ಗೊಂದಲದಲ್ಲಿ Annayya Serial ವೀಕ್ಷಕರು… ಶಿವುಗೆ ಮೊದಲೇ ಮದ್ವೆಯಾಗಿ ಮಗುವಾಗಿತ್ತಾ?
ಅಣ್ಣಯ್ಯ ಧಾರಾವಾಹಿಯಲ್ಲಿ ಹೊಸದೊಂದು ಕಥೆ ಶುರುವಾಗುತ್ತಿದೆ. ಎಲ್ಲಾ ಸರಿ ಇದೆ ಎನ್ನುವಾಗ ಪಾರುಗೆ ಇದೀಗ ಸಿಕ್ಕ ಮಗುವಿನ ಹೆಸರು ಎಂ ಶಿವು ಅಂತ ಇದ್ದು, ಆ ಮಗುವಿಗೂ ಶಿವುವಿಗೂ ಇರುವ ಸಂಬಂಧ ಏನು ಎನ್ನುವ ಬಗ್ಗೆ ವೀಕ್ಷಕರು ಗೊಂದಲಕ್ಕೊಳಕ್ಕಾಗಿದ್ದಾರೆ.

ಅಣ್ಣಯ್ಯ ಧಾರಾವಾಹಿ
ಜೀ ಕನ್ನದ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಈಗ ಹೊಸದೊಂದು ಕಥೆ ತೆರೆದುಕೊಂಡಿದೆ. ಸೀರಿಯಲ್ ರ್ಪೊಮೋ ನೋಡಿದ ಜನರು ಪೂರ್ತಿಯಾಗಿ ಗೊಂದಲಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿರೋದು ಏನು?
ಸೀರಿಯಲ್ ನಲ್ಲಿ ಏನಾಯ್ತು?
ಪಾರುಗೆ ದಾರಿಯಲ್ಲೊಬ್ಬ ಹುಡುಗ ಸಿಗುತ್ತಾನೆ. ದಾರಿಯಲ್ಲಿ ಆಡುತ್ತಿದ್ದ ಮಗುವಿಗೆ ಗಾಯವಾದಾಗ ಅದನ್ನು ಕ್ಲೀನ್ ಮಾಡಿ, ಔಷಧಿ ಹಚ್ಚಿ ಬ್ಯಾಂಡೇಜ್ ಹಾಕುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ಸಿಸ್ಟರ್ ಇವನ್ನು ನನ್ನ ಮಗ ಎನ್ನುತ್ತಾನೆ.
ಹುಡುಗನ ಹೆಸರು ಕೂಡ ಮಾರಿಗುಡಿ ಶಿವು
ಹೀಗೆ ಮಾತನಾಡುತ್ತಾ ಆ ಬಾಲಕನ ಬಳಿ ಹೆಸರು ಕೇಳುವಾಗ ಆತ ಎಂ ಶಿವು, ನನ್ನ ಹೆಸರು ಮಾರಿಗುಡಿ ಶಿವು ಎನ್ನುತ್ತಾನೆ. ಅಮ್ಮ ಕುತ್ತಿಗೆಗೆ ಕ್ರಾಸ್ ಹಾಕಿದ್ದು, ಸಿಸ್ಟರ್ ನಂತೆ ಡ್ರೆಸ್ ಧರಿಸಿದ್ದು, ತಾವು ದೇವಸ್ಥಾನಕ್ಕೆ ಬಂದಿರೋದಾಗಿ ಹೇಳುತ್ತಾರೆ.
ಪಾರು ಮನಸಲ್ಲಿ ಗೊಂದಲ
ಹುಡುಗನ ಹೆಸರು, ಆತನ ಅಮ್ಮನ ಗೆಟಪ್, ದೇವಸ್ಥಾನದಲ್ಲಿ ಪೂಜೆ, ಇದೆಲ್ಲವನ್ನು ನೋಡಿ ಪಾರು ಪೂರ್ತಿಯಾಗಿ ಗೊಂದಲಕ್ಕೊಳಗಾಗಿದ್ದಾಳೆ. ಇದು ಹೇಗೆ ಸಾಧ್ಯ, ಮಗುವಿಗೆ ಹಿಂದು ಹೆಸರು, ತಾಯಿ ಕ್ರಿಶ್ಚಿಯನ್,, ದೇವಸ್ಥಾನಕ್ಕೆ ಬಂದಿರೋದು ಯಾಕೆ ಎಂದು ಯೋಚನೆ ಮಾಡ್ತಿದ್ದಾಳೆ.
ಗೊಂದಲದಲ್ಲಿ ವೀಕ್ಷಕರು
ಇನ್ನು ಈ ಪ್ರೊಮೋ ನೋಡಿ ಅಣ್ಣಯ್ಯ ವೀಕ್ಷಕರು ಸಹ ಗೊಂದಲಕ್ಕೊಳಗಾಗಿದ್ದು, ಈ ಹುಡುಗ ಶಿವು ಮಗನೇನಾ, ಈ ಹಿಂದೆ ಶಿವು ಬೇರೆ ಮದುವೆಯಾಗಿದ್ನಾ ಅಥವಾ ಶಿವುನಿಂದಾಗಿ ಈ ಮಗು ಬದುಕಿ ಉಳಿದಿದ್ದು, ಅದಕ್ಕಾಗಿಯೇ ಮಗುವಿಗೆ ಈ ಹೆಸರು ಇಡಲಾಗಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ.
ಮತ್ತೆ ಶಿವು ಹಿಂದಿನ ಕಥೆ ಅನಾವರಣ ಆಗುತ್ತಾ?
ಶಿವು ಹಿಂದೆ ಹೇಗೆಲ್ಲಾ ಇದ್ದ ಅನ್ನೋದು ಗೊತ್ತಾಗಿದೆ. ಆದರೆ ಇಲ್ಲಿವರೆಗೆ ಪಾರುಗೆ ಮಾತ್ರ ಶಿವುನ ಕಥೆ ಗೊತ್ತೇ ಇಲ್ಲ. ಯಾವಾಗ ಪಾರುಗೆ ಕಥೆ ಗೊತ್ತಾಗುತ್ತೆ? ಗೊತ್ತಾದ ಮೇಲೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

