- Home
- Entertainment
- TV Talk
- Bigg Boss ಭವ್ಯಾ ಗೌಡ ಮದ್ವೆ ಅವಿನಾಶ್ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?
ಕರ್ಣ ಸೀರಿಯಲ್ ಖ್ಯಾತಿಯ ಭವ್ಯಾ ಗೌಡ, ಹುಡುಗನೊಬ್ಬನ ಕೈ ಹಿಡಿದ ಫೋಟೋ ಹಂಚಿಕೊಂಡು ಪ್ರೀತಿಯ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ, ಬಿಗ್ ಬಾಸ್ ಸ್ಪರ್ಧಿ ಅವಿನಾಶ್ ಶೆಟ್ಟಿ ಜೊತೆ ಮದುವೆ ಎಂಬ ಸುದ್ದಿ ಹರಡಿದ್ದು, ಈ ಬಗ್ಗೆ ಅವಿನಾಶ್ ಸ್ಪಷ್ಟನೆ ನೀಡಿ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮನಸ್ಸು ಕದಿಯುತ್ತಿರೋ ಭವ್ಯಾ
Karna Serial ನಿಧಿ ರೋಲ್ ಮೂಲಕ ಎಲ್ಲರ ಮನಸ್ಸು ಕದ್ದು ಗೆಲ್ಲುತ್ತಿರುವವರು Bigg Boss ಖ್ಯಾತಿಯ ಭವ್ಯಾ ಗೌಡ. ಅವರು ಈಚೆಗೆ, ಒಂದಿಷ್ಟು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ರಿಲೇಷನ್ಷಿಪ್ನಲ್ಲಿ ಇರುವಂತೆ ಬಿಂಬಿಸಿದ್ದರು.
ಕ್ರಶ್ ಬಗ್ಗೆ ನಟಿ
ಅವರು ಈ ಹಿಂದೆ, ನಿಮಗೆ ಯಾರಾದರೂ ಕ್ರಶ್ ಇದ್ದಾರಾ ಎಂದು ಏಷಿಯಾನೆಟ್ ಸುವರ್ಣ ನ್ಯೂಸ್ ಪ್ರಶ್ನೆ ಮಾಡಿದ್ದಾಗ, ಹೌದು, ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್ ಇದ್ದಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಈಚೆಗೆ, ಚಿಕ್ಕಮಗಳೂರಿಗೆ ಹೋಗಿದ್ದರು. ಅಲ್ಲಿ ಸಹೋದರನ ಮದುವೆ ಎಂದು ಕ್ಯಾಪ್ಶನ್ ನೀಡಿ, ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳ ಮಧ್ಯೆ ಒಂದು ಫೋಟೋಕ್ಕೆ ದೃಷ್ಟಿ ತಾಕದೆ ಇರುವಂತೆ ಮಾಡುವ ಇಮೋಜಿ ಹಾಕಿದ್ದರು, ಆಗಲೇ ಭವ್ಯಾ ಗೌಡ ಅವರ ಪ್ರಿಯಕರ ಇವರೇ ಇರಬಹುದಾ ಎಂಬ ಪ್ರಶ್ನೆ ಬಂದಿತ್ತು.
ದೃಷ್ಟಿಬೊಟ್ಟು
ಈಗ ಭವ್ಯಾ ಗೌಡ ಅವರು ತಾವು ಪ್ರೀತಿ ಮಾಡುತ್ತಿರುವ ಹುಡುಗನ ಕೈಗಳ ಜೊತೆ ತಮ್ಮ ಕೈ ಇರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ಅಲ್ಲಿ ಕೂಡ ದೃಷ್ಟಿ ತಾಕದಿರುವಂತೆ ಮಾಡುವ ಇಮೋಜಿ ಹಂಚಿಕೊಂಡಿದ್ದಾರೆ. ಹೀಗಾಗಿ ಈ ಗಾಸಿಪ್ ಇನ್ನಷ್ಟು ಗಟ್ಟಿಯಾಗಿತ್ತು.
ಹುಡುಗ ಯಾರು?
ಚಿಕ್ಕಮಗಳೂರು ಮೂಲದ ಹುಡುಗನನ್ನು ಭವ್ಯಾ ಗೌಡ ಅವರು ಪ್ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಮುಕ್ತವಾಗಿ ಕಾಮೆಂಟ್ ಕೂಡ ಮಾಡುತ್ತಿದ್ದಾರೆ, ಇನ್ನು ಭವ್ಯಾ ಗೌಡ ಅವರು ಹುಡುಗನ ಫೋಟೋ ಸಮೇತ ಅವರೇ ಅಧಿಕೃತವಾಗಿ ರಿವೀಲ್ ಮಾಡೋದು ಬಾಕಿ ಇದೆ.
ಮದುವೆ ನಿಜನಾ?
ಈ ವಿಷಯ ವೈರಲ್ ಆಗುತ್ತಲೇ ಬಿಗ್ಬಾಸ್ನ ಸ್ಪರ್ಧಿಯಾಗಿದ್ದ ಅವಿನಾಶ್ ಶೆಟ್ಟಿ ಜೊತೆ ಮದುವೆ ಫಂಕ್ಷನ್ ಒಂದರಲ್ಲಿ ಭವ್ಯಾ ಗೌಡ (Bigg Boss Bhavya Gowda) ಕಾಣಿಸಿಕೊಂಡಿದ್ದರು. ಅವರಿಬ್ಬರು ಸಂಬಂಧದಲ್ಲಿ ಇದ್ದಾರೆ, ಮದುವೆಯಾಗುತ್ತಿದ್ದಾರೆ ಎಂದೆಲ್ಲಾ ಒಂದಷ್ಟು ಮಂದಿ ಸುದ್ದಿ ಹರಡಿಸಿಬಿಟ್ಟಿದ್ದರು. ಹಲವರು ಇದನ್ನು ನಿಜ ಎಂದು ಕೂಡ ನಂಬಿದ್ದಾರೆ.
ಅವಿನಾಶ್ ಸ್ಪಷ್ಟನೆ
ಭವ್ಯಾ ಅವರು ಆ ಕೈ ಚಿತ್ರ ಹಾಕುವುದಕ್ಕೂ, ಅವಿನಾಶ್ ಅವರ ಜೊತೆ ಕಾಣಿಸಿಕೊಳ್ಳುವುದಕ್ಕೂ ಸಂಬಂಧ ಕಲ್ಪಿಸಿಯೇಬಿಟ್ಟರು. ಇದೀಗ ಈ ಬಗ್ಗೆ ಖುದ್ದು ಅವಿನಾಶ್ ಅವರ ಸ್ಪಷ್ಟನೆ ನೀಡಿದ್ದಾರೆ.
ಅವಿನಾಶ್ ಬೇಸರ
ಇವೆಲ್ಲಾ ಸುಳ್ಳು. ತಮ್ಮ ವ್ಯೂವ್ಸ್, ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಇಂಥ ಫೇಕ್ ನ್ಯೂಸ್ ಹಾಕುವವರ ಮನಸ್ಥಿತಿಗೆ ಏನನ್ನಬೇಕೋ ತಿಳಿಯುತ್ತಿಲ್ಲ ಎಂದಿದ್ದಾರೆ. ಇದರಿಂದಾಗಿ ಭವ್ಯ ಕೂಡ ತುಂಬಾ ಬೇಸರ ಪಟ್ಟುಕೊಂಡಿದ್ದಾರೆ. ಬಿಗ್ಬಾಸ್ನಲ್ಲಿಯೂ ನಮ್ಮ ಸೀಸನ್ನೇ ಬೇರೆ, ಯಾವ ಪ್ರಾಜೆಕ್ಟ್ನಲ್ಲಿಯೂ ನಾವು ಒಟ್ಟಿಗೆ ಕೆಲಸ ಮಾಡಲಿಲ್ಲ. ಆ ಒಂದು ಮದುವೆ ಫಂಕ್ಷನ್ನಲ್ಲಿ ಹೋಗಿದ್ದನ್ನೇ ಫೋಟೋ ತೆಗೆದು ಸಂಬಂಧ ಕಲ್ಪಿಸುತ್ತಿದ್ದಾರೆ ಎಂದು ನೊಂದು ನುಡಿದಿದ್ದಾರೆ.
ನಿಜವಾದ ಫೋಟೋ
ಕೆಲವರು ಇದನ್ನು ಎಐ ಫೋಟೋ ಎಂದರು. ಆದರೆ ಇದು AI ಫೋಟೋ ಅಲ್ಲ, ನಿಜವಾಗಿರುವ ಫೋಟೋನೇ. ಆದರೆ ಫಂಕ್ಷನ್ನಲ್ಲಿ ಒಟ್ಟಿಗೇ ತೆಗೆಸಿಕೊಂಡಿರೋದು ಅಷ್ಟೇ ಎಂದಿದ್ದಾರೆ.ಇನ್ನು ನಟಿ ಶೇರ್ ಮಾಡಿದ ಆ ಕೈ ಯಾರು ಎನ್ನೋದು ಇನ್ನಷ್ಟೇ ರಿವೀಲ್ ಆಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

