- Home
- Entertainment
- TV Talk
- Bigg Boss ಬಿಗ್ ಟ್ವಿಸ್ಟ್: ಜಾಹ್ನವಿ ಹಾದಿ ಹಿಡಿದ್ರಾ Ashwini Gowda? ಗಿಲ್ಲಿ ಬಹಳ ಮೋಸಗಾರ ಅಂದದ್ದು ಯಾರು?
Bigg Boss ಬಿಗ್ ಟ್ವಿಸ್ಟ್: ಜಾಹ್ನವಿ ಹಾದಿ ಹಿಡಿದ್ರಾ Ashwini Gowda? ಗಿಲ್ಲಿ ಬಹಳ ಮೋಸಗಾರ ಅಂದದ್ದು ಯಾರು?
ಬಿಗ್‌ಬಾಸ್ ಮನೆಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು, ಸ್ಪರ್ಧಿಗಳು ಇತರರನ್ನು ನಾಮಿನೇಟ್ ಮಾಡಿದ್ದಾರೆ. ಅಶ್ವಿನಿ ಗೌಡ ಅವರು ಸ್ಪಂದನಾ ಸೋಮಣ್ಣರನ್ನು ವೀಕ್ ಎಂದು ಹೇಳಿದರೆ, ರಕ್ಷಿತಾ ಶೆಟ್ಟಿ ಧನುಷ್ ಹೆಸರನ್ನು ತೆಗೆದುಕೊಂಡರು. ಇತ್ತ ರಾಷಿಕಾ, ಗಿಲ್ಲಿ ನಟನನ್ನು ಬಹುದೊಡ್ಡ ಮೋಸಗಾರ ಎಂದಿದ್ದಾರೆ.

ಅಳಿವು ಉಳಿವಿನ ಪ್ರಶ್ನೆ
ಬಿಗ್ಬಾಸ್ನಲ್ಲಿ (Bigg Boss) ಈಗ ಎಲ್ಲರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಇನ್ನೇನು ತಿಂಗಳಿನಲ್ಲಿಯೇ ಷೋ ಮುಗಿಯರಲಿರುವ ಕಾರಣದಿಂದ ಎಲ್ಲರೂ ತಮ್ಮನ್ನು ತಾವು ಸೇವ್ ಮಾಡಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂಡ್ರಿಸುವುದು ಅನಿವಾರ್ಯವೇ ಆಗಿದೆ. ಇಷ್ಟ ಇರಲಿ, ಬಿಡಲಿ ಕೆಲವೊಂದು ಹೆಸರು ತೆಗೆದುಕೊಳ್ಳಲೇಬೇಕಿದೆ.
ಎಲಿಮಿನೇಷನ್
ಇದೀಗ ಬಿಗ್‌ಬಾಸ್ ಯಾರನ್ನು ಎಲಿಮಿನೇಷನ್ ಮಾಡಬೇಕು ಎಂದು ಯಾರು ಯಾರು ಇಚ್ಛಿಸುತ್ತಾರೆ ಎನ್ನುವ ಟಾಸ್ಕ್ ಕೊಟ್ಟಿದೆ. ಅದರಲ್ಲಿ ಎಲಿಮಿನೇಷನ್ ಸೀಟ್ನಲ್ಲಿ ಗಿಲ್ಲಿ ನಟ, ಸ್ಪಂದನಾ, ಸೂರಜ್, ಮಾಳು ಎಲ್ಲರನ್ನೂ ಕೂಡ್ರಿಸಲಾಗಿದೆ.
ಆ್ಯಕ್ಟಿವಿಟಿ ರೂಮ್ಗೆ
ಒಬ್ಬ ಸದಸ್ಯ ಆ್ಯಕ್ಟಿವಿಟಿ ರೂಮ್ಗೆ ತೆರಳಬೇಕು. ಉಳಿದವರು ಯಾರು ನಾಮಿನೇಟ್ ಆಗಬೇಕು ಎಂದು ಹೇಳಬೇಕು ಎಂದು ಬಿಗ್‌ಬಾಸ್ ಹೇಳಿದೆ. ಅದರಂತೆ, ಕಾವ್ಯಾ ಶೈವ ಆ್ಯಕ್ಟಿವಿಟಿ ರೂಮ್ಗೆ ತೆರಳಿಸಿದ್ದಾರೆ. ಉಳಿದವರು ನಾಮಿನೇಷನ್ ಸೀಟಿನಲ್ಲಿ ಕುಳಿತುಕೊಂಡಿದ್ದಾರೆ.
ಸ್ಪಂದನಾ ಸೋಮಣ್ಣ ಹೆಸರು
ಈ ಸಮಯದಲ್ಲಿ ಅಶ್ವಿನಿ ಗೌಡ ಅವರು, ಸ್ಪಂದನಾ ಸೋಮಣ್ಣ (Bigg Boss Spandana Somanna) ಎಲ್ಲಾ ಕಾಂಪಿಟೀಟರ್ಗಿಂತಲೂ ತುಂಬಾನೇ ವೀಕ್. ಅವರು ಎಲಿಮಿನೇಟ್ ಆಗಬೇಕು ಎಂದಿದ್ದಾರೆ. ಈ ಹಿಂದೆ ಅಶ್ವಿನಿ ಅವರ ಸ್ನೇಹಿತೆಯಾಗಿದ್ದ ಜಾಹ್ನವಿ ಕೂಡ ಪದೇ ಪದೇ ಇದೇ ಮಾತನ್ನು ಹೇಳುತ್ತಿದ್ದರು. ಸ್ಪಂದನಾ ವಾಹಿನಿ ಕಡೆಯಿಂದ ಬಂದವರು ಎಂದು ಅವರು ವೀಕ್ ಆಗಿದ್ದರೂ ಅವರನ್ನು ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಸಮಸ್ಯೆಯಲ್ಲಿಯೂ ಸಿಲುಕಿದ್ದರು. ಇದೀಗ ಅಶ್ವಿನಿ ಅವರು ಹಾಗೆ ಹೇಳದಿದ್ದರೂ ಎಲ್ಲರಿಗಿಂತಲೂ ಸ್ಪಂದನಾ ವೀಕ್ ಎಂದು ಹೇಳಿದ್ದಾರೆ.
ಧನುಷ್ ಹೆಸರು
ಅದೇ ಇನ್ನೊಂದೆಡೆ, ರಕ್ಷಿತಾ ಶೆಟ್ಟಿ (Bigg Boss Rakshita Shetty) ಧನುಷ್ ಹೆಸರನ್ನು ತೆಗೆದುಕೊಂಡಿದ್ದಾರೆ. ಕೊಟ್ಟ ಟಾಸ್ಕ್ನ ಪ್ರಯೋಜನ ಪಡೆದು ಅವರು ಇಲ್ಲಿ ಉಳಿದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಬಹುದೊಡ್ಡ ಮೋಸಗಾರ
ಇನ್ನು, ಗಿಲ್ಲಿ ನಟ ದಿನವೂ ಒಂದೊಂದು ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದಾನೆ. ಆತ ಬಹುದೊಡ್ಡ ಮೋಸಗಾರ ಎಂದು ರಾಷಿಕಾ ಗಿಲ್ಲಿ ನಟ ಎಲಿಮಿನೇಟ್ ಆಗಬೇಕು ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

