- Home
- Entertainment
- Cine World
- 'ಮಲಯಾಳಿ ಅಂದಿದಕ್ಕೆ ಸಿಟ್ಟಾಗಿರಲಿಲ್ಲ; ಆದ್ರೆ, ಆವತ್ತು ಏನಾಯ್ತು? ಹಳೆಯ ಶಾಕಿಂಗ್ ಘಟನೆ ಹೇಳಿ ಅತ್ತುಬಿಟ್ಟ ಸಾಯಿ ಪಲ್ಲವಿ!
'ಮಲಯಾಳಿ ಅಂದಿದಕ್ಕೆ ಸಿಟ್ಟಾಗಿರಲಿಲ್ಲ; ಆದ್ರೆ, ಆವತ್ತು ಏನಾಯ್ತು? ಹಳೆಯ ಶಾಕಿಂಗ್ ಘಟನೆ ಹೇಳಿ ಅತ್ತುಬಿಟ್ಟ ಸಾಯಿ ಪಲ್ಲವಿ!
ಸದ್ಯ 'ರಾಮಾಯಣ' ಸಿನಿಮಾ ಮೂಲಕ ಸುದ್ದಿಯಲ್ಲಿರುವ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಅವರು ಹಳೆಯ ಶಾಕಿಂಗ್ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. 4 ವರ್ಷಗಳ ಹಿಂದೆ ನಡೆದ ಈ ಕೆಟ್ಟ ಘಟನೆಯನ್ನು ನಟಿ ಸಾಯಿ ಪಲ್ಲವಿ ಹೀಗೆ ಹೇಳಿದ್ದಾರೆ. ಅದೇನು ನೋಡಿ..

ಸದ್ಯ 'ರಾಮಾಯಣ' ಸಿನಿಮಾ ಮೂಲಕ ಸುದ್ದಿಯಲ್ಲಿರುವ ಭಾರತದ ಸ್ಟಾರ್ ನಟಿ ಸಾಯಿ ಪಲ್ಲವಿ (Sai Pallavi) ಅವರು ಹಳೆಯ ಶಾಕಿಂಗ್ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. 4 ವರ್ಷಗಳ ಹಿಂದೆ ನಡೆದ ಈ ಕೆಟ್ಟ ಘಟನೆಯನ್ನು ನಟಿ ಸಾಯಿ ಪಲ್ಲವಿ ಹೀಗೆ ಹೇಳಿದ್ದಾರೆ.
'ಸುಮಾರು ನಾಲ್ಕು ವರ್ಷಗಳ ಹಿಂದೆ ನಾನೊಂದು ಪ್ರೆಸ್ಮೀಟ್ನಲ್ಲಿ ಭಾಗಿಯಾಗಿದ್ದೆ. ಅಲ್ಲಿ ರಿಪೋರ್ಟರ್ ಒಬ್ಬರು ನನಗೆ- ನೀವು ಮಲಯಾಳಂ ನಟನಟಿಯರು ತೆಲುಗು ಭಾಷೆಯನ್ನು ಅದು ಹೇಗೆ ಅಷ್ಟೊಂದು ಫ್ಲೂಯೆಂಟ್ ಆಗಿ ಮಾತನ್ನಾಡುತ್ತೀರಿ?- ಎಂದು ಕೇಳಿದರು. ಅದಕ್ಕೆ ನಾನು, 'ನಾನು ತಮಿಳು ಮೂಲದವಳು, ಮಲಯಾಳಂ ಅಲ್ಲ' ಎಂದು ಸಹಜವಾಗಿ ಸತ್ಯವನ್ನು ಹೇಳಿದ್ದೆ.
ಅದಾದ 2 ವರ್ಷದ ಬಳಿಕ, ಪತ್ರಿಕೆಯೊಂದರ ಹೆಡ್ಲೈನ್ನಲ್ಲಿ- ಮಲಯಾಳಿ ಎಂದು ಕರೆದಿದ್ದಕ್ಕೆ ನಟಿ ಸಾಯಿ ಪಲ್ಲವಿ ಕೋಪಗೊಂಡಿದ್ದಾರೆ, ತಾವು ಮಲಯಾಳಂ ನಟಿ ಅಲ್ಲ' ಎಂದಿದ್ದಾರೆ ಎಂದು ಬರೆಯಲಾಗಿತ್ತು. ಅದನ್ನು ನೋಡಿ ನನಗೆ ತುಂಬಾ ಬೇಸರವಾಯ್ತು.
ಆದಾದ ಬಳಿಕ, ಒಮ್ಮೆ ನಾನು ಏರ್ಪೋರ್ಟ್ನಲ್ಲಿ ಇದ್ದಾಗ ಮಹಿಳೆಯೊಬ್ಬರು ಬಂದು ನನ್ನ ಜೊತೆ ಮಲಯಾಳಂನಲ್ಲಿ ಮಾತನ್ನಾಡತೊಡಗಿದರು. ಸ್ವಲ್ಪ ಹೊತ್ತಿ ಬಳಿಕ ಅವರು, ಅಯ್ಯೋ ನಾನು ನಿಮ್ಮ ಜೊತೆ ಮಲಯಾಳಂನಲ್ಲಿ ಮಾತನ್ನಾಡಿದರೆ ನಿಮಗೆ ಕೋಪ ಬರಬಹುದು' ಎಂದು ಹೇಳಿದರು.
ಅದಕ್ಕೆ ನಾನು, 'ಅಯ್ಯೋ ಹಾಗೇನಿಲ್ಲ.. ನಾನು ಯಾವತ್ತೂ ಹಾಗೆ ಹೇಳಿಲ್ಲ' ಎಂದು ಹೇಳಿದೆನಾದರೂ ಅದನ್ನು ಅವರು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎನ್ನಬಹುದು. ಈ ಎಲ್ಲ ಘಟನೆಗಳು ನನ್ನ ಜೀವನದಲ್ಲಿ ಬಹಳಷ್ಟು ಶಾಕ್ ಮೂಡಿಸಿವೆ.
ಪ್ರೆಸ್ಮೀಟ್ನಲ್ಲಿ ನನಗೆ ಕೇಳಿದ ಪ್ರಶ್ನೆ-'ಮಲಯಾಳಂ ಕಲಾವಿದರು ತೆಲುಗು ಬಾಷೆಯನ್ನು ಹೇಗೆ ನಿರರ್ಗಳವಾಗಿ ಮಾತನ್ನಾಡುತ್ತೀರಿ' ಎಂದಿತ್ತು. ನಾನು ಅದಕ್ಕೆ 'ನನ್ನ ಮಾತೃಭಾಷೆ ತಮಿಳು, ಮಲಯಾಳಂ ಅಲ್ಲ' ಎಂದು ಸಹಜವಾಗಿ ಉತ್ತರಿಸಿದ್ದೆ. ಅದರ ಅರ್ಥ ನಾನು 'ಮಲಯಾಳಂನವಳು ಅಲ್ಲ ಎಂದರ್ಥವಲ್ಲ, ನನಗೆ ಮಲಯಾಳಿ ಎಂದರೆ ಕೋಪವೇನೂ ಇಲ್ಲ.. ನಾನು ಒಬ್ಬಳು ಕಲಾವಿದೆಯಾಗಿ ಸೌತ್-ನಾರ್ಥ ಎಂಬ ಬೇಧವಿಲ್ಲದೇ ಎಲ್ಲಾ ಕಡೆ ಸಲ್ಲುವವಳು.
ಅದು ನನ್ನ ಭಾಷೆಯಲ್ಲ, ಇದು ನನ್ನ ಭಾಷೆಯಲ್ಲ ಎಂದು ಯಾವತ್ತೂ ಹೇಳೋದಿಲ್ಲ. ಆದರೆ, ನಾನು ಹುಟ್ಟಿ ಬೆಳೆದಿದ್ದು ತಮಿಳುನಾಡಿನ ಕೊಯಮುತ್ತೂರ್ನಲ್ಲಿ. ಹೀಗಾಗಿ ನನ್ನ ಮಾತೃಭಾಷೆ ತಮಿಳು ಎಂಬುದಷ್ಟೇ ನನ್ನ ಹೇಳಿಕೆ' ಎಂದು ಸಾಯಿ ಪಲ್ಲವಿ ನಡೆದ ಹಳೆಯ ಘಟನೆಯನ್ನು ನೆನಪಿಸಿಕೊಂಡು ಹೇಳಿದ್ದಾರೆ. ಅದೀಗ ಸಖತ್ ವೈರಲ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

