- Home
- Entertainment
- Cine World
- ಧುರಂಧರದಲ್ಲಿ ರಣವೀರ್ ಲುಕ್ ಬದಲಿಸಿದ ಮಾಜಿ ಮಹಿಳಾ ಟೆಕ್ಕಿ, ಯಾರೀಕೆ ಪ್ರೀತಿಶೀಲ್? ದಿನವೊಂದಕ್ಕೆ ಎಷ್ಟು ವೇತನ??
ಧುರಂಧರದಲ್ಲಿ ರಣವೀರ್ ಲುಕ್ ಬದಲಿಸಿದ ಮಾಜಿ ಮಹಿಳಾ ಟೆಕ್ಕಿ, ಯಾರೀಕೆ ಪ್ರೀತಿಶೀಲ್? ದಿನವೊಂದಕ್ಕೆ ಎಷ್ಟು ವೇತನ??
ಬಾಲಿವುಡ್‌ಗೆ ಹೊಸ ಹುರುಪು ತಂದಿರುವ 'ಧುರಂಧರ್' ಚಿತ್ರದಲ್ಲಿ ರಣವೀರ್ ಸಿಂಗ್, ಹಮ್ಜಾ ಅಲಿ ಮಜಾರಿ ಎಂಬ ಗೂಢಚಾರನಾಗಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಮೇಕಪ್ ಕಲಾವಿದೆ ಪ್ರೀತಿಶೀಲ್ ಸಿಂಗ್ ಅವರು, ರಣವೀರ್‌ರ ಹಿಂದಿನ ಖಿಲ್ಜಿ ಪಾತ್ರಕ್ಕಿಂತ ಸಂಪೂರ್ಣ ಭಿನ್ನವಾದ ನೋಟ ಸೃಷ್ಟಿಸಿದ್ದಾರೆ.

ಹಮ್ಜಾ ಪಾತ್ರವು ನಿಜ ಜೀವನದ ಪಾತ್ರ
ಬಾಲಿವುಡ್ ಗೆ ಈ ವರ್ಷ ಅಕ್ಷರಶಃ ಬರಗಾಲ ಬಂದಂತಹ ವಾತಾವರಣ ಇತ್ತು. ಎಷ್ಟೇ ಚಿತ್ರಗಳು ಬಂದರೂ ಹಿಟ್ ಅನ್ನೋ ಮಾತು ಇರಲೇ ಇಲ್ಲ. ಇದರ ಜೊತೆಗೆ ಬಾಲಿವುಡ್ ಗೆ ಹೊಡೆತ ಕೊಟ್ಟಿದ್ದು ದಕ್ಷಿಣ ಭಾರತದ ಸಿನೆಮಾಗಳು. ಆದರೆ ವರ್ಷಾಂತ್ಯ ಇದೇ ಬಾಲಿವುಡ್‌ಗೆ ಹೊಸ ಹುಮ್ಮಸ್ಸು ಬಂದಿದೆ. ಅದಕ್ಕೆ ಕಾರಣ ಧುರಂಧರ್. ಸದ್ಯ ನಾಗಾಲೋಟದಿಂದ ಓಡುತ್ತಿರುವ ಸಿನೆಮಾ. ಈ ಚಿತ್ರದಲ್ಲಿ ನಟ ರಣವೀರ್ ಸಿಂಗ್ ಹಮ್ಜಾ ಅಲಿ ಮಜಾರಿ ಎಂಬ ಗೂಢಚಾರನ ಪಾತ್ರವನ್ನು ನಿರ್ವಹಿಸುತ್ತಿದ್ದು, ಇದುವರೆಗಿನ ಅವರ ಪಾತ್ರಗಳಿಗೆ ಹೋಲಿಸಿದರೆ ಇದು ಸಂಪೂರ್ಣ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಈ ಹಿಂದೆ ‘ಪದ್ಮಾವತ್’ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಎಂಬ ಕ್ರೂರ ಮತ್ತು ಭವ್ಯ ಪಾತ್ರದಲ್ಲಿ ರಣವೀರ್ ಸಿಂಗ್ ಮೆಚ್ಚುಗೆ ಪಡೆದಿದ್ದರು. ಆದರೆ ‘ಧುರಂಧರ್’ನಲ್ಲಿ ಅವರ ಪಾತ್ರವನ್ನು ಚಿತ್ರತಂಡ ಸಂಪೂರ್ಣವಾಗಿ ಬೇರೆ ಆಯಾಮದಲ್ಲಿ ರೂಪಿಸಿದ್ದು, ಹಮ್ಜಾ ಪಾತ್ರವು ನಿಜ ಜೀವನದ ಪಾತ್ರ, ಒರಟು ಮತ್ತು ನೆಲಮಟ್ಟದ ವ್ಯಕ್ತಿತ್ವವನ್ನು ಹೊಂದಿದೆ.
ಪ್ರೀತಿಶೀಲ್ ಸಿಂಗ್ ಯಾರು?
ರಣವೀರ್ ಸಿಂಗ್ ಅವರ ಈ ಹೊಸ ಅವತಾರವನ್ನು ರೂಪಿಸಿದವರು ಖ್ಯಾತ ಮೇಕಪ್ ಮತ್ತು ಪ್ರಾಸ್ಥೆಟಿಕ್ಸ್ ಕಲಾವಿದೆ ಪ್ರೀತಿಶೀಲ್ ಸಿಂಗ್. ಭಾರತೀಯ ಚಿತ್ರೋದ್ಯಮದಲ್ಲಿ ಅತ್ಯಂತ ಗೌರವ ಪಡೆದ ಮೇಕ್‌ಅಪ್ ಆರ್ಟ್ಇಸ್ಟ್, ಪದ್ಮಾವತ್, ಬಾಜಿರಾವ್ ಮಸ್ತಾನಿ ಮತ್ತು 83 ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ತಮ್ಮ ಅದ್ಭುತ ಕೌಶಲ್ಯವನ್ನು ತೋರಿ ಹೆಸರುವಾಸಿಯಾಗಿದ್ದಾರೆ. ಪಾತ್ರದ ಆಳ ಮತ್ತು ವಾಸ್ತವತೆಯನ್ನು ಹಿಡಿದುಕೊಳ್ಳುವಲ್ಲಿ ಪ್ರೀತಿಶೀಲ್ ಅವರ ಕೆಲಸ ಅತ್ಯಂತ ಸೂಕ್ಷ್ಮ ಮತ್ತು ಶ್ರಮದಾಯಕವಾಗಿದ್ದು, ನಟ ತನ್ನ ಪಾತ್ರದಲ್ಲಿ ಸಂಪೂರ್ಣವಾಗಿ ತಲ್ಲೀನವಾಗಲು ಪ್ರೀತಿಶೀಲ್ ಸಿಂಗ್ ಕೊಡುಗೆ ಕೂಡ ಅತ್ಯಂತ ಹೆಚ್ಚು.
ಹಮ್ಜಾ ಅಲಿ ಮಜಾರಿಯ ಪಾತ್ರ ಹೇಗೆ ರೂಪುಗೊಂಡಿತು?
ಹಮ್ಜಾ ಪಾತ್ರದಾರಿಯನ್ನು ವಿನ್ಯಾಸಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ ಎಂದು ಪ್ರೀತಿಶೀಲ್ ಸಿಂಗ್ ತಿಳಿಸಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಮತ್ತು ಹಮ್ಜಾ ಇಬ್ಬರಲ್ಲೂ ಉದ್ದ ಕೂದಲು ಹಾಗೂ ಕೆಲವೊಂದು ದೇಹದ ಲಕ್ಷಣಗಳಲ್ಲಿ ಸಾಮ್ಯತೆ ಇದ್ದರೂ, ಈ ಎರಡು ಪಾತ್ರಗಳನ್ನು ಸಂಪೂರ್ಣವಾಗಿ ವಿಭಿನ್ನವಾಗಿ ತೋರಿಸುವುದು ದೊಡ್ಡ ಸವಾಲಾಗಿತ್ತು ಎನ್ನುತ್ತಾರೆ.
ಕೂದಲಿನ ವಿನ್ಯಾಸ
ಪ್ರೀತಿಶೀಲ್ ಅವರ ಪ್ರಕಾರ, ಕೂದಲಿನ ವಿನ್ಯಾಸವೇ ಈ ರೂಪಾಂತರದ ಪ್ರಮುಖ ಅಂಶವಾಗಿತ್ತು. ಕೂದಲು ಮತ್ತು ಸೂಕ್ಷ್ಮ ವಿಚಾರಗಳಿಗೆ ವಿಶೇಷ ಒತ್ತು ಕೊಡಲಾಯ್ತು. ಖಿಲ್ಜಿ ಪಾತ್ರದ ಭವ್ಯತೆ ಮತ್ತು ಆರ್ಭಟಕ್ಕೆ ವಿರುದ್ಧವಾಗಿ, ಹಮ್ಜಾ ಪಾತ್ರವನ್ನು ಒರಟು, ಅಸಂಸ್ಕೃತ ಮತ್ತು ನಿಜ ಜೀವನದ ವ್ಯಕ್ತಿಯಂತೆ ಚಿತ್ರಿಸಲಾಗಿದೆ. ಅಸ್ತವ್ಯಸ್ತಗೊಂಡ, ಜಿಡ್ಡಿನ ಹಾಗೂ ಕೆಲವೊಮ್ಮೆ ಸಡಿಲವಾಗಿರುವ ಕೂದಲು. ಗೂಢಚಾರನ ಕಠಿಣ ಜೀವನವನ್ನು ಪ್ರತಿಬಿಂಬಿಸುವ ರಫ್ಫು ತ್ವಚಾ ವಿನ್ಯಾಸ. ನಸುಕಂದು ಮಚ್ಚೆಗಳು ಮತ್ತು ಆಳವಾದ ಚರ್ಮದ ಬಣ್ಣ. ಕೂದಲು ಮತ್ತು ಮುಖದ ವಿನ್ಯಾಸದಲ್ಲಿ ಬದಲಾವಣೆ. ಈ ಎಲ್ಲ ಅಂಶಗಳು ಹಮ್ಜಾ ಪಾತ್ರವು ಜನಸಾಮಾನ್ಯರ ನಡುವೆ ಮಿಶ್ರಣವಾಗಿ ಬದುಕುವ ಗೂಢಚಾರನಾಗಿರುವುದನ್ನು ಬಿಂಬಿಸುತ್ತವೆ.
ರೂಪಾಂತರದ ಹಿಂದೆ ಇರುವ ಸಮಯ ಮತ್ತು ಶ್ರಮ
ಹಮ್ಜಾ ಅಲಿ ಮಜಾರಿಯ ಲುಕ್ ಅನ್ನು ರೂಪಿಸುವ ಪ್ರಕ್ರಿಯೆಗೆ ತುಂಬಾ ಸಮಯ ತೆಗೆದುಕೊಳ್ಳಲಾಗಿತ್ತು. ಪ್ರತಿ ಮೇಕಪ್ ಸೆಷನ್ ದೃಶ್ಯದ ಅವಶ್ಯಕತೆಯಂತೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯುತ್ತಿತ್ತು. ಕೆಲ ಸಂದರ್ಭಗಳಲ್ಲಿ ಪಾತ್ರದ ಮನೋಭಾವ ಮತ್ತು ಕಥೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ವಿಗ್‌ಗಳು ಹಾಗೂ ಎಕ್ಸ್‌ಟೆನ್ಸ್ ಬಳಸಲಾಗಿತ್ತು.
ಖಿಲ್ಜಿ ಮತ್ತು ಹಮ್ಜಾ ಎರಡು ವಿಭಿನ್ನ ವ್ಯಕ್ತಿತ್ವಗಳು
ಈ ಸಂಪೂರ್ಣ ರೂಪಾಂತರ ಪ್ರಕ್ರಿಯೆಯ ಫಲವಾಗಿ, ಹಮ್ಜಾ ಅಲಿ ಮಜಾರಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ಇಬ್ಬರೂ ಒಂದೇ ನಟನ ಪಾತ್ರಗಳೆಂಬುದನ್ನು ನಂಬಲಾಗದ ಮಟ್ಟಿಗೆ ವಿಭಿನ್ನವಾಗಿ ಕಾಣಿಸುತ್ತಾರೆ. ಹಮ್ಜಾ ಪಾತ್ರವು ರಣವೀರ್ ಸಿಂಗ್ ಅವರ ಅಭಿನಯ ಸಾಮರ್ಥ್ಯ ಮತ್ತು ಪಾತ್ರದೊಳಗೆ ತಲೆಮುಗಿದು ಕೆಲಸ ಮಾಡುವ ಬದ್ಧತೆಯ ಪ್ರತಿಬಿಂಬವಾಗಿದೆ. ಈ ಹೊಸ ಅವತಾರವು ರಣವೀರ್ ಸಿಂಗ್ ಅವರನ್ನು ಮತ್ತೊಮ್ಮೆ ಬಾಲಿವುಡ್‌ನ ಅತ್ಯಂತ ಶ್ರಮಶೀಲ ಮತ್ತು ಪ್ರಯೋಗಾತ್ಮಕ ನಟರಲ್ಲಿ ಒಬ್ಬರೆಂದು ಸಾಬೀತುಪಡಿಸುತ್ತದೆ.
ಪ್ರೀತಿ ಶೀಲ್ ನೆಟ್‌ವರ್ತ್
ಪ್ರೀತಿಶೀಲ್ ಇದಕ್ಕೂ ಮುನ್ನ ಓರ್ವ ಟೆಕ್ಕಿ ಆಗಿದ್ದರು. ಬಳಿಕ ಲಾಸ್ ಏಂಜಲೀಸ್‌ನ ಸಿನಿಮಾ ಮೇಕಪ್ ಶಾಲೆಯಲ್ಲಿ ಆರು ತಿಂಗಳ ಕೋರ್ಸ್ ಮುಗಿಸಿ ಭಾರತಕ್ಕೆ ಬಂದರು. ಬಳಿಕ ಗಂಡನ ಜೊತೆಗೆ ಸೇರಿ ಡಾ ಮೇಕಪ್ ಲ್ಯಾಬ್ ಎಂಬ ಕಂಪನಿ ತೆರೆದಿದ್ದಾರೆ. ಸದ್ಯ ಕಡಿಮೆ ಎಂದರೂ ತಿಂಗಳಿಗೆ 5 ಲಕ್ಷಕ್ಕೂ ಹೆಚ್ಚು ದುಡಿಯುತ್ತಾರೆಂದು ವರದಿ ಹೇಳಿದೆ. ಒಂದು ಪ್ರಾಜೆಕ್ಟ್ ಗೆ ಕನಿಷ್ಟ 8 ರಿಂದ 10 ಲಕ್ಷ ಚಾರ್ಜ್ ಮಾಡುತ್ತಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

