ದಾಂಪತ್ಯ ಕಲಹದ ಭಯಾನಕ ತಿರುವು: ಗಂಡನ ಖಾಸಗಿ ಭಾಗಕ್ಕೆ ಬ್ಲೇಡ್ ಹಾಕಿದ ಹೆಂಡ್ತಿ
Sambhal crime news: ಪತಿಯೊಂದಿಗೆ ಜಗಳವಾಡಿದ ಪತ್ನಿ ಆತನ ಖಾಸಗಿ ಭಾಗವನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾಳೆ. ಗಂಭೀರವಾಗಿ ಗಾಯಗೊಂಡ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖಾಸಗಿ ಭಾಗಕ್ಕೆ ಬ್ಲೇಡ್ ಹಾಕಿದ ಹೆಂಡ್ತಿ
ಉತ್ತರ ಪ್ರದೇಶದ ಸಂಭಾಲ್‌ನಿಂದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ಗಂಡನ ಖಾಸಗಿ ಭಾಗವನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾರೆ. ಪತ್ನಿಯಿಂದಲೇ ತನಗೆ ಈ ಸ್ಥಿತಿ ಬಂದಿದೆ ಎಂದು ಸಂತ್ರಸ್ತ ಗಂಡ ಆರೋಪಿಸಿದ್ದಾನೆ.
ಗಂಡ-ಹೆಂಡತಿ ನಡುವೆ ದೀರ್ಘ ಸಮಯದವರೆಗೆ ಮಾತಿನ ಚಕಮಕಿ
ಶುಕ್ರವಾರ ರಾತ್ರಿ ಗಂಡ-ಹೆಂಡತಿ ನಡುವೆ ದೀರ್ಘ ಸಮಯದವರೆಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ಪತ್ನಿ, ಪತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಪತಿಯನ್ನು ಸ್ಥಳೀಯ ಸಾಮುದಾಯಿಕ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅಲಿಗಢ್‌ಗೆ ಶಿಫ್ಟ್ ಮಾಡಲಾಗಿದೆ. ಈ ಘಟನೆಯ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ಇಬ್ಬರ ಜಗಳ
ರಾಜು ಎಂಬಾತನ ಮದುವೆ ಮಿರ್ಜಾಪುರುದ ಯುವತಿ ಜೊತೆ ನಡೆದಿತ್ತು. ಮದುವೆ ಬಳಿಕ ರಾಜು ಪತ್ನಿಯೊಂದಿಗೆ ಪುಟ್ಟ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ ಇಬ್ಬರ ಜಗಳ ನಡೆದಿದೆ. ಹಲ್ಲೆ ಬಳಿಕ ರಕ್ತದ ಮಡುವಿನಲ್ಲಿದ್ದ ರಾಜು ಅವರನ್ನು ಕುಟುಂಬಸ್ಥರು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲೇ ಭಯದ ವಾತಾವರಣ: ಮಹಿಳೆಯರ ಕುತ್ತಿಗೆಗೆ 'ಲಾಂಗ್' ಇಟ್ಟು ಒಂದೇ ರಾತ್ರಿ 5 ಕಡೆ ಚೈನ್ ಸ್ನ್ಯಾಚ್!
ಪೊಲೀಸರ ವಶದಲ್ಲಿ ರಾಜು ಪತ್ನಿ
ಗಂಡ-ಹೆಂಡತಿ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು. ಇಬ್ಬರ ದಾಂಪತ್ಯ ಸುಖಮಯವಾಗಿರಲಿಲ್ಲ ಎಂದು ರಾಜು ಕುಟುಂಬಸ್ಥರು ಹೇಳಿದ್ದಾರೆ. ಸದ್ಯ ರಾಜು ಪತ್ನಿ ಪೊಲೀಸರ ವಶದಲ್ಲಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆದರೆ ಈವರೆಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಜಾತಿ ಗಣತಿ ಹೆಸರಲ್ಲಿ ಮನೆಗೆ ನುಗ್ಗಿ ದರೋಡೆಗೆ ಯತ್ನ, ಮಹಿಳೆ ಮೇಲೆ ಹಲ್ಲೆ, ಖತರ್ನಾಕ್ ದಂಪತಿ ಅರೆಸ್ಟ್
ಖಾಸಗಿ ಭಾಗದ ಮೇಲೆ ಮಾರಣಾಂತಿಕ ಹಲ್ಲೆ
ಸಂತ್ರಸ್ತ ವ್ಯಕ್ತಿಯ ಖಾಸಗಿ ಭಾಗದ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಇಬ್ಬರ ನಡುವೆ ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ಠಾಣೆಯ ನಿರೀಕ್ಷಾಧಿಕಾರಿ ಗುನ್ನೈರ್ ಅಖಿಲೇಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಜಯಪುರ: ಅಂಕಲಗಿ ದುರ್ಗಾದೇವಿ ಜಾತ್ರೆಯಲ್ಲಿ ಗುಂಡಿನ ಸದ್ದು, 14 ಜನರ ಬಂಧನ, ಗಲಾಟೆಗೆ ಅಸಲಿ ಕಾರಣ ಏನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

