣದ ಸಹಜತೆಯನ್ನು ತೋರಿಸುತ್ತದೆ. ಈ ಸುಂದರ ಕ್ಷಣವನ್ನು ಐಶ್ವರ್ಯಾ ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಅಭಿಮಾನಿಗಳಿಗೆ ಅವರ ಇನ್ನೊಂದು ಮುಖದ ಪರಿಚಯ ಮಾಡಿಕೊಟ್ಟಿದೆ.

ಅಭಿಮಾನಿಗಳಿಗೆ ಇಷ್ಟವಾಯ್ತು ಈ ಸರಳತೆ

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದ ಕೂಡಲೇ ವೈರಲ್ ಆಗಿದೆ. ಐಶ್ವರ್ಯಾ ಅವರ ಸರಳತೆಯನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಅವರನ್ನು 'ಹ್ಯಾಂಡ್ಸ್-ಆನ್ ಮಾಮ್' (ಮಗುವಿನ ಜವಾಬ್ದಾರಿಯನ್ನು ತಾನೇ ನೋಡಿಕೊಳ್ಳುವ ತಾಯಿ) ಎಂದು ಕರೆದರೆ, ಇನ್ನು ಕೆಲವರು ವಿಶ್ವಮಟ್ಟದ ಖ್ಯಾತಿಯ ನಡುವೆಯೂ ಅವರು ಸಾಮಾನ್ಯರಂತೆ ಇರುವುದನ್ನು ಹೊಗಳಿದ್ದಾರೆ.

ಐಶ್ವರ್ಯಾ ಮತ್ತು ಆರಾಧ್ಯ ಆಗಾಗ ಅಂತರಾಷ್ಟ್ರೀಯ ಕಾರ್ಯಕ್ರಮಗಳಿಂದ ಹಿಡಿದು ಫ್ಯಾಮಿಲಿ ಔಟಿಂಗ್‌ಗಳವರೆಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಆದರೆ, ಯಾವುದೇ ಸಿದ್ಧತೆ ಇಲ್ಲದೆ, ಸಹಜವಾಗಿ ಸೆರೆಯಾದ ಇಂತಹ ಭಾವನಾತ್ಮಕ ಕ್ಷಣಗಳು, ಸ್ಟಾರ್‌ಗಿರಿ ಆಚೆಗೂ ಅವರು ಎಲ್ಲರಂತೆ ಒಬ್ಬ ತಾಯಿ-ಮಗಳು ಎಂಬುದನ್ನು ನೆನಪಿಸುತ್ತವೆ.