ಭಾರತದಲ್ಲಿ 40 ಲಕ್ಷ ಮಂದಿಯಲ್ಲಿದೆ ಲೈಸೆನ್ಸ್ ಗನ್, ಯಾವ ರಾಜ್ಯಕ್ಕೆ ಮೊದಲ ಸ್ಥಾನ?
ಭಾರತದಲ್ಲಿ 40 ಲಕ್ಷ ಮಂದಿಯಲ್ಲಿದೆ ಲೈಸೆನ್ಸ್ ಗನ್, ಯಾವ ರಾಜ್ಯಕ್ಕೆ ಮೊದಲ ಸ್ಥಾನ?, ಕರ್ನಾಟಕದಲ್ಲಿ ಎಷ್ಟು ಮಂದಿ ಬಳಿ ಇದೆ ಲೈಸೆನ್ಸ್ ಗನ್? ಗರಿಷ್ಠ ಲೈಸೆನ್ಸ್ ಗನ್ ಬಳಸುವ ರಾಜ್ಯ ಯಾವುದು? ಈ ಕುರಿತ ಕುತೂಹಲ ಮಾಹಿತಿ ಇಲ್ಲಿದೆ.

ಭಾರತದ ಗನ್ ಲೈಸೆನ್ಸ್
ವಿದೇಶಗಳಲ್ಲಿರುವಂತೆ ಭಾರತದಲ್ಲಿ ಗನ್, ಶಸ್ತ್ರಾಸ್ತ್ರ ಇಟ್ಟುಕೊಳ್ಳುವುದು, ಲೈಸೆನ್ಸ್ ಗನ್, ರಿವಾಲ್ವರ್ ಪಡೆಯುವುದು ಸುಲಭದ ಮಾತಲ್ಲ. ಇದಕ್ಕೆ ಕಠಿಣ ನಿಯಮಗಳಿವೆ. ಅದರೂ ಭಾರತದಲ್ಲಿ ಲೈಸೆನ್ಸ್ ಗನ್ ಇರುವವರ ಸಂಖ್ಯೆ ಕಡಿಮೆಯೇನು ಇಲ್ಲ. ಇದರ ಜೊತೆಗೆ ಲೈಸೆನ್ಸ್ ಇಲ್ಲದೆ ಹಲವರು ಗನ್ ಬಳಸುತ್ತಿರುವ ಘಟನೆ ಬೆಳೆಕಿಗೆ ಬಂದಿದೆ. ಇದೀಗ ಭಾರತದಲ್ಲಿ ಅಂಕಿ ಅಂಶ ಪ್ರಕಾರ 35 ರಿಂದ 40 ಲಕ್ಷ ಲಕ್ಷ ಗನ್ ಲೈಸೆನ್ಸ್ ಇದೆ.
ಕೇಂದ್ರ ಗೃಹ ಸಚಿವಾಲಯದ ಡೇಟಾ
2023ರವರೆಗಿನ ಅಂಶಗಳು ಸದ್ಯ ಲಭ್ಯವಿದೆ. ಕೇಂದ್ರ ಗೃಹ ಸಚಿವಾಲಯದ ಪ್ರಕಾರ 35 ರಿಂದ 40 ಲಕ್ಷ ಲೈಸೆನ್ಸ್ ಗನ್ ಭಾರತದಲ್ಲಿದೆ. ಇದು 2023ರ ಅಂಕಿ ಅಂಶ, ಸದ್ಯ ಈ ಸಂಖ್ಯೆಯಲ್ಲಿ ಏರಿಕೆಯಾಗಿರುವ ಸಾಧ್ಯತೆಗಳಿವೆ. ಅಂಕಿ ಅಂಶ ಪ್ರಕಾರ ಉತ್ತರ ಭಾರತ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹೆಚ್ಚು ಲೈಸೆನ್ಸ್ ಗನ್ ಹೊಂದಿದೆ.
ಮೊದಲ ಸ್ಥಾನ ಯಾರಿಗೆ?
ಭಾರತದಲ್ಲಿ ಗರಿಷ್ಠ ಲೈಸೆನ್ಸ್ ಗನ್ ಹೊಂದಿರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. 2023ರ ವರದಿ ಪ್ರಕಾರ ಯುಪಿಯಲ್ಲಿ 13.29 ಲಕ್ಷ ಲೈಸೆನ್ಸ್ ಗನ್ ಇವೆ. 2016ರಲ್ಲಿ ಈ ಸಂಖ್ಯೆ 12.77 ಲಕ್ಷವಾಗಿತ್ತು. ಅತೀ ಹೆಚ್ಚು ಮಂದಿ ಸ್ವಯಂ ರಕ್ಷಣೆಗಾಗಿ ಉತ್ತರ ಪ್ರದೇಶದಲ್ಲಿ ಗನ್ ಲೈಸೆನ್ಸ್ ಪಡೆದುಕೊಂಡಿದ್ದಾರೆ.
ಕರ್ನಾಟಕದಲ್ಲಿ ಎಷ್ಟಿಗೆ ಗನ್ ಲೈಸೆನ್ಸ್
ದೇಶಗಳ ಗನ್ ಲೈಸೆನ್ಸ್ ಪಟ್ಟಿಯಲ್ಲಿ ಕರ್ನಾಟಕ 7ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 1.1 ರಿಂದ 1.2 ಲಕ್ಷ ಲೈಸೆನ್ಸ್ ಗನ್ ಇವೆ. ವಿಶೇಷ ಅಂದರೆ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಗರಿಷ್ಠ ಗನ್ ಲೈಸೆನ್ಸ್ ಹೊಂದಿರುವ ರಾಜ್ಯ ಕರ್ನಾಟಕ. ಕರ್ನಾಟಕದಲ್ಲೂ ಗರಿಷ್ಠ ಮಂದಿ ಸುರಕ್ಷತಾ ಕಾರಣಗಳಿಂದ ಲೈಸೆನ್ಸ್ ಪಡೆದಿದ್ದಾರೆ. ಕೊಡವ ಸಮುದಾಯದಲ್ಲಿ ಗನ್‌ಗೆ ವಿಶೇಷ ಪ್ರಾತಿನಿಧ್ಯವಿದೆ. ಕೊಡವರ ಸಂಸ್ಕೃತಿಯ ಭಾಗವಾಗಿದೆ. ಹೀಗಾಗಿ ಕೊಡುಗು ಜಿಲ್ಲೆಯಲ್ಲಿ ಗರಿಷ್ಠ ಗನ್ ಲೈಸೆನ್ಸ್ ಇದೆ.
ಜಮ್ಮು ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿದೆ ಗರಿಷ್ಠ ಗನ್ ಲೈಸೆನ್ಸ್
ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಎರಡೂ ಕೂಡ ಪಾಕಿಸ್ತಾನದ ಜೊತೆಗೆ ಗಡಿ ಹಂಚಿಕೊಂಡ ರಾಜ್ಯಗಳು. ಇಲ್ಲಿ ಉಗ್ರರ ದಾಳಿ, ಗುಂಡಿನ ದಾಳಿಗಳು ಭಾರಿ ಸದ್ದು ಮಾಡುತ್ತಿದ್ದ ರಾಜ್ಯಗಳಾಗಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 4 ರಿಂದ 5 ಲಕ್ಷ ಲೈಸೆನ್ಸ್ ಗನ್ ಹಾಗೂ ಪಂಜಾಬ್‌ನಲ್ಲ 3.6 ಲಕ್ಷ ಲೈಸೆನ್ಸ್ ಗನ್ ಹೊಂದುವ ಮೂಲಕ 2 ಹಾಗೂ ಮೂರನೇ ಸ್ಥಾನ ಪಡೆದಿದೆ.
ಜಮ್ಮು ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿದೆ ಗರಿಷ್ಠ ಗನ್ ಲೈಸೆನ್ಸ್
ಸ್ವಯಂ ರಕ್ಷಣೆ ಜೊತೆಗೆ ನಿರ್ವಹಣೆ ಆಪತ್ತು
ಲೈಸೆನ್ಸ್ ಗನ್ ಹೊಂದಿರುವ ರಾಜ್ಯಗಳ ಪೈಕಿ ಮಧ್ಯಪ್ರದೇಶ 2.5 ಲಕ್ಷ ಲೈಸೆನ್ಸ್ ಗನ್ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಹರ್ಯಾಣ 1.5 ಲಕ್ಷ, ರಾಜಸ್ಥಾನ 1.4 ಲಕ್ಷ, ಮಹಾರಾಷ್ಟ್ರ 1 ಲಕ್ಷ, ಹಿಮಾಚಲ ಪ್ರದೇಶ 77 ಸಾವಿರ ಲೈಸೆನ್ಸ್ ಗನ್ ಹೊಂದಿದೆ.
ಸ್ವಯಂ ರಕ್ಷಣೆ ಜೊತೆಗೆ ನಿರ್ವಹಣೆ ಆಪತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

