- Home
- Entertainment
- TV Talk
- Bigg Boss: ನೀನು ಸುಂದ್ರಿನಾ? ಗಿಲ್ಲಿ ಪ್ರಶ್ನೆಗೆ ಚೈತ್ರಾ ಕುಂದಾಪುರ ತತ್ತರ: ಗಂಡನ ವಿಷ್ಯ ಹೇಳಿ ತಗ್ಲಾಕ್ಕೊಂಡೇ ಬಿಟ್ರಲ್ಲಾ!
Bigg Boss: ನೀನು ಸುಂದ್ರಿನಾ? ಗಿಲ್ಲಿ ಪ್ರಶ್ನೆಗೆ ಚೈತ್ರಾ ಕುಂದಾಪುರ ತತ್ತರ: ಗಂಡನ ವಿಷ್ಯ ಹೇಳಿ ತಗ್ಲಾಕ್ಕೊಂಡೇ ಬಿಟ್ರಲ್ಲಾ!
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ, ಚೈತ್ರಾ ಕುಂದಾಪುರ ಅವರ ಸೌಂದರ್ಯದ ಬಗ್ಗೆ ಪ್ರಶ್ನಿಸಿ ಅವರನ್ನು ತಬ್ಬಿಬ್ಬುಗೊಳಿಸಿದ್ದಾರೆ. ತನ್ನ ಗಂಡನಿಗೆ ತಾನೇ ಸುಂದರಿ ಎಂದು ಚೈತ್ರಾ ಉತ್ತರಿಸಿದಾಗ, ಗಿಲ್ಲಿ ನಟ ಅದನ್ನು ಚಿಕನ್ ಮಸಾಲಾಗೆ ಕ್ಯಾರೆಟ್ ಹಲ್ವಾ ರೆಸಿಪಿ ಹೇಳಿದಂತೆ ಎಂದು ಹಾಸ್ಯಮಯವಾಗಿ ಟೀಕಿಸಿದ್ದಾರೆ.

ಗಿಲ್ಲಿ ಹಾಸ್ಯ
ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟನ ಹಾಸ್ಯಕ್ಕೆ ಕೊನೆಯೇ ಇಲ್ಲ. ಕೆಲವೊಮ್ಮೆ ಹಾಸ್ಯ ಕೆಲವರನ್ನು ನೋಯಿಸುತ್ತದೆ ಎನ್ನುವ ಆರೋಪ ಇದ್ದರೂ ಗಿಲ್ಲಿ ನಟ (Bigg Boss Gilli Nata) ಮಾತ್ರ ಡೋಂಟ್ ಕೇರ್. ಯಾರು ಸಿಕ್ಕರೂ ಬಿಡಲ್ಲ ಇವರು. ಎಲ್ಲರನ್ನೂ ಎಳೆದು ತಂದು ತಮಾಷೆ ಮಾಡೋದೆ.
ತಗ್ಲಾಕ್ಕೊಂಡ ಚೈತ್ರಾ ಕುಂದಾಪುರ
ಇದೀಗ ಇವರ ಕೈಯಲ್ಲಿ ತಗ್ಲಾಕ್ಕೊಂಡಿದ್ದು ಚೈತ್ರಾ ಕುಂದಾಪುರ (Bigg Boss Chaitra Kundapura). ನನ್ನ ಕಣ್ಣು ಸರಿಯಾಗಿ ಕಾಣಿಸದೇ ಇರಬಹುದು, ನೀನೇನು ಸುರ ಸುಂದರಿನಾ ಎಂದು ಚೈತ್ರಾ ಅವರಿಗೆ ಗಿಲ್ಲಿ ಕೇಳಿದ್ದಾರೆ.
ನನ್ನ ಗಂಡನಿಗೆ ನಾನೇ...
ಇದಕ್ಕೆ ಏನು ರಿಪ್ಲೈ ಕೋಡೋದು ಗೊತ್ತಾಗದೇ ಚೈತ್ರಾ, ನನ್ನ ಗಂಡನಿಗೆ ನಾನೇ ಸುಂದರಿ ಎಂದು ಹೇಳಿದ್ದಾರೆ. ಅದಕ್ಕೆ ಗಿಲ್ಲಿ ನಟ, ಗಂಡ ಎಲ್ಲಾ ಬೇಡ... ನಿಮಗೆ ನೀವು ಸುಂದರಿ ಅಂತ ಎನಿಸತ್ತಾ ಎಂದುಪ್ರಶ್ನಿಸಿದಾಗ ಚೈತ್ರಾ ಗಲಿಬಿಲಿಯಾಗಿದ್ದಾರೆ.
ಚಿಕನ್ ಮಸಾಲಾ ಕೇಳಿದ್ರೆ...
ಅದಕ್ಕೆ ಗಿಲ್ಲಿ ನಟ (Bigg Boss Gilli Nata) ನಾನು ಚಿಕನ್ ಮಸಾಲಾ ರೆಸಿಪಿ ಕೇಳಿದ್ರೆ ಕ್ಯಾರೆಟ್ ಹಲ್ವಾ ರೆಸಿಪಿ ಹೇಳೋದು ಬೇಡ. ನಿಮಗೆ ನಿಮ್ಮ ಬಗ್ಗೆ ಏನು ಅನ್ನಿಸ್ತದೆ ಎಂದಾಗ ಚೈತ್ರಾ ಮಾತನಾಡಲಿಲ್ಲ. ಆಗ ಸ್ಪಂದನಾ, ಚೈತ್ರಕ್ಕಾ ನೀವ್ಯಾಕೆ ಇವ್ನ ಕೈಯಲ್ಲಿ ತಗ್ಲಾಕೊಂಡ್ರಿ ಅಂತ ಪ್ರಶ್ನಿಸಿದ್ದಾರೆ.
ರಘುಗೆ ಗಿಲ್ಲಿ ಪ್ರಶ್ನೆ
ಆಗ, ಗಿಲ್ಲಿ ನಟ ರಘು ಅವರ ಕಡೆ ತೋರಿಸಿ ನೀವು ಸುಂದರನಾ ಕೇಳಿದ್ದಾರೆ. ರಘು ಸೈಲೆಂಟ್ ಆಗಿದ್ರೂ ಬಿಡದ ಗಿಲ್ಲಿ ನೋಡಿ ಅವರ ಕಾನ್ಫಿಡೆನ್ಸ್. ಸೈಲೆಂಟ್ ಆಗಿ ಎಷ್ಟು ಸರಿಯಾಗಿ ಉತ್ತರಿಸಿದ್ದಾರೆ. ನೀನು ನೋಡಿದ್ರೆ ಗಂಡನಿಗೆ ಸುಂದ್ರಿ ಅಂತಿಯಾ ಎಂದಿದ್ದಾರೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

