MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಅಂಡರ್-19 ವಿಶ್ವಕಪ್‌ ಗೆದ್ದ ವೈಭವ್ ಸೂರ್ಯವಂಶಿ 10ನೇ ಎಕ್ಸಾಂ ಬರೆಯಲು ರೆಡಿ! ಆದ್ರೆ ಖಡಕ್ ವಾರ್ನಿಂಗ್ ಕೊಟ್ಟ ಪ್ರಿನ್ಸಿಪಾಲ್

ಅಂಡರ್-19 ವಿಶ್ವಕಪ್‌ ಗೆದ್ದ ವೈಭವ್ ಸೂರ್ಯವಂಶಿ 10ನೇ ಎಕ್ಸಾಂ ಬರೆಯಲು ರೆಡಿ! ಆದ್ರೆ ಖಡಕ್ ವಾರ್ನಿಂಗ್ ಕೊಟ್ಟ ಪ್ರಿನ್ಸಿಪಾಲ್

ಒಮ್ಮೆ ಕ್ರಿಕೆಟಿಗನಾಗಿ ಹೆಸರು ಮಾಡಿದರೆ ಸಾಕು, ಆಮೇಲೆ ಓದಿಗೆ ಗುಡ್‌ಬೈ ಹೇಳುವವರೇ ಹೆಚ್ಚು. ಆದರೆ ಅಂಡರ್-19 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಸೂರ್ಯವಂಶಿ ಇದೀಗ 10ನೇ ಕ್ಲಾಸ್ ಬೋರ್ಡ್ ಎಕ್ಸಾಂ ಬರೆಯಲು ರೆಡಿಯಾಗಿದ್ದಾರೆ. 

1 Min read
Author : Naveen Kodase
Published : Feb 14 2026, 08:56 AM IST
Share this Photo Gallery
  • FB
  • TW
  • Linkdin
  • Whatsapp
16
10ನೇ ಕ್ಲಾಸ್ ಎಕ್ಸಾಂ ಬರೆಯಲು ರೆಡಿಯಾದ ವೈಭವ್
Image Credit : Getty

10ನೇ ಕ್ಲಾಸ್ ಎಕ್ಸಾಂ ಬರೆಯಲು ರೆಡಿಯಾದ ವೈಭವ್

ಐಸಿಸಿ ಅಂಡರ್‌-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಗೆಲುವಿನ ರೂವಾರಿ ವೈಭವ ಸೂರ್ಯವಂಶಿ ಇದೀಗ ಮತ್ತೆ ವಿದ್ಯಾರ್ಥಿ ಜೀವನಕ್ಕೆ ಮರಳಿದ್ದು, ಫೆ.17ರಂದು ನಡೆಯಲಿರುವ 10ನೇ ತರಗತಿ ವಾರ್ಷಿಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ.

26
ವೈಭವ್‌ಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ ಎಂದು ಎಚ್ಚರಿಸಿದ ಪ್ರಿನ್ಸಿಪಾಲ್
Image Credit : instagram.com/vaibhav_sooryavanshi09

ವೈಭವ್‌ಗೆ ಯಾವುದೇ ವಿಶೇಷ ಸೌಲಭ್ಯಗಳಿಲ್ಲ ಎಂದು ಎಚ್ಚರಿಸಿದ ಪ್ರಿನ್ಸಿಪಾಲ್

ವೈಭವ್‌ ಸೂರ್ಯವಂಶಿ, ಬಿಹಾರದ ಪೋದಾರ್‌ ಇಂಟರ್‌ನ್ಯಾಷನಲ್‌ ಶಾಲೆಯ ವಿದ್ಯಾರ್ಥಿ. ಅವರ ಬಗ್ಗೆ ಪ್ರಾಂಶುಪಾಲ ನೀಲ್‌ ಕಿಶೋರ್‌ ಮಾತನಾಡಿದ್ದು, ‘ವೈಭವ್‌ಗೆ ಯಾವುದೇ ರೀತಿಯ ವಿಶೇಷ ಉಪಚಾರ(VIP ಟ್ರೀಟ್‌ಮೆಂಟ್) ಇರುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

Related Articles

Related image1
14 ವರ್ಷದ ವೈಭವ್ ಸೂರ್ಯವಂಶಿ ಇನ್ಯಾವತ್ತೂ ಅಂಡರ್-19 ವಿಶ್ವಕಪ್ ಆಡೋಕೆ ಸಾಧ್ಯವಿಲ್ಲ! ಶಾಕ್ ಕೊಟ್ಟ ಬಿಸಿಸಿಐ ರೂಲ್ಸ್‌
Related image2
ಇನ್ನೊಮ್ಮೆ ಅಂಡರ್-19 ವಿಶ್ವಕಪ್ ಆಡೋಕೆ ಆಗಲ್ಲ ಅಂತ ಫೈನಲ್ ಹಿಂದಿನ ರಾತ್ರಿ ನಿದ್ದೆ ಮಾಡಿರಲಿಲ್ಲ ವೈಭವ್ ಸೂರ್ಯವಂಶಿ! BCCI Rule ಏನು?
36
ಎಲ್ಲರಿಗೂ ಒಂದೇ ರೀತಿಯ ಸೌಲಭ್ಯ
Image Credit : Getty

ಎಲ್ಲರಿಗೂ ಒಂದೇ ರೀತಿಯ ಸೌಲಭ್ಯ

ಸೌಲಭ್ಯಗಳು ಎಲ್ಲರಿಗೂ ಒಂದೇ ರೀತಿ ಇರಲಿದೆ. ಅಂಡರ್-19 ಕ್ರಿಕೆಟರ್ ಎಂದು ವೈಭವ್‌ಗೆ ಪ್ರತ್ಯೇಕ ಸೌಲಭ್ಯಗಳು ಇರುವುದಿಲ್ಲ. ಎಲ್ಲರಂತೆ ಅವರೂ ಕೂಡಾ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಾಂಶುಪಾಲರಾದ ನೀಲ್ ಕಿಶೋರ್ ಹೇಳಿದ್ದಾರೆ.

46
ಫೆಬ್ರವರಿ 17ರಿಂದ ಪರೀಕ್ಷೆಗಳು ಆರಂಭ
Image Credit : Getty

ಫೆಬ್ರವರಿ 17ರಿಂದ ಪರೀಕ್ಷೆಗಳು ಆರಂಭ

ಇದೇ ಫೆಬ್ರವರಿ 17ರಿಂದ ಆರಂಭವಾಗಲಿರುವ 10ನೇ ತರಗತಿ ಬೋರ್ಡ್‌ ಪರೀಕ್ಷೆಗೆ ವೈಭವ್ ಸೂರ್ಯವಂಶಿ ಹಾಜರಾಗಲಿದ್ದಾರೆ, ಅವರಿಗೆ ಈಗಾಗಲೇ ಪ್ರವೇಶ ಪತ್ರ ತಲುಪಿದೆ. ಅವರ ಆಗಮನ ಎಲ್ಲರಿಗೂ ಖುಷಿ ಕೊಟ್ಟಿದೆ’ಎಂದಿದ್ದಾರೆ.

56
ಯುವಕರಿಗೆ ಸ್ಪೂರ್ತಿಯಾದ ವೈಭವ್
Image Credit : Getty

ಯುವಕರಿಗೆ ಸ್ಪೂರ್ತಿಯಾದ ವೈಭವ್

ಈಗಾಗಲೇ ಐಪಿಎಲ್, ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಅಂಡರ್-19 ಏಷ್ಯಾಕಪ್ ಟ್ರೋಫಿ ಹಾಗೂ ಅಂಡರ್-19 ವಿಶ್ವಕಪ್‌ನಲ್ಲಿ ಶತಕ ಸಿಡಿಸುವ ಮೂಲಕ ಭವಿಷ್ಯದ ವೈಭವ್ ಭಾರತದ ತಾರೆ ಎಂದು ಗುರುತಿಸಿಕೊಂಡಿದ್ದಾರೆ. ಹೀಗಿದ್ದೂ ಸೂರ್ಯವಂಶಿ ಅಂಡರ್-19 ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಓದಿನತ್ತ ಗಮನ ಹರಿಸುತ್ತಿರುವುದು ನಿಜಕ್ಕೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

66
ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ರೂವಾರಿ
Image Credit : Instagram/vaibhav_sooryavanshi09

ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನ ರೂವಾರಿ

ಇತ್ತೀಚೆಗೆ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ವೈಭವ್ ಸೂರ್ಯವಂಶಿ ಸ್ಪೋಟಕ 175 ರನ್ ಸಿಡಿಸಿದ್ದರು. ಇದಷ್ಟೇ ಅಲ್ಲದೇ ಟೂರ್ನಿಯಲ್ಲಿ 439 ರನ್ ಸಿಡಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಜಯಿಸಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ವೈಭವ್ ಸೂರ್ಯವಂಶಿ
ಟೀಮ್ ಇಂಡಿಯಾ
ಎಸ್‌ಎಸ್‌ಎಲ್‌ಸಿ (SSLC)
ಪರೀಕ್ಷೆ

Latest Videos
Recommended Stories
Recommended image1
ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದಕೊಟ್ಟ ನಾಯಕ ಧೋನಿಗೆ ಬಿಸಿಸಿಐನಿಂದ ಸಿಗುವ ಪೆನ್ಷನ್ ಎಷ್ಟು?
Recommended image2
ಆಸೀಸ್ ಸೋಲುತ್ತೆ ಅಂದಿದ್ದವನಿಂದ ಮತ್ತೊಂದು ಶಾಕಿಂಗ್ ಭವಿಷ್ಯ: ಭಾರತ-ಪಾಕ್ ಪಂದ್ಯದಲ್ಲಿ ಗೆಲ್ಲೋದ್ಯಾರು?
Recommended image3
ದೆಹಲಿ ಹೊಟೆಲ್‌ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸದಸ್ಯನಿಗೆ ಹೃದಯಾಘಾತ, ಆಸ್ಪತ್ರೆ ದಾಖಲು
Related Stories
Recommended image1
14 ವರ್ಷದ ವೈಭವ್ ಸೂರ್ಯವಂಶಿ ಇನ್ಯಾವತ್ತೂ ಅಂಡರ್-19 ವಿಶ್ವಕಪ್ ಆಡೋಕೆ ಸಾಧ್ಯವಿಲ್ಲ! ಶಾಕ್ ಕೊಟ್ಟ ಬಿಸಿಸಿಐ ರೂಲ್ಸ್‌
Recommended image2
ಇನ್ನೊಮ್ಮೆ ಅಂಡರ್-19 ವಿಶ್ವಕಪ್ ಆಡೋಕೆ ಆಗಲ್ಲ ಅಂತ ಫೈನಲ್ ಹಿಂದಿನ ರಾತ್ರಿ ನಿದ್ದೆ ಮಾಡಿರಲಿಲ್ಲ ವೈಭವ್ ಸೂರ್ಯವಂಶಿ! BCCI Rule ಏನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved