ದಟ್ಟವಾದ ಕೂದಲಿಗೆ ನಟಿ ರೇಖಾ ಬಳಸುವುದು ಇದೇ ಹೇರ್ ಮಾಸ್ಕ್ ನೋಡಿ
ರೇಖಾ ಅದ್ಭುತ ನಟನೆಗೆ ಮಾತ್ರವಲ್ಲ, ನೀಳ ಮತ್ತು ಕಪ್ಪು ಕೇಶ ರಾಶಿಗೂ ಜನಪ್ರಿಯರು. ಅವರ ಆರೋಗ್ಯಕರ ಕೂದಲಿನ ಹಿಂದಿನ ಕಾರಣವೇನೆಂದು ತಿಳಿದುಕೊಳ್ಳಲು ನೀವು ಬಯಸುವಿರಾದರೆ ಜಸ್ಟ್ 3-ಪದಾರ್ಥಗಳನ್ನು ಒಳಗೊಂಡಿರುವ ಹೇರ್ ಮಾಸ್ಕ್ ಮಾಡಿಕೊಳ್ಳಿ.

ರೇಖಾ ಮೊಟ್ಟೆ, ಮೊಸರು ಮತ್ತು ಜೇನುತುಪ್ಪ... ಈ 3 ಪದಾರ್ಥಗಳಿಂದ ಮನೆಯಲ್ಲಿ ತಯಾರಿಸಿದ ಹೇರ್ ಮಾಸ್ಕ್ ಅನ್ನು ಬಳಸುತ್ತಾರೆ. ಇದನ್ನು ಮಾಡುವುದು ಹೇಗೆಂದು ನೀವಿಲ್ಲಿ ತಿಳಿಯಿರಿ.
ಈ ಹೇರ್ ಮಾಸ್ಕ್ ಅನ್ನು ಮನೆಯಲ್ಲಿ ತಯಾರಿಸಲು ಪ್ರಮಾಣ ಎಷ್ಟಿರಬೇಕು ಎಂಬ ಗೊಂದಲ ಬೇಡ. ಅದನ್ನು ಇಲ್ಲಿ ವಿವರವಾಗಿ ಕೊಡಲಾಗಿದೆ. ಎರಡು ಚಮಚ ಮೊಸರು, ಒಂದು ಮೊಟ್ಟೆಯ ಹಳದಿ ಲೋಳೆ ಮತ್ತು ಒಂದು ಚಮಚ ಜೇನುತುಪ್ಪ ಉಪಯೋಗಿಸಿದರೆ ಸಾಕು.
ಎಲ್ಲರಿಗೂ ಗೊತ್ತಿರುವ ಹಾಗೆ ಮೊಟ್ಟೆ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಇದು ಕೂದಲು ಕಿರುಚೀಲಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಕೂದಲಿನ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇನ್ನು ಮೊಸರಿನಲ್ಲಿ ಶಿಲೀಂಧ್ರನಾಶಕ ಗುಣಗಳು ಸಮೃದ್ಧವಾಗಿದ್ದು, ಇದು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೇನುತುಪ್ಪವು ನೈಸರ್ಗಿಕ ಮೊಯಿಶ್ವರೈಸರ್ ಆಗಿದ್ದು, ಅದು ಕೂದಲಿನ ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲಿನ ನೆತ್ತಿಯನ್ನು ಕಂಡೀಷನ್ ಮಾಡಲು ಸಹಾಯ ಮಾಡುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ.
ಇದನ್ನು ಹಚ್ಚುವುದು ಹೇಗೆಂದರೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಮೊಟ್ಟೆ, ಮೊಸರು ಮತ್ತು ಜೇನುತುಪ್ಪ ಸೇರಿಸಿ, ನಯವಾದ ಪೇಸ್ಟ್ ಆಗುವವರೆಗೆ ಚೆನ್ನಾಗಿ ಬೆರೆಸಬೇಕು. ಕೂದಲನ್ನು ಭಾಗಗಳಾಗಿ ವಿಂಗಡಿಸಿ ಮತ್ತು ಒದ್ದೆಯಾದ ಕೂದಲಿಗೆ ಮಾಸ್ಕ್ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. 30 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು.
30 ನಿಮಿಷವಾದ ನಂತರ ಈಗ ಮಾಸ್ಕ್ ಅನ್ನು ತಣ್ಣೀರಿನಿಂದ ತೊಳೆಯಬೇಕು. ಉತ್ತಮ ಫಲಿತಾಂಶಗಳಿಗಾಗಿ ವಾರಕ್ಕೊಮ್ಮೆ ಈ ಮನೆಯಲ್ಲಿ ತಯಾರಿಸಿದ ಹೇರ್ ಮಾಸ್ಕ್ ಬಳಸಿ.
ರೇಖಾ ಅವರು ಹೇಳಿರುವ ಈ ಹೇರ್ ಮಾಸ್ಕ್ ಅನ್ನು ಭಾರತೀಯ ಮಹಿಳೆಯರು ಬಳಸಬಹುದು. ಆದರೆ ನಿಮ್ಮ ನೆತ್ತಿಗೆ ನೇರವಾಗಿ ಏನನ್ನಾದರೂ ಹಚ್ಚುವ ಮೊದಲು ಸರಿಯಾದ ಪ್ಯಾಚ್ ಟೆಸ್ಟ್ ಮಾಡುವುದು ಯಾವಾಗಲೂ ಒಳ್ಳೆಯದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

