- Home
- Sports
- Cricket
- ಹೋದ ಜನ್ಮದಲ್ಲಿ ಆ ವ್ಯಕ್ತಿಯಾಗಿದ್ದಕ್ಕೆ ಇಂದು ಇಷ್ಟು ಯಶಸ್ಸು ಪಡೆದಿರೋ Virat Kohli; ಸತ್ಯ ಬಯಲು!
ಹೋದ ಜನ್ಮದಲ್ಲಿ ಆ ವ್ಯಕ್ತಿಯಾಗಿದ್ದಕ್ಕೆ ಇಂದು ಇಷ್ಟು ಯಶಸ್ಸು ಪಡೆದಿರೋ Virat Kohli; ಸತ್ಯ ಬಯಲು!
ಕ್ರಿಕೆಟ್ ಎಂಬ ಯುದ್ಧಕ್ಕಿಳಿದರೆ ವಿರಾಟ್ ಕೊಹ್ಲಿ ಅವರು ರನ್‌ಗಳ ಸುರಿಮಳೆ ಸುರಿಸುತ್ತಾರೆ. ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮ್ಯಾನ್‌ಗಳಲ್ಲಿ ಇವರು ಒಬ್ಬರು. ಹೀಗಿರುವಾಗ ವಿರಾಟ್ ಕೊಹ್ಲಿಯವರ ಹಿಂದಿನ ಜನ್ಮದ ಬಗ್ಗೆ ತಿಳಿಯಲು ಅನೇಕರಿಗೆ ಇಷ್ಟ ಇರುವುದು.

ಈ ಬಗ್ಗೆ the mystic journey podcast ಎಂಬ ಯುಟ್ಯೂಬ್ ಚಾನೆಲ್‌ಗೆ ನೀಡಿದ ಒಂದು ಸಂದರ್ಶನವೊಂದರಲ್ಲಿ ಸಂಜೀವ್ ಮಲಿಕ್ ಅವರು ಮಾತನಾಡಿದ್ದಾರೆ.
ಒಂದು ಜನ್ಮದಲ್ಲಿ ವಿರಾಟ್ ಕೊಹ್ಲಿ ಅವರು ಗ್ರೀಕ್‌ನಲ್ಲಿ ಜನಿಸಿದ್ದರು. ಆ ಜನ್ಮದಲ್ಲಿ ಅವರು ಒಬ್ಬ ಯೋಧರಾಗಿದ್ದರು. ಅವರು ಒಬ್ಬ ರಾಜನ ಸೇನಾಪತಿಯಾಗಿದ್ದರು. "ಏನೇ ಆಗಲಿ, ನಾನು ನನ್ನ ಮಾತನ್ನು ಹೇಳಬೇಕೆಂದರೆ ಹೇಳುತ್ತೇನೆ" ಎಂದು ತಮ್ಮ ಮಾತನ್ನು ಧೈರ್ಯಶಾಲಿಯಾಗು ಹೇಳಿಕೊಂಡು ಎಲ್ಲರ ಮಧ್ಯೆ ಗುರುತಿಸಿಕೊಂಡಿದ್ದರು.
ಒಮ್ಮೆ ಅವರ ರಾಜ ತಪ್ಪು ನಿರ್ಧಾರ ತೆಗೆದುಕೊಂಡಿದ್ದರು, ಅದರಿಂದ ಜನರಿಗೆ ತುಂಬಾ ಹಾನಿಯಾಯಿತು. ಇವರು ಜನರ ಹಕ್ಕುಗಳನ್ನು ಕಾಪಾಡಲು ರಾಜನ ವಿರುದ್ಧ ತೀವ್ರವಾಗಿ ವಿರೋಧಿಸಿದರು. ಜನರು ರಾಜನಿಗಿಂತ ಇವರಿಗೆ ಹೆಚ್ಚಿನ ಮಹತ್ವ ನೀಡತೊಡಗಿದರು.
ಇದಾದ ನಂತರದ ಜನ್ಮದಲ್ಲಿ ಇವರು ರಾಜಸ್ಥಾನದ ಯಾವುದೋ ಒಂದು ಸಣ್ಣ ಪ್ರದೇಶದ ರಾಜರಾಗಿದ್ದರು. ಆ ಸಮಯದಲ್ಲಿ ಇವರು ಕ್ರೀಡೆಗಳನ್ನು ತುಂಬಾ ಪ್ರೋತ್ಸಾಹಿಸಿದರು.
ಈ ಎಲ್ಲಾ ವಿಷಯಗಳನ್ನು ಸಂಪರ್ಕಿಸಿದರೆ, ಈಗ ಈ ಜನ್ಮದಲ್ಲಿ ಇವರಿಗೆ ಪ್ರಸಿದ್ಧಿಯಾಗುವುದು ಅವರ ವಿಧಿಯಲ್ಲೇ ಬರೆದಿತ್ತು, ಏಕೆಂದರೆ ಇವರು ಈಗಾಗಲೇ ತುಂಬಾ ಸಕಾರಾತ್ಮಕ ಕೆಲಸಗಳನ್ನು ಮಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

