- Home
- Entertainment
- TV Talk
- ಅಮ್ಮಂಗೆ ಸುಳ್ಳು ಹೇಳಿ ಬೆಂಗಳೂರು ಎಂಟ್ರಿ: ಕದ್ದುಮುಚ್ಚಿ ಸೀರಿಯಲ್ನಲ್ಲಿ ನಟನೆ- ಅಣ್ಣಯ್ಯ'ರಾಣಿ' ರೋಚಕ ಸ್ಟೋರಿ
ಅಮ್ಮಂಗೆ ಸುಳ್ಳು ಹೇಳಿ ಬೆಂಗಳೂರು ಎಂಟ್ರಿ: ಕದ್ದುಮುಚ್ಚಿ ಸೀರಿಯಲ್ನಲ್ಲಿ ನಟನೆ- ಅಣ್ಣಯ್ಯ'ರಾಣಿ' ರೋಚಕ ಸ್ಟೋರಿ
'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ರಾಣಿ, ನಿಜನಾಮ ರಾಘವಿ ಅರಳಗುಂಡಗಿ, ಕಲಬುರ್ಗಿಯಿಂದ ಯಾವುದೇ ಹಿನ್ನೆಲೆ ಇಲ್ಲದೆ ಬಣ್ಣದ ಲೋಕಕ್ಕೆ ಬಂದವರು. ನಟಿಯಾಗುವ ಆಸೆಯಿಂದ ಅಮ್ಮನಿಗೆ ಸಾಫ್ಟ್‌ವೇರ್ ಕೋರ್ಸ್ ಎಂದು ಸುಳ್ಳು ಹೇಳಿ ಬೆಂಗಳೂರು ಸೇರಿ, ಹಲವು ಕಷ್ಟಗಳನ್ನು ದಾಟಿ ಇಂದು ಕಿರುತೆರೆಯಲ್ಲಿ ಯಶಸ್ಸು ಕಂಡಿದ್ದಾರೆ.

ಅಣ್ಣಯ್ಯ ಸೀರಿಯಲ್ ರಾಣಿ
ಅಣ್ಣಯ್ಯ ಸೀರಿಯಲ್ ರಾಣಿ ಎಂದರೆ ಸೀರಿಯಲ್ ವೀಕ್ಷಕರಿಗೆ ಮುಖದಲ್ಲಿ ಒಂದು ನಗು ಮೂಡುತ್ತದೆ. ಅಣ್ಣಯ್ಯನ ಮುದ್ದಿನ ತಂಗಿಯಾದ ರಾಣಿ, ಮೋಸದಿಂದ ಮದುವೆಯಾದರೂ ಗಂಡನ ಬದುಕಿನಲ್ಲಿ ರಾಣಿಯೇ ಆಗಿ ಬದುಕುತ್ತಿರುವ, ತಮ್ಮ ಅಭಿನಯದಿಂದ ಅಪಾರ ಅಭಿಮಾನಿಗಳ ಗಳಿಸಿರುವ ರಾಣಿಯ ನಿಜವಾದ ಹೆಸರು ರಾಘವಿ ಅರಳಗುಂಡಗಿ.
ಹಿನ್ನೆಲೆ ಇಲ್ಲದೇ ಬಂದವರು
ಕಲಬುರ್ಗಿಯ ರಾಘವಿ ಅವರು, ಯಾವುದೇ ಬಣ್ಣದ ಲೋಕದ ಹಿನ್ನೆಲೆ ಇಲ್ಲದೆಯೇ ಸೀರಿಯಲ್ಗೆ ಬಂದವರು. ಹೆಣ್ಣುಮಕ್ಕಳು ಸಿನಿಮಾದಲ್ಲಿ ನಟನೆ ಎಂದರೆ ಇಂದಿಗೂ ಬಹಳಷ್ಟು ಮನೆಯಲ್ಲಿ ಒಪ್ಪಿಗೆ ಸೂಚಿಸುವುದು ಬಲು ಕಷ್ಟ. ಕಾಲ ಎಷ್ಟೇ ಬದಲಾದರೂ ಈ ಬಣ್ಣದ ಲೋಕದ ಸಹವಾಸ ಬೇಡ ಎನ್ನುವವ ಹಲವು ಕುಟುಂಬಗಳು ಇವೆ. ಅಂಥದ್ದರಲ್ಲಿ ಒಂದು ರಾಘವಿ ಅವರ ಕುಟುಂಬ. ಆದರೆ,, ಅಮ್ಮನಿಗೆ ಸುಳ್ಳು ಹೇಳಿ ಬೆಂಗಳೂರು ಸೇರಿ, ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ ನಟಿ.
ಮದ್ವೆಯಾಗು ಅಂದ್ರು
ನನಗೆ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ತುಂಬಾ ಆಸೆಯಾಗಿತ್ತು. ಮನೆಯಲ್ಲಿ ಇದನ್ನು ಒಪ್ಪುವುದಿಲ್ಲ ಎಂದು ತಿಳಿದಿದ್ದರೂ ಅಮ್ಮನಿಗೆ ಒಮ್ಮೆ ಕೇಳಿದ್ದೆ. ಬೇಡ ಬೇಡ ಅದೆಲ್ಲಾ ಬೇಡ, ಮದ್ವೆಯಾಗು ಎಂದರು. ನಾನು ಇಲ್ಲಪ್ಪ, ನನ್ನ ಕಾಲ ಮೇಲೆ ನಾನುನಿಂತ ಮೇಲೆ ಮದುವೆ ಎಂದು ಅಮ್ಮನಿಗೆ ಹೇಳಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕೋರ್ಸ್ ಸೇರುತ್ತೇನೆ ಎಂದು ಸುಳ್ಳು ಹೇಳಿ ಬಂದವಳು ಎಂದು ನಟಿ ರಾಘವಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಹೆಸರಿಗೆ ಒಂದು ಕೋರ್ಸ್ ಸೇರಿದೆ
ನನಗೆ ಇಲ್ಲಿ ಯಾರೂ ಪರಿಚಯವಿರಲಿಲ್ಲ. ಹೆಸರಿಗೆ ಒಂದು ಸಾಫ್ಟ್‌ವೇರ್ ಕೋರ್ಸ್ಗೆ ಸೇರಿದೆ. ಆದರೆ ಆಡಿಷನ್ ಕೊಡುತ್ತಲೇ ಇದ್ದೆ. ಕ್ಲಾಸ್ಗೆ ಬಂಕ್ ಹಾಕುತ್ತಿದ್ದುದರಿಂದ ಟೀಚರ್ಸ್ ತುಂಬಾ ಬೈಯುತ್ತಿದ್ದರು. ಆದರೂ ನನ್ನ ಗಮನವೆಲ್ಲಾ ಆಡಿಷನ್ ಕಡೆಗೇ ಇತ್ತು ಎಂದಿದ್ದಾರೆ.
ಅಸಿಸ್ಟಂಟ್ ಡೈರೆಕ್ಟರ್ ಆಗಿ ಸೇರ್ಪಡೆ
ಕೊನೆಗೆ ಒಂದಿಷ್ಟು ಕಾಂಟ್ಯಾಕ್ಟ್ ಬೆಳೆಯಲಿ ಎಂದು ಅಸಿಸ್ಟಂಟ್ ಡೈರೆಕ್ಟರ್ ಆಗಿ ಸೇರಿಕೊಂಡೆ ಎಂದು ಅಂದಿನ ದಿನಗಳನ್ನು ನೆನೆದಿದ್ದಾರೆ ರಾಘವಿ.
ಆಡಿಷನ್ ಕೊಟ್ಟು ಸೆಲೆಕ್ಟ್
ಕೊನೆಗೆ ಜನರ ಪರಿಚಯವಾಗಿ ಆಡಿಷನ್ ಕೊಟ್ಟು ಸೀರಿಯಲ್ಗೆ ಸೆಲೆಕ್ಟ್ ಆದೆ ಎಂದಿದ್ದಾರೆ. ಅಂದಹಾಗೆ ಅಣ್ಣಯ್ಯ ಸೀರಿಯಲ್ಗೂ ಮುನ್ನ ನಟಿ ರಾಘವಿ ಅವರು, 'ಜೇನುಗೂಡು' ಧಾರಾವಾಹಿಯಲ್ಲಿ ನಯನಾ ಪಾತ್ರ ಮಾಡಿದ್ದರು. 'ಮಂಗಳಗೌರಿ ಮದುವೆ', 'ಅಂತರಪಟ' ಸೀರಿಯಲ್ಗಳಲ್ಲಿಯೂ ಸೈ ಎನ್ನಿಸಿಕೊಂಡರು.ಶಾರ್ಟ್ ಮೂವಿಗಳಲ್ಲೂ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

