- Home
- Entertainment
- Sandalwood
- 30 ಲಕ್ಷದ ಕನ್ನಡ ಸಿನಿಮಾ ಗಳಿಸಿದ್ದು 5 ಕೋಟಿ: ಕ್ಷಣ ಕ್ಷಣಕ್ಕೂ ಭಯ ಬೀಳಿಸೋ ಹಾರರ್ ಕಥೆ!
30 ಲಕ್ಷದ ಕನ್ನಡ ಸಿನಿಮಾ ಗಳಿಸಿದ್ದು 5 ಕೋಟಿ: ಕ್ಷಣ ಕ್ಷಣಕ್ಕೂ ಭಯ ಬೀಳಿಸೋ ಹಾರರ್ ಕಥೆ!
2013ರಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಫೌಂಡ್ ಫೋಟೇಜ್ ಚಿತ್ರ. ಚಾರಣಕ್ಕೆಂದು ಅರಣ್ಯಕ್ಕೆ ಹೋದ ಯುವಕರು ಕಾಣೆಯಾಗಿ ಸಾಯುವ ಘಟನೆಗಳ ಸುತ್ತ ಸಿನಿಮಾ ನಡೆಯುತ್ತದೆ.

ಹಾರರ್ ಸಿನಿಮಾ
ಕನ್ನಡದಲ್ಲಿಯೂ ಅನೇಕ ಹಾರರ್ ಸಿನಿಮಾಗಳಿವೆ. ಒಂದೊಂದು ಸಿನಿಮಾಗಳು ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸುತ್ತವೆ. ಅದರಲ್ಲಿಯೂ ಹೊಸಬರ ಚಿತ್ರಗಳು ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸುತ್ತವೆ. ಇಂದು ನಾವು ನಿಮಗೆ ವಿಶೇಷ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ.
2013ರಲ್ಲಿ ಬಿಡುಗಡೆ
2013ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಕೆಎಸ್ ಅಶೋಕ್ ಕಥೆ ಬರೆದು ನಿರ್ದೇಶನ ಮಾಡಿದ್ದರು. 1999ರ ವೇಳೆ ಅಮೆರಿಕದಲ್ಲಿ ನಡೆದ ಘಟನೆಯನ್ನಾಧರಿಸಿ ಈ ಸಿನಿಮಾವನ್ನು ತೆರೆ ಮೇಲೆ ತರಲಾಗಿತ್ತು. ಕನ್ನಡದ ಟೈಟಲ್‌ನಲ್ಲಿಯೇ 2014ರಲ್ಲಿ ಹಿಂದಿಗೆ ರಿಮೇಕ್ ಆಗಿತ್ತು.
6-5=2.
ಇಂದು ನಾವು ಹೇಳುತ್ತಿರೋದು ಕನ್ನಡದ ಮೊದಲ ಫೌಂಡ್ ಫೋಟೇಜ್ ಚಿತ್ರ 6-5=2. ಬ್ಲೇರ್ ವಿಚ್ ಪ್ರಾಜೆಕ್ಟ್ ಸ್ಪೂರ್ತಿ ಪಡೆದು ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಕೆಲವರು ಚಾರಣಕ್ಕಾಗಿ ದಟ್ಟವಾದ ಅರಣ್ಯದೊಳಗೆ ಹೋಗುತ್ತಾರೆ. ಈ ಯುವಕರಲ್ಲಿ ಒಬ್ಬರ ನಂತರ ಒಬ್ಬರು ಕಾಣೆಯಾಗುತ್ತಾರೆ. ನಂತರ ಕಾಣೆಯಾದವರು ಸಾಯುತ್ತಾರೆ.
6-5=2.
ಅರಣ್ಯದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಚಾರಣಿಗರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ. ದರ್ಶನ್ ಅಪೂರ್ವ, ಕೃಷ್ಣ ಪ್ರಕಾಶ್, ವಿಜಯ್ ಚೆಂಡೂರ್, ಪಲ್ಲವಿ, ತನುಜಾ ಮತ್ತು ಮೃತ್ಯುಂಜಯ್ 6-5=2 ಸಿನಿಮಾದಲ್ಲಿ ಸಹಜವಾಗಿಯೇ ನಟಿಸಿದ್ದಾರೆ.
6-5=2
ವರದಿಗಳ ಪ್ರಕಾರ 6-5=2 ಸಿನಿಮಾ ಕೇವಲ 30 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣವಾಗಿತ್ತು. ಬಿಡುಗಡೆ ಬಳಿಕ ಚಿತ್ರ ಬರೋಬ್ಬರಿ 5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹೊಸತನದೊಂದಿಗೆ ಬಂದ ಈ ಸಿನಿಮಾ ನೋಡುಗರಿಗೆ ಇಷ್ಟವಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

