- Home
- Entertainment
- Sandalwood
- ಸುದೀಪ್ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್ ಮಾಡಿದ ಕಿಚ್ಚ ಹೇಳಿದ್ದೇನು?
ಸುದೀಪ್ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್ ಮಾಡಿದ ಕಿಚ್ಚ ಹೇಳಿದ್ದೇನು?
ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಡಿಸೆಂಬರ್ 25 ರಂದು ಚಿತ್ರ ತೆರೆಗೆ ಬರಲಿದೆ. ಪತ್ರಿಕಾಗೋಷ್ಠಿಯಲ್ಲಿ, 'ಸ್ತ್ರೀದೋಷ' ಇದೆಯೇ ಎಂಬ ಪ್ರಶ್ನೆಗೆ ಸುದೀಪ್ ತಮ್ಮ ಪತ್ನಿ ಪ್ರಿಯಾ ಸಮ್ಮುಖದಲ್ಲಿಯೇ ಉತ್ತರಿಸಿದ್ದಾರೆ. ಅವರು ಹೇಳಿದ್ದೇನು?

ಮಾರ್ಕ್ ಸಿನಿಮಾ ಟ್ರೈಲರ್
ಬಿಗ್ಬಾಸ್ ನಡೆಸಿಕೊಡುತ್ತಿರುವ ನಡುವೆಯೇ, ಕಿಚ್ಚ ಸುದೀಪ್ ಅಭಿಮಾನಿಗಳ ದೊಡ್ಡ ಖುಷಿಯ ಸುದ್ದಿಯನ್ನೂ ನೀಡಿದ್ದಾರೆ. ಇಂದು ಅಂದರೆ ಡಿ.7 ಅವರ ನಟನೆಯ ‘ಮಾರ್ಕ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಇದೇ 25ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಸಿನಿಮಾ ಡಿಟೇಲ್ಸ್
ಈ ಬಗ್ಗೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸಿನಿಮಾದ ಕುರಿತು ಡಿಟೇಲ್ಸ್ ಹೇಳಿದ ಕಿಚ್ಚ 107 ದಿನಗಳ ಶೂಟಿಂಗ್ ಆಗಿದ್ದು, 166 ಕಾಲ್ಶೀಟ್ಗಳನ್ನು ಮಾಡಿದ್ದೀವಿ ಎಂದಿದ್ದಾರೆ. ಚಿತ್ರಕ್ಕಾಗಿ ಸುಮಾರು 90 ಲೊಕೇಶನ್ಗಳಲ್ಲಿ ಶೂಟಿಂಗ್ ನಡೆದಿರುವ ವಿಷಯವನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಸುಮಾರು 20 ಸೆಟ್ಗಳ ನಿರ್ಮಾಣವಾಗಿರುವ ಮಾಹಿತಿಯನ್ನೂ ಕೊಟ್ಟಿದ್ದಾರೆ.
ಬಿಡುವಿಲ್ಲದೆ ಚಿತ್ರೀಕರಣ
ಈ ಚಿತ್ರಕ್ಕಾಗಿ ನಿದ್ದೆಗೆಟ್ಟ ದಿನಗಳ ಬಗ್ಗೆಯೂ ಮಾತನಾಡಿರುವ ಸುದೀಪ್, ವಿಶ್ರಾಂತಿ ಪಡೆದ ಸಮಯ ತುಂಬಾ ಕಡಿಮೆ ಎಂದಿದ್ದಾರೆ. ಶಾಲೆಯೊಂದರಲ್ಲಿ ರಾತ್ರಿ ಮೂರು ಗಂಟೆ ವರೆಗೂ ಚಿತ್ರೀಕರಣ ಮಾಡಿದ್ದು ಇದೆ. ನಾನು ಮೂರು ಗಂಟೆಗೆ ಚಿತ್ರೀಕರಣ ಮುಗಿಸಿಕೊಂಡು ಹೊರಗೆ ಬರುತ್ತಿದ್ದೆ ಆಗ ಇನ್ನೊಂದು ಬ್ಯಾಚ್ ಒಳಗೆ ಹೋಗುತ್ತಿತ್ತು. ಹೀಗೆ ಬಿಡುವಿಲ್ಲದೆ ಚಿತ್ರೀಕರಣವನ್ನು ನಾವು ಮಾಡಿರುವುದಾಗಿ ತಿಳಿಸಿದ್ದಾರೆ.
ಇಬ್ಬರು ಹೀರೋಗಳು
ಜೊತೆಗೆ ಈ ಸಿನಿಮಾದಲ್ಲಿ ನಿರ್ದೇಶಕರು ಮತ್ತು ಕ್ಯಾಮೆರಾಮೆನ್ ಪಟ್ಟಿರುವ ಶ್ರಮದ ಬಗ್ಗೆಯೂ ಮಾತನಾಡಿರುವ ಸುದೀಪ್, ಇವರಿಬ್ಬರೇ ಈ ಚಿತ್ರದ ಹೀರೋಗಳು. ನಿರ್ದೇಶಕರ ಜೇಬು ತುಂಬಿದರೆ ನನಗೆ ಅದೇ ಖುಷಿ. ಇವರಿಬ್ಬರೂ ಸಿಕ್ಕಾಪಟ್ಟೆ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದಾರೆ ಎಂಬ ವಿಷಯವನ್ನೂ ತಿಳಿಸಿದ್ದಾರೆ.
ಪತ್ನಿ ಎದುರೇ ಪ್ರಶ್ನೆ
ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಅವರಿಗೆ ಒಂದು ಪ್ರಶ್ನೆ ಎದುರಾಯಿತು. ಅದೇನೆಂದರೆ, ಅವರಿಗೆ ಸ್ತ್ರೀದೋಷ ಇದೆಯಾ ಎನ್ನುವ ಪ್ರಶ್ನೆ. ಅದಕ್ಕೆ ಒಂದು ಕಾರಣವೂ ಇದೆ. ಅದೇನೆಂದರೆ, ಸುದೀಪ್ ಅವರ ಈ ಹಿಂದಿನ ಮ್ಯಾಕ್ಸ್ ಚಿತ್ರ ಹಾಗೂ ಈ ಸಿನಿಮಾ ಎರಡರಲ್ಲಿಯೂ ನಾಯಕಿ ಇಲ್ಲ ಎನ್ನುವುದು. ಅದಕ್ಕಾಗಿಯೇ ಪತ್ರಿಕಾಗೋಷ್ಠಿಯಲ್ಲಿ ಹಾಜರು ಇದ್ದ ಪತ್ನಿ ಪ್ರಿಯಾ ಎದುರೇ ಈ ಪ್ರಶ್ನೆ ಕೇಳಲಾಯಿತು.
ಈ ಜನ್ಮದಲ್ಲಿ ಸ್ತ್ರೀದೋಷ...
ಅದಕ್ಕೆ ಸುದೀಪ್ ಅವರು ತಮಾಷೆಯಾಗಿ ತಮ್ಮದೇ ರೀತಿ ಉತ್ತರಿಸಿದರು. ಪಕ್ಕದಲ್ಲಿಯೇ ಪತ್ನಿ ಇರುವಾಗ ನೀವು ಹೀಗೆ ಕೇಳುವುದು ಸರಿಯೇ ಎಂದು ತಮಾಷೆ ಮಾಡಿದರು. ಕೊನೆಗೆ, ನನಗೆ ಈ ಜನ್ಮದಲ್ಲಂತೂ ಸ್ತ್ರೀದೋಷ ಇಲ್ಲವೇ ಇಲ್ಲ ಎಂದರು.
ಯಾರು ಬರ್ತಾರೆ ಹತ್ತಿರ?
ಸ್ತ್ರೀಯರಿಗೆ ಸುಂದರವಾದ ನಾಯಕ ಬೇಕು. ಆದರೆ ಈ ಎರಡೂ ಚಿತ್ರಗಳಲ್ಲಿ ನನ್ನ ಗೆಟಪ್ ನೋಡಿದ್ರೆ ಯಾವ ಹುಡುಗಿ ತಾನೆ ಹತ್ತಿರ ಬರ್ತಾಳೆ? ಅದಕ್ಕಾಗಿಯೇ ಸಿನಿಮಾದಲ್ಲಿ ನಾಯಕಿ ಅಥ್ವಾ ರೊಮಾನ್ಸ್ ಇಲ್ಲ ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

