- Home
- Sports
- Cricket
- ಲಖನೌ ಸ್ಪಿನ್ನರ್ ದಿಗ್ವೀಶ್ ರಾಠಿ ಸಂಬಳ 30 ಲಕ್ಷ: 3 ಸಲ ಫೈನ್ ಕಟ್ಟಿದ ಮೇಲೆ ಉಳಿದಿದ್ದು ಬರೀ ಇಷ್ಟೇನಾ?
ಲಖನೌ ಸ್ಪಿನ್ನರ್ ದಿಗ್ವೀಶ್ ರಾಠಿ ಸಂಬಳ 30 ಲಕ್ಷ: 3 ಸಲ ಫೈನ್ ಕಟ್ಟಿದ ಮೇಲೆ ಉಳಿದಿದ್ದು ಬರೀ ಇಷ್ಟೇನಾ?
ಬೆಂಗಳೂರು: ಲಖನೌ ಸೂಪರ್ ಜೈಂಟ್ಸ್ ಸ್ಪಿನ್ನರ್ ದ್ವಿಗ್ವೇಶ್ ರಾಠಿಗೆ ಇದೀಗ ಐಪಿಎಲ್ ಆರ್ಗನೈಸಿಂಗ್ ಕಮಿಟಿ ಮತ್ತೊಮ್ಮೆ ಶಾಕ್ ನೀಡಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದಕ್ಕಾಗಿ ಮತ್ತೆ ದಂಡ ಹಾಗೂ ನಿಷೇಧ ವಿಧಿಸಿದೆ. 30 ಬೆಲೆಯ ರಾಠಿ ಪೆನಾಲ್ಟಿ ಕಟ್ಟಿದ ಬಳಿಕ ಅವರ ಖಾತೆಯಲ್ಲಿ ಉಳಿಯುವ ಮೊತ್ತ ಎಷ್ಟು ನೋಡೋಣ ಬನ್ನಿ

ಲಖನೌ ಸೂಪರ್ ಜೈಂಟ್ಸ್ ಸ್ಪಿನ್ನರ್ ದಿಗ್ವೇಶ್ ರಾಠಿ ತಮ್ಮ ಬೌಲಿಂಗ್‌ಗಿಂತ ಹೆಚ್ಚು ಗಮನ ಸೆಳೆದಿದ್ದು ತಮ್ಮ ನೋಟ್‌ಬುಕ್ ಸೆಲಿಬ್ರೇಷನ್ ಮೂಲಕ. ಈ ಸೆಲಿಬ್ರೇಷನ್ ಮುಂದೆ ರಾಠಿ ಅವರ ಕ್ರಿಕೆಟ್ ಸಾಧನೆ ಮಸುಕಾಗುವಂತೆ ಮಾಡಿ ಬಿಟ್ಟಿತು.
ಅತಿಯಾದ ಸೆಲಿಬ್ರೇಷನ್ ಹಾಗೂ ವಿಕೆಟ್ ಕಬಳಿಸಿದ ಬಳಿಕ ಎದುರಾಳಿ ಬ್ಯಾಟರ್‌ಗಳನ್ನು ಕೆಣಕುವ ಸ್ವಭಾವದಿಂದಲೇ ದಿಗ್ವೇಶ್ ರಾಠಿ ಒಂದಲ್ಲಾ ಎರಡಲ್ಲ ಬರೋಬ್ಬರಿ ಮೂರು ಬಾರಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿ ಭಾರೀ ಬೆಲೆ ತೆತ್ತಿದ್ದಾರೆ.
ಇದೀಗ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ವಿಕೆಟ್ ಕಬಳಿಸಿ, ಅತಿರೇಕದ ನೋಟ್‌ಬುಕ್ ಸೆಲಿಬ್ರೇಷನ್ ಮಾಡಿದ ತಪ್ಪಿಗೆ ರಾಠಿ ಪಂದ್ಯದ ಸಂಭಾವನೆಯ 50% ದಂಡ ಹಾಗೂ ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಒಳಗಾಗಿದ್ದಾರೆ.
ಅಂದಹಾಗೆ ದಿಗ್ವೇಶ್ ರಾಠಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎದುರು ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿ ದಂಡ ತೆತ್ತಿದ್ದರು. ಹೀಗಿದ್ದೂ ರಾಠಿ ಬುದ್ದಿ ಕಲಿತಂತೆ ಇಲ್ಲ.
ಇಷ್ಟೆಲ್ಲಾ ದಂಡ ಕಟ್ಟಿದ ಬಳಿಕ ದಿಗ್ವೇಶ್ ರಾಠಿ ಅಕೌಂಟ್‌ನಲ್ಲಿ ಉಳಿಯುವ ಹಣ ಎಷ್ಟು ಎನ್ನುವ ಕುತೂಹಲ ನಿಮಗೂ ಕಾಡುತ್ತಿರಬಹುದು ಅಲ್ಲವೇ? ಬನ್ನಿ ನಾವಿಂದು ಎಳೆಎಳೆಯಾಗಿ ಈ ವಿಚಾರವನ್ನು ನಿಮ್ಮ ಮುಂದಿಡುತ್ತೇವೆ ನೋಡಿ.
ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿನಲ್ಲಿ ದಿಗ್ವೇಶ್ ರಾಠಿಗೆ 30 ಲಕ್ಷ ರುಪಾಯಿ ನೀಡಿ ಖರೀದಿಸಿತ್ತು. ಈ 30 ಲಕ್ಷ ರುಪಾಯಿಗೆ ಸರ್ಕಾರಿ ಟ್ಯಾಕ್ಸ್ 30% ಅಪ್ಲೆ ಆಗಲಿದ್ದು, ಅಲ್ಲಿ 9 ಲಕ್ಷ ರುಪಾಯಿ ಕಡಿತವಾಗಲಿದೆ.
ಇನ್ನು ಪಂಜಾಬ್ ಎದುರು ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಪಂದ್ಯದ ಸಂಭಾವನೆಯ 25% ದಂಡ ವಿಧಿಸಲಾಗಿತ್ತು. ಅದರರ್ಥ 1.85 ಪೆನಾಲ್ಟಿ ಕಟ್ಟಿದ್ದರು. ಇನ್ನು ಇದಾದ ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಎದುರು ಪಂದ್ಯದ ಸಂಭಾವನೆಯ 50% ದಂಡ ವಿಧಿಸಿಕೊಂಡಿದ್ದರು. ಅಂದರೆ 7.5 ಲಕ್ಷ ರುಪಾಯಿ ದಂಡ ತೆತ್ತಿದ್ದಾರೆ.
ಅಂದರೆ ಸರ್ಕಾರಿ ಟ್ಯಾಕ್ಸ್ ಕಳೆದು ಉಳಿದ 21 ಲಕ್ಷ ರುಪಾಯಿನಲ್ಲಿ ದಿಗ್ವೇಶ್ ರಾಠಿ 9.37 ಲಕ್ಷ ರುಪಾಯಿಗಳನ್ನು ದಂಡದ ರೂಪದಲ್ಲಿಯೇ ಕಟ್ಟಿದ್ದಾರೆ. ಹೀಗಾಗಿ ದಿಗ್ವೇಶ್ ರಾಠಿಗೆ ಈ ಬಾರಿಯ ಐಪಿಎಲ್ ಮುಗಿದ ಬಳಿಕ ಅವರ ಖಾತೆಯಲ್ಲಿ ಉಳಿಯುವ ಒಟ್ಟು ಮೊತ್ತ ಕೇವಲ 10.63 ಲಕ್ಷ ರುಪಾಯಿಗಳು ಮಾತ್ರ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್‌ಗಳು ಹರಿದಾಡುತ್ತಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
