- Home
- Entertainment
- TV Talk
- Bigg Bossನಲ್ಲಿ ಅಶ್ವಿನಿ ಗೌಡ ವ್ಯವಹಾರದ ಕುರಿತು ಯಾರೂ ತಿಳಿಯದ ಬಹುದೊಡ್ಡ ಸೀಕ್ರೆಟ್ ಬಿಚ್ಚಿಟ್ಟ ಅಭಿಷೇಕ್!
Bigg Bossನಲ್ಲಿ ಅಶ್ವಿನಿ ಗೌಡ ವ್ಯವಹಾರದ ಕುರಿತು ಯಾರೂ ತಿಳಿಯದ ಬಹುದೊಡ್ಡ ಸೀಕ್ರೆಟ್ ಬಿಚ್ಚಿಟ್ಟ ಅಭಿಷೇಕ್!
ಬಿಗ್‌ಬಾಸ್ ಮನೆಯಲ್ಲಿ ಜಗಳದಿಂದಲೇ ಗುರುತಿಸಿಕೊಂಡಿರುವ ಅಶ್ವಿನಿ ಗೌಡ ಅವರ ಬಗ್ಗೆ ಸಹ ಸ್ಪರ್ಧಿ ಅಭಿಷೇಕ್ ಶ್ರೀಕಾಂತ್ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಯಾರಿಗೂ ತಿಳಿಯದ ಕೆಲವೊಂದು ಗುಟ್ಟುಗಳನ್ನು ಹೇಳಿದ್ದಾರೆ. ಅವರು ಹೇಳಿದ್ದೇನು?

ಅಶ್ವಿನಿ ಗೌಡ ಮತ್ತು ಸೋಷಿಯಲ್ ಮೀಡಿಯಾ
ಬಿಗ್‌ಬಾಸ್ ಅಶ್ವಿನಿ ಗೌಡ (Bigg Boss Ashwini Gowda) ಎಂದರೆ ಸಾಕು, ಬಹುತೇಕ ಬಿಗ್‌ಬಾಸ್ ವೀಕ್ಷಕರಿಗೆ ನೆನಪಾಗುವುದು ಜಗಳವೇ. ಅವರು ಜಗಳದಿಂದಲೇ ಫೇಮಸ್ ಆಗಿದ್ದಾರೆ. ಜಗಳಕ್ಕಾಗಿಯೇ ಇದುವರೆಗೂ ಬಿಗ್ಬಾಸ್ನಲ್ಲಿ ಇದ್ದಾರೆ. ಸದಾ ಎಲ್ಲರ ಜೊತೆ ಕಾಲು ಕೆದರಿ ಜಗಳಕ್ಕೆ ಬರುತ್ತಾರೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ಸ್ ಸುರಿಮಳೆಯಾಗುತ್ತಲೇ ಇರುತ್ತದೆ.
ಅಶ್ವಿನಿ ಗುಟ್ಟು ರಟ್ಟು
ಅಶ್ವಿನಿ ಗೌಡ ಅವರನ್ನು ಹತ್ತಿರದಿಂದ ಬಲ್ಲವರು, ಅವರು ಬಿಗ್ಬಾಸ್ಗೆ ಹೋಗಿದ್ದೇ ತಪ್ಪು. ಅವರ ಕ್ಯಾರೆಕ್ಟರ್ ಆ ರೀತಿ ಅಲ್ಲವೇ ಅಲ್ಲ ಎಂದೂ ಹೇಳುತ್ತಾರೆ. ಇದೀಗ ಬಿಗ್‌ಬಾಸ್ ಮನೆಯಲ್ಲಿ ಕೆಲವು ವಾರಗಳ ವರೆಗೆ ಅಶ್ವಿನಿ ಗೌಡ ಅವರನ್ನು ಹತ್ತಿರದಿಂದ ಬಲ್ಲ ಅಭಿಷೇಕ್ ಶ್ರೀಕಾಂತ್ ಅವರು ಕೆಲವೊಂದು ಗುಟ್ಟುಗಳನ್ನು ರಟ್ಟು ಮಾಡಿದ್ದಾರೆ.
ಅಡುಗೆಯಲ್ಲಿ ತಾಳ್ಮೆ
ರೇಡಿಯೋಸಿಟಿ ಕನ್ನಡಕ್ಕೆ ಅವರು ನೀಡಿರುವ ಸಂದರ್ಶನದಲ್ಲಿ, ಈ ಬಗ್ಗೆ ವಿವರಣೆ ನೀಡಿದ್ದಾರೆ. ಅಶ್ವಿನಿ ಗೌಡ ಅವರ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ. ಬಿಗ್‌ಬಾಸ್ ಮನೆಯಲ್ಲಿ, ಟಾಸ್ಕ್ ಎಷ್ಟು ಇರುತ್ತದೆ ಎಂದರೆ, ಅದನ್ನು ಮಾಡಿ ಬಿದ್ದುಕೊಂಡರೆ ಸಾಕಾಗಿರುತ್ತದೆ. ಅಡುಗೆ ಮಾಡುವ ಮೂಡು, ತಾಳ್ಮೆ ಯಾರಿಗೂ ಇರುವುದೇ ಇಲ್ಲ. ಆದರೆ ಅಶ್ವಿನಿ ಗೌಡ ಅವರು ಹಾಗಲ್ಲ. ಎಷ್ಟೇ ಕಷ್ಟವಾದರೂ ಎಲ್ಲರಿಗೂ ಅಡುಗೆ ಮಾಡುತ್ತಾರೆ. ಅಡುಗೆ ಮಾಡಿ ಉಳಿದವರಿಗೆ ಆಗುತ್ತದೆಯೋ ಎಂದು ನೋಡಿಕೊಂಡು ಮಿಕ್ಕಿದ್ದರೆ ತಾವು ತಿನ್ನುತ್ತಾರೆ. ಅಂಥ ಒಳ್ಳೆಯ ಹೃದಯ ಅವರದ್ದು ಎಂದಿದ್ದಾರೆ.
ಸಹೃದಯಿ
ಎಲ್ಲರ ಹೊಟ್ಟೆ ತುಂಬಿಸಿ ತಾವು ತಿನ್ನುವವರು, ಮನೆಯಲ್ಲಿ ಎಲ್ಲರಿಗೂ ಸಾಕಾಗುಷ್ಟು ಆಹಾರ ಇದ್ಯಾ ನೋಡಿಯೇ ತಾವು ಸೇವಿಸುವಂಥ ಸಹೃದಯಿ ಅವರು ಎಂದು ಅಭಿಷೇಕ್ ಹೇಳಿದ್ದಾರೆ.
ಮೆಂಟಲಿ ಸ್ಟ್ರಾಂಗ್
ಅವರು ಮೆಂಟಲಿ ಕೂಡ ತುಂಬಾ ಸ್ಟ್ರಾಂಗ್. ಯಾರಾದರೂ ನಮಗಿಂದ 10-15 ವರ್ಷ ಚಿಕ್ಕವರು ಎದುರಾಡಿದಾಗ ನಮಗೆ ಹೇಗೆ ಅನ್ನಿಸತ್ತೆ ಹೇಳಿ, ಆದರೆ ಅಶ್ವಿನಿ ಅವರು ಯಾರೇ ಏನೇ ಹೇಳಿದರೂ ಆ ಕ್ಷಣದಲ್ಲಿ ರಿಯಾಕ್ಟ್ ಮಾಡುತ್ತಾರೆ ಬಿಟ್ಟರೆ ಅವರು ತುಂಬಾ ಒಳ್ಳೆಯ ಹ್ಯೂಮನ್ ಬೀಯಿಂಗ್ ಎಂದಿದ್ದಾರೆ ಅಭಿಷೇಕ್. ಈ ಗುಣವನ್ನು ಜಾಹ್ನವಿಯಲ್ಲಿಯೂ ತಾವು ನೋಡಿರುವುದಾಗಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

