Photos: 6 ವರ್ಷಗಳ ಬಳಿಕ ಮುಂಡಗೋಡಿಗೆ ಆಗಮಿಸಿದ ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ!
ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಅವರು ಆರು ವರ್ಷಗಳ ನಂತರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕಾಲೋನಿಗೆ ಆಗಮಿಸಿದ್ದು, ಕಾಲೋನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಭಾರತದಿಂದಲೇ ನಮ್ಮ ಬೌದ್ಧ ಸಂಸ್ಕೃತಿ ಬೆಳೆಯುತ್ತ ಬಂದಿದೆ: ದಲಾಯಿ ಲಾಮಾ
ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಅವರು ಆರು ವರ್ಷಗಳ ನಂತರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಟಿಬೆಟಿಯನ್ ಕಾಲೋನಿಗೆ ಆಗಮಿಸಿದ್ದು, ಕಾಲೋನಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಕ್ಯಾಂಪ್ ನಂ. 6ರ ಗೊಮಾಂಗ್ ಮೊನಾಸ್ಟರಿಯ ಕಾರ್ಯಕ್ರಮದಲ್ಲಿ ಬೌದ್ಧ ಭಿಕ್ಷುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಬೌದ್ಧ ಸಂಸ್ಕೃತಿಯು ನಮ್ಮ ಭಾರತ ದೇಶದಿಂದಲೇ ಬೆಳೆಯುತ್ತಾ ಬಂದಿದೆ.
ಮುಂಡಗೋಡದ ಟಿಬೆಟಿಯನ್ ಕಾಲೋನಿಯಲ್ಲಿ ಹಬ್ಬದ ವಾತಾವರಣ
ಇಡೀ ವಿಶ್ವದಲ್ಲಿ ಬೌದ್ಧ ಧರ್ಮದ ವಿಚಾರಗಳು ಹೆಚ್ಚು ಗಮನ ಸೆಳೆಯುತ್ತಿವೆ ಮತ್ತು ಚೀನಾದಲ್ಲಿಯೂ ಬೌದ್ಧ ಧರ್ಮದ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದರು. ಮುಂಡಗೋಡದ ಟಿಬೆಟಿಯನ್ ಕಾಲೋನಿಯಲ್ಲಿ ಬೌದ್ಧ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಚೆನ್ನಾಗಿ ಉಳಿಸಿಕೊಂಡು ಬಂದಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಟಿಬೆಟಿಯನ್ ಹಿರಿಯ ಬೌದ್ಧ ಭಿಕ್ಷುಗಳು ಗುರು ದಲಾಯಿ ಲಾಮಾ ಅವರಿಗೆ ಸನ್ಮಾನ ಮಾಡಿದರು.
130 ವರ್ಷಗಳ ಕಾಲ ಬಾಳಿ ಧರ್ಮ, ಜನ ಸೇವೆ ಮಾಡುವೆ ಎಂದ ದಲಾಯಿ ಲಾಮಾ
ದಲಾಯಿ ಲಾಮಾ, ತಾವು 130 ವರ್ಷಗಳ ಕಾಲ ಬಾಳಿ ಧರ್ಮ ಹಾಗೂ ಜನರ ಸೇವೆ ಮಾಡುವುದಾಗಿ ತಿಳಿಸಿದರು. ಅವರ ಈ ಹೇಳಿಕೆಯನ್ನು ಕೇಳಿ ಅಲ್ಲಿ ನೆರೆದಿದ್ದ ಬೌದ್ಧ ಸನ್ಯಾಸಿಗಳು ಸಂತೋಷದಿಂದ ತಲೆಬಾಗಿ ಚಪ್ಪಾಳೆ ತಟ್ಟಿದರು.
45 ದಿನಗಳ ಕಾಲ ಮುಂಡಗೋಡ ಟಿಬೆಟಿಯನ್ ಕ್ಯಾಂಪ್ ವಾಸ್ತವ್ಯ
ದಲಾಯಿ ಲಾಮಾ ಅವರು ಮುಂಬರುವ 45 ದಿನಗಳ ಕಾಲ ಮುಂಡಗೋಡ ಟಿಬೆಟಿಯನ್ ಕ್ಯಾಂಪ್‌ನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ಅವರು ಈ ಬಾರಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. 2019ರ ಡಿಸೆಂಬರ್ 12 ರಂದು ಆಗಮಿಸಿದ್ದಾಗ 12 ದಿನಗಳ ಕಾಲ ವಿವಿಧ ಚರ್ಚಾ ಕಾರ್ಯಕ್ರಮಗಳು ಮತ್ತು ಪದವಿ ಪ್ರದಾನದಲ್ಲಿ ಪಾಲ್ಗೊಂಡಿದ್ದರು. ಆದರೆ, ಈ 45 ದಿನಗಳ ವಾಸ್ತವ್ಯ ಕೇವಲ ವಿಶ್ರಾಂತಿಗಾಗಿ ಮಾತ್ರ ಎಂದು ತಿಳಿದುಬಂದಿದೆ.
ದಲಾಯಿ ಲಾಮಾ ಆಗಮನ ಹಿನ್ನೆಲೆ ಬಿಗಿ ಭದ್ರತೆ
ಟಿಬೆಟಿಯನ್ ಧರ್ಮಗುರು ಆಗಮನದ ಹಿನ್ನೆಲೆಯಲ್ಲಿ ಪೊಲೀಸರಿಂದ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಸುಮಾರು 400 ಪೊಲೀಸರನ್ನು ನಿಯೋಜಿಸಲಾಗಿದ್ದು, ಟಿಬೆಟಿಯನ್ನರು ಸಹ ಲಾಮಾ ಅವರಿಗೆ ಸುರಕ್ಷತೆ ಒದಗಿಸುವಲ್ಲಿ ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ.
ಪಾಸ್ ಇದ್ದವರಿಗೆ ಮಾತ್ರ ಟಿಬೇಟಿಯನ್ ಕಾಲೋನಿ ಪ್ರವೇಶ
ಭದ್ರತೆಯ ದೃಷ್ಟಿಯಿಂದ, ಟಿಬೆಟಿಯನ್ ಕ್ಯಾಂಪ್‌ನ ಒಳಗಡೆ ತೆರಳುವ ಎಲ್ಲಾ ವಾಹನಗಳಿಗೆ ಪಾಸ್ ಇದ್ದರೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಜೊತೆಗೆ, ಪಾಸ್ ಹೊಂದಿರುವ ಸಾರ್ವಜನಿಕರಿಗೆ ಮಾತ್ರ ಟಿಬೆಟಿಯನ್ ಕಾಲೋನಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಮತ್ತು ಕ್ಯಾಂಪ್‌ನ ಎರಡು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

