- Home
- Entertainment
- ನಿಮ್ಮ ಆಯ್ಕೆಯ ಪಾರ್ಟ್ನರ್ 'ಮೇಕ್ ಯೂ or ಬ್ರೇಕ್ ಯೂ' ಎಂದ ರಶ್ಮಿಕಾ ಮಂದಣ್ಣ; ನೆಟ್ಟಿಗರು ಏನಂದ್ರು?
ನಿಮ್ಮ ಆಯ್ಕೆಯ ಪಾರ್ಟ್ನರ್ 'ಮೇಕ್ ಯೂ or ಬ್ರೇಕ್ ಯೂ' ಎಂದ ರಶ್ಮಿಕಾ ಮಂದಣ್ಣ; ನೆಟ್ಟಿಗರು ಏನಂದ್ರು?
ಈ ಮೊದಲೊಮ್ಮೆ ಅವರು ತಮ್ಮ ತಂಗಿಯ ಬಗ್ಗೆ ಮಾತನ್ನಾಡಿದ್ದು ಭಾರೀ ವೈರಲ್ ಆಗಿತ್ತು. ಇದೀಗ ಅವರು ಪ್ರತಿಯೊಬ್ಬರ 'ಲೈಫ್ ಪಾರ್ಟ್ನರ್' ಬಗ್ಗೆ ಮಾತನ್ನಾಡಿದ್ದಾರೆ. ಅದೀಗ ಸಖತ್ ವೈರಲ್ ಆಗಿದೆ. ಹಾಗಿದ್ದರೆ ರಶ್ಮಿಕಾ ಮಂದಣ್ಣ ಅವರು ಜೀವನದಲ್ಲಿ 'ಪಾರ್ಟ್ನರ್' ಪ್ರಾಮುಖ್ಯತೆ ಬಗ್ಗೆ ಅದೇನು ಹೇಳಿದ್ದಾರೆ ನೋಡಿ..

ಕನ್ನಡ ಮೂಲದ ನಟಿ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರು ಅದೇನೇ ಮಾತನ್ನಾಡಿದರೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತದೆ.
ಈ ಮೊದಲೊಮ್ಮೆ ಅವರು ತಮ್ಮ ತಂಗಿಯ ಬಗ್ಗೆ ಮಾತನ್ನಾಡಿದ್ದು ಭಾರೀ ವೈರಲ್ ಆಗಿತ್ತು. ಇದೀಗ ಅವರು ಪ್ರತಿಯೊಬ್ಬರ 'ಲೈಫ್ ಪಾರ್ಟ್ನರ್' ಬಗ್ಗೆ ಮಾತನ್ನಾಡಿದ್ದಾರೆ. ಅದೀಗ ಸಖತ್ ವೈರಲ್ ಆಗಿದೆ. ಹಾಗಿದ್ದರೆ ರಶ್ಮಿಕಾ ಮಂದಣ್ಣ ಅವರು ಜೀವನದಲ್ಲಿ 'ಪಾರ್ಟ್ನರ್' ಪ್ರಾಮುಖ್ಯತೆ ಬಗ್ಗೆ ಅದೇನು ಹೇಳಿದ್ದಾರೆ ನೋಡಿ..
ನಟಿ ರಶ್ಮಿಕಾ ಮಂದಣ್ಣ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ' ನನ್ನ ಜೀವನದಲ್ಲಿ ವಿಜಯ್ ದೇವರಕೊಂಡ ಅವರು ತುಂಬಾ ಮುಖ್ಯವಾದ ಪಾತ್ರ ನಿರ್ವಹಿಸಿದ್ದಾರೆ. 'ಅವರು ನನ್ನ ಮನಸ್ಸಿಗೆ ತಾವು ಮಾಡಿರದ ಗಾಯವನ್ನು ಹೀಲ್ ಮಾಡಿದ್ದಾರೆ' ಎಂದಿದ್ದಾರೆ.
ಅಂದರೆ, 'ಬೇರೆ ಯಾರೋ ರಶ್ಮಿಕಾ ಮಂದಣ್ಣ ಮನಸ್ಸಿಗೆ ಮಾಡಿದ್ದ ಗಾಯವನ್ನು ನಟ, ರಶ್ಮಿಕಾ ಬಾಯ್‌ಫ್ರೆಂಡ್ ವಿಜಯ್ ದೇವರಕೊಂಡ ಹೀಲ್ ಮಾಡಿದ್ದಾರೆ ಎಂದರ್ಥ. ಹೆಚ್ಚಿನ ಮಾಹಿತಿಯನ್ನು ಅವರು ಹೇಳುವ ಅಗತ್ಯವೇ ಇಲ್ಲ.. ಕಾರಣ, ಬಹುತೇಕ ಎಲ್ಲರಿಗೂ ರಶ್ಮಿಕಾ ಲೈಫಲ್ಲಿ ಈ ಮೊದಲು ಏನಾಗಿದೆ ಎಂಬುದು ಗೊತ್ತಿದೆ.
ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ, ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರಿಬ್ಬರೂ ಕೆಲವೇ ಆಪ್ತರ ಸುಮ್ಮುಖದಲ್ಲಿ ಹೈದ್ರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರಿಬ್ಬರ ಮದುವೆ ಫೆಬ್ರವರಿ 26ರಂದು ಉದಯಪುರದಲ್ಲಿ ನಡೆಯಲಿದೆ ಎನ್ನಲಾಗಿದೆ.
ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ನಟಿಸಿದ ಬಳಿಕ ಅದೇ ಚಿತ್ರದ ಹೀರೋ ರಕ್ಷಿತ್ ಶೆಟ್ಟಿಯವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಅದೇನೋ ಕಾರಣಕ್ಕೆ ನಿಶ್ಚಿತಾರ್ಥ ಮುರಿದುಬಿದ್ದು ಅವರು ಬಳಿಕ ತಮ್ಮ ಸಿನಿಮಾ ಜರ್ನಿ ಮುಂದುವರೆಸಿದ್ದಾರೆ.
ಸ್ಯಾಂಡಲ್‌ವುಡ್ ಸಿನಿಮಾರಂಗದಿಂದ ಟಾಲಿವುಡ್, ಕಾಲಿವುಡ್, ಮಾಲಿವುಡ್ ಬಳಿಕ ಬಾಲಿವುಡ್‌ನಲ್ಲೂ ನಟಿ ರಶ್ಮಿಕಾ ಮಂದಣ್ಣ ತನ್ನ ಸಿನಿಮಾನಟನೆಯ ಮೂಲಕ ಸಖತ್ ಮಿಂಚಿ 'ನ್ಯಾಷನಲ್ ಕ್ರಶ್' ಎನ್ನಿಸಿಕೊಂಡಿದ್ದಾರೆ. ಇದೀಗ ಹೆಚ್ಚಾಗಿ ಬಾಲಿವುಡ್ ಹಾಗೂ ಟಾಲಿವುಡ್ ಚಿತ್ರರಂಗಗಳಲ್ಲಿಯೇ ನಟಿಸುತ್ತಿದ್ದಾರೆ ರಶ್ಮಿಕಾ.
ಫೆಬ್ರವರಿಯಲ್ಲಿ ಮದುವೆ ಎನ್ನಲಾಗಿದ್ದು ಆ ಬಳಿಕ ನಟಿ ರಶ್ಮಿಕಾ ಅವರು ಮುಂದೆ ತಮ್ಮ ನಟನಾವೃತ್ತಿಯನ್ನು ಕಂಟಿನ್ಯೂ ಮಾಡುತ್ತಾರಾ ಇಲ್ಲವೋ ಎಂಬ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
ಆದರೆ, ಆ ಬಗ್ಗೆ ರಶ್ಮಿಕಾ ಅವರಾಗಲೀ ಅಥವಾ ವಿಜಯ್ ದೇವರಕೊಂಡ ಅವರಾಗಲೀ ಏನೊಂದೂ ಹೇಳಿಲ್ಲ. ಮುಂದಿನ ದಿನಗಳಲ್ಲಿ ಅಥವಾ ಮದುವೆ ಬಳಿಕ ಆ ಬಗ್ಗೆ ಮಾಹಿತಿ ಹೊರಬೀಳಬಹುದು.
ಹೌದು, ನಟಿ ರಶ್ಮಿಕಾ ಮಂದಣ್ಣ ಸಾಧನೆ ಚಿಕ್ಕದೇನಲ್ಲ. ಕನ್ನಡ ಸಿನಿಮಾ 'ಕಿರಿಕ್ ಪಾರ್ಟಿ' ಮೂಲಕ ಸಿನಿಮಾರಂಗದಲ್ಲಿ ಹೆಸರು ಮಾಡಿದ ನಟಿ ರಶ್ಮಿಕಾ ಮಂದಣ್ಣ, ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ. ಕನ್ನಡದಲ್ಲಿ 3-4 ಸಿನಿಮಾ ಮಾಡುತ್ತಿದ್ದಂತೆ ತೆಲುಗು ಸಿನಿಮಾರಂಗಕ್ಕೆ ಜಿಗಿದ ನಟಿ ರಶ್ಮಿಕಾ ಅಲ್ಲಿ 'ಗೀತ ಗೋವಿಂದಂ' ಸಿನಿಮಾ ಮೂಲಕ ಜನಮೆಚ್ಚುಗೆ ಪಡೆದರು.
ಅಷ್ಟೇ ಅಲ್ಲ, ನಟ ವಿಜಯ್ ದೇವರಕೊಂಡ ಜತೆ ಸ್ನೇಹ ಕೂಡ ಆಯ್ತು. ಬಳಿಕ, ತಮಿಳು, ಮಲಯಾಳಂ ಹಾಗೂ ಬಾಲಿವುಡ್ ಸಿನಿಮಾರಂಗದಲ್ಲಿ ಬೆಳೆದರು ನಟಿ ರಶ್ಮಿಕಾ ಮಂದಣ್ಣ.
ಸದ್ಯಕ್ಕೆ ಹೆಚ್ಚಾಗಿ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿರುವ ರಶ್ಮಿಕಾ ಮಂದಣ್ಣ ಅವರು ಕನ್ನಡ, ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಸಕ್ರಿಯರಾಗಿಲ್ಲ. ಇತ್ತೀಚೆಗೆ ಟಾಲಿವುಡ್ ನಟ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ ವರದಿಯಾಗಿ ಅದೀಗ ಸಾಕಷ್ಟು ವೈರಲ್ ನ್ಯೂಸ್ ಎಂಬಂತಾಗಿದೆ.
ಸಿಕ್ಕ ಮಾಹಿತಿ ಪ್ರಕಾರ, ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ ಉದಯಪುರದಲ್ಲಿ ಫೆಬ್ರವರಿ 26ರಂದು ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ಎನ್ನಲಾಗಿದೆ. ಅವೆಲ್ಲವನ್ನೂ ಕಣ್ತುಂಬಿಕೊಳ್ಳಲು ಇನ್ನೂ ಸಾಕಷ್ಟು ಕಾಲ ಕಾಯಬೇಕಾಗಿದೆ.
ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ತಂಗಿ ಶೀಮನ್ ಬಗ್ಗೆ ಮಾತನ್ನಾಡಿದ್ದು ಕೂಡ ಸಾಕಷ್ಟು ವೈರಲ್ ಆಗಿತ್ತು. 'ನನಗೆ 10 ವರ್ಷದ ತಂಗಿ ಇದ್ದಾಳೆ.. ನನಗೂ ಅವಳಿಗೂ ವಯಸ್ಸಿನಲ್ಲಿ 16-17 ವರ್ಷಗಳ ಅಂತರವಿದೆ. ನನಗೆ ನನ್ನ ತಂಗಿ ಅಂದ್ರೆ ತುಂಬಾ ಇಷ್ಟ. ಆದರೆ ನನ್ನ ತಂಗಿಗೆ ಯಾವುದೇ ಸೌಲಭ್ಯಗಳನ್ನು ಸುಲಭವಾಗಿ ಕೊಡಬಾರದು..
ಏಕೆಂದರೆ ನನ್ನ ತಂದೆ ತಾಯಿ ನನ್ನನ್ನು ತುಂಬಾ ಸ್ಟ್ರಿಕ್ಟ್ ಆಗಿ ಬೆಳೆಸಿದ್ದರು, ಹಾಗೆ ಕಷ್ಟ ಪಟ್ಟು ಬೆಳೆದಿದಕ್ಕೆ ನಾನು ಈ ಸ್ಥಾನದಲ್ಲಿ ಬೆಳೆಯಲು ಸಾಧ್ಯವಾಗಿದ್ದು.. ಅವಳಿಗೆ ಈಗ ಎಲ್ಲವೂ ಸುಲಭವಾಗಿಯೇ ಸಿಗುವಂತಿದೆ. ಆದರೆ, ಅವಳಿಗೆ ಹಾಗೆ ಬೇಸಿಕ್ ಬಿಟ್ಟು ಎಲ್ಲವೂ ಸಿಗಬಾರದು. ಅವಳೂ ಕೂಡ ದೊಡ್ಡ ಸಾಧನೆ ಮಾಡಬೇಕು' ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

