- Home
- Entertainment
- TV Talk
- Amruthadhaare Serial: ಮತ್ತೆ ಅಪಾಯದಲ್ಲಿರೋ ಭೂಮಿಕಾಗೆ ಮಹಾ ಸತ್ಯ ಗೊತ್ತಾಗೋ ಟೈಮ್ ಬಂದಾಯ್ತು! ಹಬ್ಬ ಮಾಡ್ರೋ
Amruthadhaare Serial: ಮತ್ತೆ ಅಪಾಯದಲ್ಲಿರೋ ಭೂಮಿಕಾಗೆ ಮಹಾ ಸತ್ಯ ಗೊತ್ತಾಗೋ ಟೈಮ್ ಬಂದಾಯ್ತು! ಹಬ್ಬ ಮಾಡ್ರೋ
Amruthadhaare Tv Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ಗೆ 600 ಕೋಟಿ ರೂಪಾಯಿ ಸಾಲವನ್ನು ತೀರಿಸಲು ಈಗ ಗೌತಮ್ ಸಹಾಯ ಬೇಕಾಗಿದೆ. ಈಗ ಅವನು ಭೂಮಿಕಾಳನ್ನು ಟಾರ್ಗೆಟ್ ಮಾಡಿದ್ದಾನೆ. ಹಾಗಾದರೆ ಮುಂದೆ ಏನಾಗುವುದು?

600 ಕೋಟಿ ರೂಪಾಯಿ ಸಾಲ ತೀರಿಸಬೇಕು
ಜಯದೇವ್, ಶಕುಂತಲಾ ಬಳಿ ಆಸ್ತಿಯಿದ್ದರೂ ಕೂಡ 600 ಕೋಟಿ ರೂಪಾಯಿ ಸಾಲ ಇದೆ. ತನ್ನ ಆಸ್ತಿಯನ್ನು ಮಾತ್ರ ಈ ಸಾಲಕ್ಕೆ ಕೊಡೋದಿಲ್ಲ ಎಂದು ಜಯದೇವ್ ಹೇಳಿದ್ದಾನೆ, ಇನ್ನೊಂದು ಕಡೆ ಭೂಮಿಕಾ ಹಾಗೂ ಅವನ ಮಗು ಸಹಿ ಹಾಕಿದರೆ ಮಾತ್ರ ಗೌತಮ್ ಆಸ್ತಿಯನ್ನು ಅವರು ಮಾರಾಟ ಮಾಡಬಹುದು.
ಭೂಮಿಕಾ, ಮಗ ಕಿಡ್ನ್ಯಾಪ್ ಆಗ್ತಾರಾ?
ಐದು ವರ್ಷಗಳಿಂದ ಗೌತಮ್ ಎಲ್ಲಿದ್ದಾನೆ ಎಂದು ಹುಡುಕಿದರೂ ಕೂಡ ಸಿಕ್ಕಿರಲಿಲ್ಲ, ಆನಂದ್ ಕೂಡ ಸುಳಿವು ಕೊಟ್ಟಿರಲಿಲ್ಲ. ಈಗ ಗೌತಮ್ ಫೋನ್ ಸ್ವಿಚ್ ಆನ್ ಆಗಿದೆ. ಭೂಮಿಕಾ ಹಾಗೂ ಮಗುವನ್ನು ನಾವು ಕರೆದುಕೊಂಡು ಬಂದ್ರೆ, ಗೌತಮ್ ಬಂದೇ ಬರುತ್ತಾನೆ ಎಂದು ಜಯದೇವ್ ಪ್ಲ್ಯಾನ್ ಮಾಡಿದ್ದಾನೆ.
ಲಕ್ಷ್ಮೀಕಾಂತ್‌ಗೆ ಪ್ಲ್ಯಾನ್ ಗೊತ್ತಾಯ್ತು
ಜಯದೇವ್ ಪ್ಲ್ಯಾನ್ ಈಗ ಲಕ್ಷ್ಮೀಕಾಂತ್ ಮಾವನಿಗೆ ಗೊತ್ತಾಗಿದೆ. ಅವನು ಈ ವಿಷಯವನ್ನು ಹೇಗಾದರೂ ಮಾಡಿ ಗೌತಮ್‌ಗೆ ತಿಳಿಸಬೇಕು ಎಂದುಕೊಂಡಿದ್ದಾನೆ. ಹಾಗಾದರೆ ಭೂಮಿಕಾ ಹಾಗೂ ಅವನ ಮಗ ಸೇಫ್ ಆಗ್ತಾರಾ ಎಂಬ ಪ್ರಶ್ನೆ ಎದುರಾಗಿದೆ.
ಭೂಮಿಗೆ ಸತ್ಯ ಗೊತ್ತಾಗತ್ತಾ?
ಇನ್ನೊಂದು ಕಡೆ ಗೌತಮ್ ಜೊತೆಗಿರುವ ಆ ಮಗು, ಮಿಂಚು ಅಸಲಿಗೆ ಯಾರದ್ದು ಎನ್ನುವ ಪ್ರಶ್ನೆ ಕೂಡ ಎದುರಾಗಿದೆ. ಭೂಮಿ ಈ ಪ್ರಶ್ನೆಗೆ ಉತ್ತರ ಸಿಗದೆ ಒದ್ದಾಡುತ್ತಿದ್ದಾಳೆ. ಆಗ ಕಾವೇರಿ ಬಂದು “ನನಗೆ ಈ ಪ್ರಶ್ನೆಗೆ ಉತ್ತರ ಗೊತ್ತು” ಎಂದು ಹೇಳಿದ್ದಾಳೆ. ಹಾಗಾದರೆ ಗೌತಮ್, ದತ್ತು ತಗೊಂಡಿದ್ದಾನೆ ಎಂದು ಹೇಳುತ್ತಾಳೋ ಅಥವಾ ಅವಳಿಗೆ ಕಿಡ್ನ್ಯಾಪ್ ಕೇಸ್‌ನಲ್ಲಿ ಸಿಕ್ಕ ಮಗು ಎಂದು ಹೇಳುತ್ತಾಳೋ ಎಂದು ಕಾದು ನೋಡಬೇಕಿದೆ.
ಮುಂದೆ ಏನಾಗುವುದು?
ಮಗ ಆಕಾಶ್, ಮಿಂಚುಳಿಂದ ಗೌತಮ್ ಹಾಗೂ ಭೂಮಿಕಾ ಹತ್ತಿರ ಆಗುವ ಸಾಧ್ಯತೆ ಜಾಸ್ತಿ ಇದೆ. ಇನ್ನೊಂದು ಕಡೆ ಜಯದೇವ್, ಶಕುಂತಲಾಳ ದುಷ್ಟತನಕ್ಕೆ ಭೂಮಿಕಾ ಹಾಗೂ ಗೌತಮ್ ಬಲಿ ಆಗ್ತಾರಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

