'ಸೀತಾರಾಮ'ದಲ್ಲಿ ಸಿಹಿ- ಸುಬ್ಬಿ ಒಟ್ಟಿಗೇ ಕಾಣಿಸಿಕೊಂಡಿದ್ದು ಹೇಗೆ ಗೊತ್ತಾ? ಸಿಹಿ ಪಾತ್ರದಲ್ಲಿ ಕಾಣಿಸಿಕೊಂಡು ಈ ಮತ್ತೊಬ್ಬ ಬಾಲಕಿ ಯಾರು? 

2023ರ ಜುಲೈ 17ರಂದು ಜೀ ಕನ್ನಡದಲ್ಲಿ ಶುರುವಾಗಿದ್ದ ಸೀತಾರಾಮ ಸೀರಿಯಲ್​ ಎರಡು ವರ್ಷ ತುಂಬುವುದರೊಳಗೇ ಮುಗಿಯಲಿದೆ. ಸೀರಿಯಲ್​ನ ಕ್ಲೈಮ್ಯಾಕ್ಸ್​ ಭಾಗ ಶುರುವಾಗಿದೆ. ಇನ್ನೇನು ಭಾರ್ಗವಿಯ ಕಿತಾಪತಿ, ರಾಮ್​ಗೆ ಗೊತ್ತಾಗುವುದು ಒಂದು ಬಾಕಿ ಇದೆ. ಸುಬ್ಬಿಗೆ ಇದಾಗಲೇ ಸಿಹಿಯಿಂದ ಎಲ್ಲಾ ಗೊತ್ತಾಗಿರುವ ಹಿನ್ನೆಲೆಯಲ್ಲಿ, ಅವಳೇ ಸತ್ಯ ಹೇಳುವ ಹಾಗಿದೆ. ಭಾರ್ಗವಿಯ ಎಲ್ಲಾ ವಿಷಯಗಳೂ ಅಶೋಕ್​ಗೆ ಗೊತ್ತಿರುವ ಕಾರಣ, ಆತನೂ ವಿಷಯ ಹೇಳಿದರೆ ಮುಗಿಯಿತು. ಆದರೂ ಸ್ವಲ್ಪ ನಿಧಾನ ಮಾಡಿ, ಹಂತಹಂತವಾಗಿ ಸೀರಿಯಲ್​ ಮುಗಿಸುತ್ತಿದ್ದಾರೆ. ಇದಾಗಲೇ ಸೀತಾಳಿಗೆ ಸಿಹಿ ಕಾಣಿಸಿಕೊಂಡು ಆಗಿದೆ. ಇದರಿಂದ ಸುಬ್ಬಿಗೆ ಸಿಹಿಯೇ ಎಲ್ಲಾ ಮಾರ್ಗದರ್ಶನ ಮಾಡುತ್ತಿರುವ ವಿಷಯ ಸೀತಾಳಿಗೆ ತಿಳಿದಿದೆ. ಅಷ್ಟೇ ಅಲ್ಲದೇ, ಸಿಹಿ ಮತ್ತು ಸುಬ್ಬಿ ಅವಳಿ ಜವಳಿ ಎನ್ನುವ ವಿಷಯವೂ ತಿಳಿದಿದೆ. ಸೀತಾಳನ್ನು ಕಟ್ಟಿಹಾಕಿ ಭಾರ್ಗವಿ ಆಕೆಯನ್ನು ಸಾಯಿಸಲು ಹೋಗಿರುವ ಕ್ಲೈಮ್ಯಾಕ್ಸ್​ ಪ್ರೊಮೋ ಅನ್ನು ಇದಾಗಲೇ ಜೀ ಕನ್ನಡ ಬಿಡುಗಡೆ ಮಾಡಿದೆ. ಅಲ್ಲಿ ಪೊಲೀಸರು ಬಂದು ಭಾರ್ಗವಿಯನ್ನು ಅರೆಸ್ಟ್​ ಮಾಡಬಹುದು, ಅಲ್ಲಿಗೆ ಸೀರಿಯಲ್​ ದಿ ಎಂಡ್​ ಮಾಡುತ್ತಾರೆ ಎನ್ನುವ ಸಂದೇಹವಿದೆ.

ಆದರೆ, ಇದರ ನಡುವೆಯೇ, ಸಿಹಿ ಮತ್ತು ಸುಬ್ಬಿಯನ್ನು ಒಟ್ಟಿಗೇ ಸೀರಿಯಲ್​ನಲ್ಲಿ ಹಲವು ಬಾರಿ ತೋರಿಸಿರುವುದು ವೀಕ್ಷಕರಿಗೆ ಅಚ್ಚರಿ ಉಂಟು ಮಾಡಿದೆ. ಅಷ್ಟಕ್ಕೂ ಡಬಲ್​ ರೋಲ್​ ಮಾಡುವುದು ಹೊಸ ವಿಷಯವೇನಲ್ಲ. ಯಾವುದೇ ತಂತ್ರಜ್ಞಾನ ಇಲ್ಲದ ಸಂದರ್ಭದಲ್ಲಿಯೇ ಬ್ಲ್ಯಾಕ್​ ಆ್ಯಂಡ್​ ವೈಟ್​ ಯುಗದಲ್ಲಿಯೇ ಡಬಲ್​ ರೋಲ್​ ಸಿನಿಮಾಗಳಲ್ಲಿ ಮಾಡಿರುವ ಉದಾಹರಣೆ ಸಾಕಷ್ಟಿವೆ. ಇದೀಗ ಕೆಲವು ಸೀರಿಯಲ್​ಗಳಲ್ಲಿಯೂ ಮಾಡಿರುವ ಕಾರಣ, ಅದೇನೂ ದೊಡ್ಡ ವಿಷಯ ಅಲ್ಲ ಎನ್ನುವುದು ನಿಜವೇ. ಎರಡು ಪಾತ್ರಗಳನ್ನು ಬೇರೆ ಬೇರೆಯಾಗಿ ಶೂಟಿಂಗ್​ ಮಾಡಿ ನಂತರ ಆ ಕ್ಲಿಪ್​ಗಳನ್ನು ಒಟ್ಟಿಗೇ ಜೋಡಿಸಿ ತೋರಿಸುವುದು ಸಾಮಾನ್ಯವೇ. ಆದರೆ ಇಲ್ಲಿ ಸಿಹಿ ಮತ್ತು ಸುಬ್ಬಿಯನ್ನು ಒಟ್ಟಿಗೇ ತೋರಿಸಿದ್ದ ಸಂದರ್ಭದಲ್ಲ ಸಿಹಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಬಾಲಕಿಯೇ ಬೇರೆಯವಳು!

ಹೌದು. ಸುಬ್ಬಿಯ ರೋಲ್​ ಬಂದಾಗ, ಸಿಹಿ ಅಲ್ಲಿಯೇ ನಿಂತಿರುವಂತೆ ತೋರಿಸಲಾಗಿದೆ. ಆ ಸಮಯದಲ್ಲಿ ಸಿಹಿಯನ್ನು ಹಿಂಬದಿಯಿಂದಷ್ಟೇ ತೋರಿಸಲಾಗಿದೆ. ಆದರೆ ಇದೀಗ ಆ ಬಾಲಕಿಯ ಮುಖ ರಿವೀಲ್​ ಮಾಡಲಾಗಿದೆ. ನೋಡಲು ಸೇಮ್​ ಸಿಹಿ ಮತ್ತು ಸುಬ್ಬಿ ರೋಲ್​ ಮಾಡಿರುವ ಪುಟಾಣಿ ರಿತು ಸಿಂಗ್​ ರೀತಿಯೇ ಕಾಣಿಸುತ್ತಾಳೆ ಈ ಬಾಲಕಿ. ಆಕೆಯನ್ನು ಸಿಹಿಯ ಆತ್ಮದಂತೆಯೇ ಬಿಳಿಯ ಡ್ರೆಸ್​ನಲ್ಲಿ ತೋರಿಸಿರುವ ಕಾರಣ, ರಿತು ಸಿಂಗ್​ ರೀತಿಯೇ ಕಾಣಿಸುತ್ತಿದ್ದಳು. ಆದರೆ ನಿಜವಾಗಿಯೂ ರಿತು ಸಿಂಗ್​ ಮತ್ತು ಈ ಪುಟಾಣಿಯ ನೋಟದಲ್ಲಿ ಸಾಮ್ಯತೆ ಇರುವುದನ್ನು ನೋಡಬಹುದಾಗಿದೆ.

ಲಕ್ಷ್ಯ ಬಬ್ಲಿ ಎನ್ನುವ ಇನ್​ಸ್ಟಾಗ್ರಾಮ್​ನಲ್ಲಿ ಈ ಬಾಲಕಿಯ ವಿಡಿಯೋ ಶೇರ್​ ಮಾಡಲಾಗಿದೆ. ಇವಳ ಜೊತೆ ಸಿಹಿ ಪಾತ್ರಧಾರಿ ರಿತು ಸಿಂಗ್​ ಕೂಡ ಡಾನ್ಸ್​ ಮಾಡಿದ್ದಾಳೆ. ಈ ಬಾಲಕಿಯ ಬಗ್ಗೆ ಹೆಚ್ಚು ವಿಷಯ ಗೊತ್ತಾಗದಿದ್ದರೂ, ಇಬ್ಬರೂ ಒಂದೇ ರೀತಿ ಕಾಣಿಸುತ್ತಿರುವ ಕಾರಣ ನಿಜವಾಗಿಯೂ ಅವಳಿಜವಳಿನಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಮೇಕಪ್​ ಒಂದೇ ರೀತಿ ಮಾಡಿರುವ ಹಿನ್ನೆಲೆಯಲ್ಲಿ ಹಾಗೂ ಹೈಟ್​-ವೇಟ್​ ಸೇಮ್​ ಇರುವ ಕಾರಣ ಒಂದೇ ರೀತಿ ಕಾಣಿಸುತ್ತಿದ್ದಾರೆ ಅಷ್ಟೇ. ಅಂದಹಾಗೆ ರಿತು ಸಿಂಗ್​ ಕುರಿತು ಹೇಳುವುದಾದರೆ, ಈಕೆ ನೇಪಾಳ ಮೂಲದವಳು. ತಾಯಿ ಜೊತೆಗೆ ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ತಂದೆ ಬಿಟ್ಟು ಹೋಗಿರುವ ಕಾರಣ ಅಮ್ಮನೇ ಈಕೆಯ ಪ್ರಪಂಚ. ಈ ಹಿಂದೆ ರಿಯಾಲಿಟಿ ಷೋನಲ್ಲಿ ಇವರ ಅಮ್ಮ ಗೀತಾ, ನಾನು ಇವಳಿಗೆ ಅಮ್ಮ ಅಲ್ಲ, ಇವಳೇ ನನ್ನ ಅಮ್ಮ ಎಂದುಹೇಳಿದ್ದು. ನಾನು ಊಟ ಮಾಡಿಲ್ಲ ಅಂದ್ರೆ ರಿತು ಯಾಕೆ ಊಟ ಮಾಡಿಲ್ಲ ಅಂತ ಕೇಳ್ತಾಳೆ. ಮಕ್ಕಳನ್ನು ತಾಯಿ ಕೇರ್ ಮಾಡಬೇಕು, ಆದರೆ ನನ್ನ ಮಗಳು ನನ್ನನ್ನು ಕೇರ್ ಮಾಡ್ತಾಳೆ, ನನಗೆ ಕನ್ನಡ ಬರೋದಿಲ್ಲ. ನೇಪಾಳದಲ್ಲಿ ಕೂಡ ಜೀ ಕನ್ನಡ ವಾಹಿನಿ ನೋಡ್ತಾರೆ. ಅವರು ರಿತು ನೋಡಿ ಹೊಗಳ್ತಾರೆ. ರಿತು ತಂದೆಗೂ ಕೂಡ ಮಗಳು ಏನು ಅಂತ ಗೊತ್ತಾಗಬೇಕು ಅಂತ ಜನರು ಹೇಳ್ತಾರೆ ಗೀತಾ ಹೇಳಿದ್ದರು.

View post on Instagram