MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare ಗೌತಮ್​ ಹುಟ್ಟುಹಬ್ಬ: ವಯಸ್ಸೆಷ್ಟು? ತಂಗಿಯಾದವಳೇ ಪತ್ನಿಯಾದ ನಟನ ರೋಚಕ ಸ್ಟೋರಿ ಇಲ್ಲಿದೆ

Amruthadhaare ಗೌತಮ್​ ಹುಟ್ಟುಹಬ್ಬ: ವಯಸ್ಸೆಷ್ಟು? ತಂಗಿಯಾದವಳೇ ಪತ್ನಿಯಾದ ನಟನ ರೋಚಕ ಸ್ಟೋರಿ ಇಲ್ಲಿದೆ

ಅಮೃತಧಾರೆ ಸೀರಿಯಲ್ ಖ್ಯಾತಿಯ ಗೌತಮ್ ಪಾತ್ರಧಾರಿ, ನಟ ರಾಜೇಶ್ ನಟರಂಗ ಅವರ ಹುಟ್ಟುಹಬ್ಬದ ವಿಶೇಷ ಲೇಖನವಿದು. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ರಾಜೇಶ್, ಪ್ರಸ್ತುತ 'ಅಮೃತಧಾರೆ'ಯಲ್ಲಿ ಪತ್ನಿದ ಛಾಯಾ ಸಿಂಗ್ ಜೊತೆ ಹಿಂದೆ 'ರೌಡಿ ಅಳಿಯ' ಚಿತ್ರದಲ್ಲಿ  ನಟಿಸಿದ್ದರು.

2 Min read
Author : Suchethana D
Published : Apr 18 2026, 12:11 PM IST
Share this Photo Gallery
  • FB
  • TW
  • Linkdin
  • Whatsapp
16
ಅಮೃತಧಾರೆ ಗೌತಮ್​ಗೆ ಹುಟ್ಟುಹಬ್ಬ
Image Credit : Instagram

ಅಮೃತಧಾರೆ ಗೌತಮ್​ಗೆ ಹುಟ್ಟುಹಬ್ಬ

ರಾಜೇಶ್​ ನಟರಂಗ ಎಂದರೆ ಹಲವರಿಗೆ ತಿಳಿಯಲಿಕ್ಕಿಲ್ಲ. ಆದರೆ ಅಮೃತಧಾರೆಯ ಗೌತಮ್​ ದಿವಾನ್​ ಎಂದಾಕ್ಷಣ, ಸೀರಿಯಲ್​ ಪ್ರಿಯರ ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರ ಕಣ್ಣುಗಳು ಅರಳುತ್ತವೆ. ಇದ್ದರೆ ಇಂಥ ಗಂಡ ಇರಬೇಕು ಎಂದು ಎನ್ನಿಸಿಕೊಂಡಿರುವ ಗೌತಮ್​ ಪಾತ್ರಧಾರಿಯೇ ರಾಜೇಶ್​ ನಟರಂಗ. ಇಂದು ಅರ್ಥಾರ್​ ಏಪ್ರಿಲ್​ 18 ನಟ ರಾಜೇಶ್​ ನಟರಂಗ (Rajesh Nataranga) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಗೂಗಲ್​ ದಾಖಲೆಯ ಪ್ರಕಾರ, ರಾಜೇಶ್​ ಹುಟ್ಟಿದ್ದು 1977ರಲ್ಲಿ. ಇದರ ಪ್ರಕಾರ ಇಂದು ಅವರು ತಮ್ಮ 49ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

26
ರಿಯಲ್​ ಲೈಫ್​ ಪತ್ನಿ, ಮಗಳು
Image Credit : Instagram

ರಿಯಲ್​ ಲೈಫ್​ ಪತ್ನಿ, ಮಗಳು

ಅಂದಹಾಗೆ, ರಾಜೇಶ್​ ಅವರಿಗೆ ಸದ್ಯ ಸೀರಿಯಲ್​ನಲ್ಲಿ ಪತ್ನಿಯಾಗಿರುವವಳು ಭೂಮಿಕಾ ಅರ್ಥಾತ್​ ನಟಿ ಛಾಯಾ ಸಿಂಗ್​. ಸೀರಿಯಲ್​ನಲ್ಲಿ ಇಬ್ಬರು ಮಕ್ಕಳು. ಆದರೆ, ರಿಯಲ್​ ಲೈಫ್​ನಲ್ಲಿ ಪತ್ನಿ ಚೈತ್ರಾ ಹಾಗೂ ಮಗಳು ಧ್ವನಿ ಇದ್ದಾರೆ. ಮಗಳು ಅವರೂ ಕೂಡಾ ಅದ್ಭುತ ಕಲಾವಿದೆ. ಅಪ್ಪನ ಹಾಗೆ ಮಗಳು ಕೂಡಾ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಬಿಯಾಂಡ್ ದಿ ಕ್ಲೌಡ್ ಎನ್ನುವ ಬಾಲಿವುಡ್ ಚಿತ್ರದಲ್ಲಿ ಬಾಲನಟಿಯಾಗಿ, ಪಾಚುವುಂ ಅದ್ಭುತ ವಿಲಕ್ಕುಂ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ ಧ್ವನಿ. ಈಕೆ ಡಿಗ್ರಿ ಎರಡನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

Related Articles

Related image1
Bigg Boss ಸೂರಜ್​ ಸಿಂಗ್​- ರಾಶಿಕಾ ಕೊಟ್ಟರು ಗುಡ್​ನ್ಯೂಸ್​: ಚಿನ್ನ ಖರೀದಿಸ್ತಾ ಜೋಡಿ ಹೇಳಿದ್ದೇನು?
Related image2
ಹನಿಮೂನ್​ಗೆ 50 ಮಂದಿ, ಹೆಸ್ರು ಹೇಳಲು 3 ತಿಂಗ್ಳು! ಕೋಟೆ ಪ್ರಭಾಕರ್​ ಲವ್​ಸ್ಟೋರಿಗೆ ನಾಚಿದ Amruthadhaare ಭೂಮಿಕಾ
36
ರಾಜೇಶ್​ ಕುರಿತು
Image Credit : our own

ರಾಜೇಶ್​ ಕುರಿತು

ಇನ್ನು ರಾಜೇಶ್​ ಅವರ ಬಗ್ಗೆ ಕಿರುತೆರೆ, ಹಿರಿತೆರೆ ಪ್ರಿಯರಿಗೆ ತಿಳಿದಿದ್ದೇ. ಅವರು 'ಸ್ಮಶಾನ' ಮತ್ತು 'ಕುರುಕ್ಷೇತ್ರ' ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಗುರುತಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟವರು. 'ಮಾಯಾಮೃಗ' ಧಾರಾವಾಹಿಯಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ ರಾಜೇಶ್ ನಟರಂಗ ಮುಂದೆ 'ಮುಕ್ತ', 'ಬದುಕು', 'ಶಕ್ತಿ', 'ಗುಪ್ತಗಾಮಿನಿ', 'ನಾನೂ ನನ್ನ ಕನಸು' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮ್‌ ಪಾತ್ರಕ್ಕೆ ಜೀವ ತುಂಬಿರುವ ರಾಜೇಶ್‌, ಪೋಷಕನಟನಾಗಿ, ಖಳನಟನಾಗಿ ಕನ್ನಡ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಕೂಡ ತಮ್ಮದೇ ಆದ ಛಾಪನ್ನ ಮೂಡಿಸಿದ್ದಾರೆ. ಅವರ ಅಭಿನಯಕ್ಕೆ ನಿಬ್ಬೆರಗಾಗದವರೇ ಇಲ್ಲ.

46
 ತಂಗಿಯಾದವಳೇ ಪತ್ನಿಯಾದಳು!
Image Credit : Instagram

ತಂಗಿಯಾದವಳೇ ಪತ್ನಿಯಾದಳು!

ರಾಜೇಶ್​ ನಟನೆಯ ಅಮೃತಧಾರೆಯಲ್ಲಿ ಇವರ ಮತ್ತು ಭೂಮಿಕಾ ಜೋಡಿಯನ್ನು ಮೆಚ್ಚಿಕೊಳ್ಳದ ಸೀರಿಯಲ್​ ಪ್ರಿಯರೇ ಇಲ್ಲ. ಮಧ್ಯವಯಸ್ಸಿನಲ್ಲಿ ಮದುವೆಯಾದ ಈ ಜೋಡಿಯ ಬಾಂಡಿಂಗ್​ ನೋಡಿ ಭಲೆ ಭಲೆ ಎನ್ನುವವರೇ. ಆದರೆ ಈ ಜೋಡಿ ಹಿಂದೊಮ್ಮೆ ಅಣ್ಣ-ತಂಗಿಯಾಗಿ ನಟಿಸಿತ್ತು ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅಂದು ಅಣ್ಣ-ತಂಗಿಯಾಗಿದ್ದ ಈ ಜೋಡಿ ಇಂದು ಪತಿ-ಪತ್ನಿಯಾಗಿದೆ.

56
ರೌಡಿ ಅಳಿಯ ಚಿತ್ರ
Image Credit : Instagram

ರೌಡಿ ಅಳಿಯ ಚಿತ್ರ

2004ರಲ್ಲಿ ಬಿಡುಗಡೆಯಾಗಿದ್ದ ರೌಡಿ ಅಳಿಯ ಚಿತ್ರದಲ್ಲಿ ಶಿವರಾಜ್​ ಕುಮಾರ್​, ಶರಣ, ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರೆ, ರೌಡಿ ಅಣ್ಣ-ತಂಗಿಯಾಗಿ ಕಾಣಿಸಿಕೊಂಡಿದ್ದರು ಗೌತಮ್​ ಮತ್ತು ಭೂಮಿಕಾ ಅರ್ಥಾತ್​ ರಾಜೇಶ್​ ಮತ್ತು ಛಾಯಾ ಸಿಂಗ್​! ಇದರಲ್ಲಿ ಛಾಯಾ ಸಿಂಗ್​ ಕುಪ್ಪಮ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

66
ಆಗಲೂ ಇಷ್ಟ, ಈಗಲೂ ಇಷ್ಟ
Image Credit : our own

ಆಗಲೂ ಇಷ್ಟ, ಈಗಲೂ ಇಷ್ಟ

ಅಂದು ಅಣ್ಣ-ತಂಗಿಯಾಗಿ ನಟಿಸಿದ್ದವರು ಇಂದು ಗಂಡ- ಹೆಂಡತಿಯಾಗಿ ನಟಿಸುತ್ತಿದ್ದಾರೆ. ಅಲ್ಲಿಯೂ ಇವರಿಬ್ಬರ ಜೋಡಿ ಸಕತ್​ ಸೌಂಡ್​ ಮಾಡಿದ್ದರೆ, ಈಗಲೂ ಅದೇ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ. ಒಂದೇ ವ್ಯತ್ಯಾಸ ಎಂದರೆ ಆ ಚಿತ್ರದಲ್ಲಿ ಇವರದ್ದು ಸೈಡ್​ ರೋಲ್​ ಆದರೆ, ಇಲ್ಲಿ ಲೀಡ್​ ರೋಲ್​​ ಅಷ್ಟೇ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಅಮೃತಧಾರೆ
ಜೀ ಕನ್ನಡ
ಮನರಂಜನಾ ಸುದ್ದಿ
ಸಂಬಂಧಗಳು

Latest Videos
Recommended Stories
Recommended image1
‘ನಂದಗೋಕುಲ’ ಸೀರಿಯಲ್ ನಂದ ಪಾತ್ರದ ಬಗ್ಗೆ ವೀಕ್ಷಕರು ಕಿಡಿ… ಅಪ್ಪನಿಂದಲೇ ಮನೆ ನರಕ ಆಗುತ್ತಾ?
Recommended image2
ಮುದುಕಿ ಬೇಕಾದ್ರೂ ಅನ್ನಿ, ​ಆಂಟಿ ಮಾತ್ರ ಹೇಳ್ಬೇಡಿ ಪ್ಲೀಸ್: ನಟಿ ವಿದ್ಯಾ ಮೂರ್ತಿ ಖಡಕ್​ ವಾರ್ನಿಂಗ್​
Recommended image3
ಕಿರುತೆರೆಯ ಭರವಸೆ ನಟ ಸಿದ್ಧಾರ್ಥ್ ವೇಣುಗೋಪಾಲ್ ಇನ್ನಿಲ್ಲ; ಸಾವಿನ ಹೋರಾಟದಲ್ಲಿ ಗೆದ್ದ ಕ್ಯಾನ್ಸರ್!
Related Stories
Recommended image1
Bigg Boss ಸೂರಜ್​ ಸಿಂಗ್​- ರಾಶಿಕಾ ಕೊಟ್ಟರು ಗುಡ್​ನ್ಯೂಸ್​: ಚಿನ್ನ ಖರೀದಿಸ್ತಾ ಜೋಡಿ ಹೇಳಿದ್ದೇನು?
Recommended image2
ಹನಿಮೂನ್​ಗೆ 50 ಮಂದಿ, ಹೆಸ್ರು ಹೇಳಲು 3 ತಿಂಗ್ಳು! ಕೋಟೆ ಪ್ರಭಾಕರ್​ ಲವ್​ಸ್ಟೋರಿಗೆ ನಾಚಿದ Amruthadhaare ಭೂಮಿಕಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved