ಸದ್ಯಕ್ಕೆ ಯಶ್ ಅವರು ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಹಾಗೂ 'ರಾಮಾಯಣ ಪಾರ್ಟ್ 1' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆ ಆಗಲಿವೆ ಎನ್ನಲಾಗುತ್ತಿದೆ. ಹಿಂದಿಯ ರಾಮಾಯಣಸಿನಿಮಾಕ್ಕೆ ಯಶ್ ಅವರು ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.

ಯಶ್ & ಪ್ರಭಾಸ್ ಬಗ್ಗೆ ರಿಷಭ್ ಶೆಟ್ಟಿ ಮಾತು!

ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು (Rishab Shetty) ಸದ್ಯ 'ಕಾಂತಾರ ಚಾಪ್ಟರ್ 1' ಸಿನಿಮಾದ (Kantara Chapter 1) ಮೂಲಕ ಭಾರೀ ಟ್ರೆಂಡಿಂಗ್‌ನಲ್ಲಿ ಇದ್ದಾರೆ. ಈ ಸಿನಿಮಾ ಜಗತ್ತಿನಾದ್ಯಂತ 30 ದೇಶಗಳಲ್ಲಿ 7 ಭಾಷೆಗಳಲ್ಲಿ ಬಿಡುಗಡೆ ಕಂಡು ಸೂಪರ್ ಹಿಟ್ ದಾಖಲಿಸಿದೆ. ಈ ಸಮಯದಲ್ಲಿ ಹಲವು ಮೀಡಿಯಾಗಳಲ್ಲಿ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ಸಂದರ್ಶನಗಳು ಮೂಡಿ ಬರುತ್ತಿವೆ. ಅದರಲ್ಲಿ ಅದೊಂದು ಸಂದರ್ಶನದಲ್ಲಿ ರಿಷಬ್ ಶೆಟ್ಟಿಯವರಿಗೆ ಯಶ್ ಹಾಗೂ ಪ್ರಭಾಸ್ ಬಗ್ಗೆ ಕೇಳಲಾಗಿದೆ. ಹಾಗಿದ್ದರೆ ಅಲ್ಲಿ ಬಂದಿರುವ ಪ್ರಶ್ನೆ ಹಾಗೂ ಉತ್ತರಗಳೇನು?

ಸಂದರ್ಶಕರು 'ನಿಮ್ಮ ಸಿನಿಮಾದಲ್ಲಿ ಯಶ್ (Yash) ಹಾಗೂ ಪ್ರಭಾಸ್ (Prabhas) ನಟಿಸಬಹುದೇ?' ಎಂದು ಪ್ರಶ್ನಿಸಿದ್ದಾರೆ. ಆಗ ರಿಷಬ್ ಶೆಟ್ಟಿಯವರು 'ಈ ಕಾಂತಾರ ಸಿನಿಮಾದಲ್ಲಾ?" ಎಂದು ಅವರನ್ನು ಪ್ರಶ್ನೆ ಕೇಳಿ ಕ್ಲಾರಿಟಿ ಪಡೆದುಕೊಂಡು ಉತ್ತರಿಸಿದ್ದಾರೆ. (ಆಗಿನ್ನೂ ಕಾಂತಾರ ರಿಲೀಸ್ ಆಗಿಲ್ಲದ ಕಾರಣ, 'ಕಾಂತಾರ ಚಾಪ್ಟರ್ 1' ಸಿನಿಮಾದಲ್ಲಿ ಅವರೂ ನಟಿಸಿರಬಹುದು ಎಂದು ಊಹಿಸಬಹುದಿತ್ತು) ಆಗ ರಿಷಬ್ ಅವರಿಗೆ ಸಂದರ್ಶಕರು 'ಕಾಂತಾರದಲ್ಲಿಯೇ ಅಂತಲ್ಲ, ನಿಮ್ಮ ಬೇರೆ ಸಿನಿಮಾಗಳಲ್ಲಿ' ಎಂದಿದ್ದಾರೆ. ಆಗ ರಿಷಬ್ ಅವರು ಆ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

ಅವರೆಲ್ಲಾ ನನಗೆ ಇನ್‌ಸ್ಪಿರೇಶನ್!

'ಗೊತ್ತಿಲ್ಲ ಏನು ಆಗುತ್ತೆ ಅಂತ.. ಅವರೆಲ್ಲಾ (ಯಶ್-ಪ್ರಭಾಸ್) ದೊಡ್ಡ ದೊಡ್ಡ ಸೂಪರ್ ಸ್ಟಾರ್‌ಗಳು. ಅವರು ನನ್ನ ಸಿನಿಮಾದಲ್ಲಿ ನಟಿಸಿದರೆ ನನಗೆ ಖಂಡಿತ ಖುಷಿಯಾಗುತ್ತದೆ. ಅವರೆಲ್ಲಾ ನನಗೆ ಇನ್‌ಸ್ಪಿರೇಶನ್ ಆದಂಥವರು. ಅವರೆಲ್ಲಾ ನನ್ನ ಕೆಲಸವನ್ನು ಪ್ರಶಂಸಿಸುವ ಮೂಲಕ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ನೀಡುತ್ತಾರೆ. ನನ್ನ ಸಿನಿಮಾ ತೆರೆಗೆ ಬಂದಾಗ ಅವರೆಲ್ಲ ಅದನ್ನು ನೋಡಿ ನನಗೆ ಕಾಲ್ ಮಾಡಿ ಅಭಿನಂದನೆ ಸಲ್ಲಿಸುತ್ತಾರೆ. ಅವರೆಲ್ಲರೂ ನನ್ನ ಸಿನಿಉಮಾ ಹಿಂದಿನ ಶಕ್ತಿಯೇ ಆಗಿದ್ದಾರೆ.

ಆದರೆ 'ಕಾಂತಾರ ಚಾಪ್ಟರ್ 1' ಸಿನಿಮಾದಲ್ಲಿ ನನ್ನ ಪಾತ್ರ ಬಿಟ್ಟು ಇನ್ಯಾರೂ ಕಾಮಿಯೋ ಪಾತ್ರವಿಲ್ಲ. ಕಥೆಗೆ ತಕ್ಕಂತೆ ಈ ಸಿನಿಮಾದಲ್ಲಿ ಬೇರೆ ಹೀರೋಗಳ ಪಾತ್ರ ಸೃಷ್ಟಿಯಾಗಿಲ್ಲ. ನನ್ನ ಮುಂಬರುವ ಸಿನಿಮಾಗಳಲ್ಲಿ ಯಶ್ ಹಾಗೂ ಪ್ರಭಾಸ್ ನಟಿಸುತ್ತಾರೋ ಇಲ್ಲವೋ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಅಂಥ ಸೂಪರ್‌ ಸ್ಟಾರ್‌ಗಳು ನನ್ನ ಸಿನಿಮಾದಲ್ಲಿ ನಟಿಸಿದರೆ ನನಗೆ ಇನ್ನೂ ಹೆಚ್ಚಿನ ಪ್ರೇರಣೆ ಸಿಗುತ್ತದೆ' ಎಂದಿದ್ದಾರೆ ರಿಷಬ್ ಶೆಟ್ಟಿ.

ಯಶ್ ಅವರು ಪ್ಯಾನ್ ವರ್ಲ್ಡ್ ಸಿನಿಮಾ!

ಸದ್ಯಕ್ಕೆ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಖ್ಯಾತಿಯ ಯಶ್ ಅವರು ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಹಾಗೂ 'ರಾಮಾಯಣ ಪಾರ್ಟ್ 1' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆ ಆಗಲಿವೆ ಎನ್ನಲಾಗುತ್ತಿದೆ. ಹಿಂದಿಯ ರಾಮಾಯಣಸಿನಿಮಾಕ್ಕೆ ಯಶ್ ಅವರು ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ ಎಂಬುದು ವಿಶೇಷ. ಇದಾದ ಬಳಿಕ ನಟ ಯಶ್ ಅವರು, ತಮಿಳು ನಿರ್ದೇಶಕ ಪಿಎಸ್ ಮಿತ್ರನ್ ಅವರ ನಿರ್ದೇಶನದಲ್ಲಿ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನು ತೆಲುಗು ನಟ, ಡಾರ್ಲಿಂಗ್ ಖ್ಯಾತಿಯ ಪ್ರಭಾಸ್ ಅವರು 'ಕಲ್ಕಿ-2' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಅದೂ ಕೂಡ ಬಿಗ್ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಅಷ್ಟೇ ಅಲ್ಲ, ನಟ ಪ್ರಭಾಸ್ ಅವರು ಇನ್ನೂ ಅನೇಕ ಸಿನಿಮಾಗಳ ಕಥೆ ಒಪ್ಪಿದ್ದು, ಯಾಸ ಸಿನಿಮಾಗೆ ಸಹಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.