ಗಲ್ಲು ಶಿಕ್ಷೆಗೆ ಒಳಗಾಗಿರೋ ನಿಮಿಷಾ ಪ್ರಿಯಾ ಉಳಿಸಿಕೊಳ್ಳಲು ಕುಟುಂಬಸ್ಥರಿಂದ ಪ್ಲಾನ್!
ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾಳನ್ನು ಬಿಡುಗಡೆ ಮಾಡಲು ಕುಟುಂಬಸ್ಥರು ಬ್ಲಡ್ ಮನಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಬ್ಲಡ್ ಮನಿ ಎಷ್ಟು ಗೊತ್ತಾ?

ಯೆಮೆನ್‌ನಲ್ಲಿ ಗಲ್ಲುಶಿಕ್ಷೆಗೆ ಒಳಗಾಗಿರುವ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಳನ್ನು ಉಳಿಸಿಕೊಳ್ಳಲು ಕುಟುಂಬಸ್ಥರು ಬ್ಲಡ್ ಮನಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೇ ಜುಲೈ 16ರಂದು ನಿಮಿಷಾ ಪ್ರಿಯಾಗೆ ಮರಣದಂಡನೆ ನಿಗದಿಯಾಗಿದೆ.
ಈ ಪ್ರಕರಣದಲ್ಲಿ ಕೊಲೆಯಾಗಿರುವ ವ್ಯಕ್ತಿ ಕುಟುಂಬಸ್ಥರು ಪರಿಹಾರ ಧನವನ್ನು ಸ್ವೀಕರಿಸಿ ಕ್ಷಮೆ ನೀಡಿದ್ರೆ, ಅಪರಾಧಿ ಗಲ್ಲು ಶಿಕ್ಷೆಯಿಂದ ಪಾರಾಗಬಹುದು. ಈ ಪರಿಹಾರ ಧನವನ್ನ ಬ್ಲಡ್ ಮನಿ ಎಂದು ಕರೆಯಲಾಗುತ್ತದೆ.
ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಬ್ಲಡ್‌ಮನಿ ನೀಡಿದವರ ಮರಣದಂಡನೆಯನ್ನು ರದ್ದುಪಡಿಸುವ ಪದ್ಧತಿಯಲ್ಲಿದೆ. ಹೀಗಾಗಿ ನಿಮಿಷಾ ಪ್ರಿಯಾಳನ್ನು ಉಳಿಸಿಕೊಳ್ಳಲು ಬ್ಲಡ್ ಮನಿ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಿಮಿಷಾ ಪ್ರಿಯಾ ಕುಟುಂಬಸ್ಥರು ನೀಡಲು ಒಪ್ಪಿರುವ ಬ್ಲಡ್ ಮನಿ ಮೊತ್ತ ಎಷ್ಟು ಗೊತ್ತಾ?
ವರದಿಗಳ ಪ್ರಕಾರ, ಮೃತ ವ್ಯಕ್ತಿಯ ಕುಟುಂಬಸ್ಥರಿಗೆ 1 ಮಿಲಿಯನ್ ಡಾಲರ್ (8.5 ಕೋಟಿ ರೂಪಾಯಿ) ನೀಡಲು ಸಿದ್ಧರಾಗಿದ್ದಾರೆ. ಆದ್ರೆ ಈ ಮೊತ್ತ ಸ್ವೀಕರಿಸಲು ಮೃತ ವ್ಯಕ್ತಿಯ ಕುಟುಂಬಸ್ಥರ ಒಪ್ಪಿದ್ದಾರಾ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಯೆಮೆನ್ ದೇಶದಲ್ಲಿ ವಿದೇಶಿಗರು ಯಾವುದೇ ವ್ಯವಹಾರ ಆರಂಭಿಸಬೇಕಾದ್ರೆ ಅದರಲ್ಲಿ ಸ್ಥಳೀಯ ವ್ಯಕ್ತಿ ಪಾಲುದಾರಿಕೆಯನ್ನು ಹೊಂದಿರಬೇಕಾಗುತ್ತದೆ. ಯೆಮೆನ್ ನಿವಾಸಿ ತಲಾಲ್ ಅಬ್ದುಲ್ ಮಹ್ದಿ ಜೊತೆಗೂಡಿ ನಿಮಿಷಾ ಪ್ರಿಯಾ ವ್ಯವಹಾರ ಆರಂಭಿಸಿದ್ದರು.
ಕೇರಳದ ಪಾಲಕ್ಕಡ್‌ನ ನಿಮಿಷಾ 2011ರಿಂದ ಯೆಮೆನ್‌ನಲ್ಲಿ ನರ್ಸ್ ಆಗಿದ್ದರು. ತಲಾಲ್ ಜೊತೆಗೆ ಸೇರಿ ಕ್ಲಿನಿಕ್ ಆರಂಭಿಸಿದ್ದರು. ಆದರೆ ಇಬ್ಬರ ನಡುವೆ ಮೈಮನಸ್ಸು ಮೂಡಿತ್ತು. ಇಬ್ಬರ ವ್ಯವಹಾರಿಕ ಜಗಳ ಕೊ*ಲೆಯಲ್ಲಿ ಅಂತ್ಯವಾಗಿತ್ತು. ಇದು ಉದ್ದೇಶಪೂರ್ವಕ ಕೊಲೆ ಅಲ್ಲ ಎಂದು ನಿಮಿಷಾ ಪ್ರಿಯಾ ಪರ ವಕೀಲರು ವಾದಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

