- Home
- Entertainment
- TV Talk
- ತುತ್ತಿಗೆ ಕನ್ನ ಹಾಕಿದ ಅತ್ತೆಗೆ ಚಳಿ ಬಿಡಿಸಿದ ಗುಂಡಮ್ಮ; ಶಿವು ಮಾವನಿಗೆ ಪುಟ್ಟ ಕಥೆ ಹೇಳಿದ ಪಾರು!
ತುತ್ತಿಗೆ ಕನ್ನ ಹಾಕಿದ ಅತ್ತೆಗೆ ಚಳಿ ಬಿಡಿಸಿದ ಗುಂಡಮ್ಮ; ಶಿವು ಮಾವನಿಗೆ ಪುಟ್ಟ ಕಥೆ ಹೇಳಿದ ಪಾರು!
Annayya Serial: ಗುಂಡಮ್ಮ ತನ್ನ ಅತ್ತೆಯ ವಿರುದ್ಧ ಧ್ವನಿ ಎತ್ತುತ್ತಾಳೆ ಮತ್ತು ಶಿವುವಿನ ತಾಯಿಯ ಬಗ್ಗೆ ಪಾರ್ವತಿಯ ಕುತೂಹಲ ಹೆಚ್ಚುತ್ತದೆ. ಗುಂಡಮ್ಮನ ಅತ್ತೆ ಆಹಾರ ನೀಡದೆ ಕಷ್ಟ ಕೊಡುತ್ತಿರುವುದಕ್ಕೆ ಗುಂಡಮ್ಮ ಕ್ಲಾಸ್ ತೆಗೆದುಕೊಂಡಿದ್ದಾಳೆ. ಶಿವುವಿನ ತಾಯಿಯ ಬಗ್ಗೆ ತಿಳಿದುಕೊಳ್ಳಲು ಪಾರ್ವತಿ ಕಥೆಯ ಮೂಲಕ ಪ್ರಯತ್ನಿಸುತ್ತಾಳೆ.
15

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್ ದಿನದಿಂದ ದಿನಕ್ಕೆ ತಿರುವುಗಳನ್ನು ನೀಡುವ ಮೂಲಕ ಪ್ರೇಕ್ಷಕರ ವರ್ಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಈಗಾಗಲೇ ನಂಬರ್ 1 ಪಟ್ಟದಿಂದ ಅತ್ತಿತ್ತ ಆಗುತ್ತಿರುವ ಅಣ್ಣಯ್ಯ ಧಾರಾವಾಹಿಯ ರೋಚಕ ತಿರುವುಗಳು ನೋಡುಗರಿಗೆ ಇಷ್ಟವಾಗುತ್ತಿದೆ.
25
ಮದುವೆಯಾಗಿ ಬಂದಾಗಿನಿಂದಲೂ ಗುಂಡಮ್ಮನಿಗೆ ಅತ್ತೆ ಹೊಟ್ಟೆ ತುಂಬಾ ಊಟ ಹಾಕುತ್ತಿಲ್ಲ. ಹಾಗಾಗಿ ಅರ್ಧ ಹೊಟ್ಟೆಯಲ್ಲಿ ಗುಂಡಮ್ಮ ದಿನಗಳನ್ನು ಮುಂದೂಡುತ್ತಿದ್ದಳು. ಆಸ್ಪತ್ರೆಯಲ್ಲಿ ಗೋಡಂಬಿ ಅಣ್ಣನ ಮುಂದೆ ತನ್ನೆಲ್ಲಾ ಕಷ್ಟಗಳನ್ನು ಹೇಳಿ ಗುಂಡಮ್ಮ ಕಣ್ಣೀರು ಹಾಕಿದ್ದಳು.
35
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಅತ್ತೆಗೆ ಗುಂಡಮ್ಮ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾಳೆ. ಧೈರ್ಯವಾಗಿ ಏನು ನಿಮ್ಮ ಸಮಸ್ಯೆ ಎಂದು ಕೇಳಿದ್ದಾಳೆ. ತಾಯಿ ಮಾಕಳವ್ವ ಶಿವಣ್ಣನ ಮೈಮೇಲೆ ಬಂದು ತುತ್ತಿಗೂ, ಮುತ್ತಿಗೂ ಕೈ ಹಾಕಬಾರದು ಎಂದು ಹೇಳಿಕೆ ನೀಡಿದ್ದಳು. ಈ ಮಾತು ನೆನಪಾಗುತ್ತಲೇ ಗುಂಡಮ್ಮನ ಅತ್ತೆ ಎಸ್ಕೇಪ್ ಆಗಿದ್ದಾಳೆ.
45
ANNAYYA
ಇತ್ತ ಶಿವು ಮಾವನ ತಾಯಿ ಶಾರದಾ ಬಗ್ಗೆ ತಿಳಿದುಕೊಳ್ಳಲು ಪಾರ್ವತಿ ಪ್ರಯತ್ನಿಸುತ್ತಿದ್ದಾಳೆ. ಈ ಹಿಂದೆ ತಾಯಿ ಬಗ್ಗೆ ವಿಚಾರಿಸಿದ್ದಕ್ಕೆ ಶಿವು ಕೋಪಗೊಂಡಿದ್ದನು. ಎಂದಿಗೂ ತಾಯಿಯ ಕುರಿತು ಕೇಳಬೇಡ ಎಂದು ಕೇಳಿಕೊಂಡಿದ್ದನು. ನಂತರ ಕೋಪಗೊಂಡಿದ್ದಕ್ಕೆ ಪಾರ್ವತಿಯನ್ನು ಕೂಸುಮರಿ ಮಾಡಿದ್ದನು.
55
ಇಂದಿನ ಪ್ರೋಮೋದಲ್ಲಿ ಮಾವ ಶಿವುಗೆ ಪಾರ್ವತಿ ಪುಟ್ಟದಾದ ಕಥೆಯೊಂದನ್ನು ಹೇಳಿದ್ದಾಳೆ. ಒಂದೂರಿನಲ್ಲಿ ಓರ್ವನಿಗೆ ನಾಲ್ವರು ಸೋದರಿಯರಿದ್ದರು. ಆದ್ರೆ ಅವರ ತಾಯಿಯೇ ಮಿಸ್ ಆಗಿದ್ದಳು ಎಂದು ಪಾರ್ವತಿ ಹೇಳುತ್ತಾನೆ. ನನ್ನ ತಾಯಿಯ ವಿಷಯ ಮುಗಿದ ಅಧ್ಯಾಯ ಎಂದು ಶಿವು ಕೈ ಮುಗಿಯುತ್ತಾನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos

