MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನಾನೇನೆಂದು ತೋರಿಸ್ತೇನೆ, ಈ ಡ್ರೆಸ್​ ಅಷ್ಟೇ ನೋಡ್ಬೇಡಿ ಎನ್ನುತ್ತಲೇ ಲೈವ್​ಗೆ ಬಂದ Bigg Boss ಜಾಹ್ನವಿ ಹೇಳಿದ್ದೇನು?

ನಾನೇನೆಂದು ತೋರಿಸ್ತೇನೆ, ಈ ಡ್ರೆಸ್​ ಅಷ್ಟೇ ನೋಡ್ಬೇಡಿ ಎನ್ನುತ್ತಲೇ ಲೈವ್​ಗೆ ಬಂದ Bigg Boss ಜಾಹ್ನವಿ ಹೇಳಿದ್ದೇನು?

ಬಿಗ್‌ಬಾಸ್‌ ಸ್ಪರ್ಧಿ, ನಿರೂಪಕಿ ಜಾಹ್ನವಿ ಅವರು ತಮ್ಮ ಡಿವೋರ್ಸ್ ವಿಚಾರವಾಗಿ ಮನೆಯೊಳಗೆ ಮತ್ತು ಹೊರಗೆ ಸದ್ದು ಮಾಡುತ್ತಿದ್ದಾರೆ. ಇದರ ನಡುವೆಯೇ, ಅವರು ದೊಡ್ಮನೆಗೆ ಹೋಗುವ ಮುನ್ನ ತಮ್ಮ ಆಟದ ಲೆಕ್ಕಾಚಾರ, 'ನನ್ನ ಜೀವನ, ನನ್ನ ನಿಯಮ' ಎಂಬ ನಿಲುವಿನ ಬಗ್ಗೆ ಮಾತನಾಡಿದ ವಿಡಿಯೋವೊಂದು ವೈರಲ್ ಆಗಿದೆ.

2 Min read
Author : Suchethana D
Published : Oct 07 2025, 02:26 PM IST
Share this Photo Gallery
  • FB
  • TW
  • Linkdin
  • Whatsapp
17
ಬಿಗ್​ಬಾಸ್​ನಲ್ಲಿ ಜಾಹ್ನವಿ ಹವಾ
Image Credit : anchor jhanvi r instagram

ಬಿಗ್​ಬಾಸ್​ನಲ್ಲಿ ಜಾಹ್ನವಿ ಹವಾ

ಆ್ಯಂಕರ್​ ಜಾಹ್ನವಿ ಸದ್ಯ ಬಿಗ್​ಬಾಸ್​​ನಲ್ಲಿ (Bigg Boss Jhanvi) ಹವಾ ಸೃಷ್ಟಿಸುತ್ತಿದ್ದಾರೆ. ಬಿಗ್​ಬಾಸ್​ ಮನೆಯೊಳಗೆ ಅಲ್ಲದಿದ್ದರೂ ಅವರು ಇಲ್ಲಿ ಹೋದಾಗಿನಿಂದಲೂ ಹೊರಗಡೆ ಅವರ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ, ಅವರು ತಮ್ಮ ಡಿವೋರ್ಸ್​ ಕುರಿತು ಬಿಗ್​ಬಾಸ್​ ಮನೆಯಲ್ಲಿ ಮಾತನಾಡಿದ್ದಾಗಿ. ಇಲ್ಲಿ ಅವರು ತಮ್ಮ ಪತಿ ಮತ್ತೊಂದು ಮದುವೆಯಾಗಿದ್ದರು ಎಂದೆಲ್ಲಾ ಹೇಳಿದರೆ, ಅತ್ತ ಅವರ ಮಾಜಿ ಪತಿ, ಮೀಡಿಯಾಗಳ ಮುಂದೆ ಬಂದು ಇವರ ವಿರುದ್ಧ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸುತ್ತಿ್ದಾರೆ.

27
ಸುದ್ದಿ ನಿರೂಪಕಿಯಾಗಿ ವೃತ್ತಿಜೀವನ
Image Credit : anchor jhanvi instagram

ಸುದ್ದಿ ನಿರೂಪಕಿಯಾಗಿ ವೃತ್ತಿಜೀವನ

ಸುದ್ದಿ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದ ಜಾಹ್ನವಿ, `ಗಿಚ್ಚಿ ಗಿಲಿಗಿಲಿ' ಮತ್ತು ನನ್ನಮ್ಮ ಸೂಪರ್ ಸ್ಟಾರ್' ನಂತಹ ಜನಪ್ರಿಯ ರಿಯಾಲಿಟಿ ಶೋ ನಂತರ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಆದರೆ ಅವರು ಈಚೆಗೆ ತಮ್ಮ ಡಿವೋರ್ಸ್​ ಕುರಿತು ಕೆಲವು ಮಾಧ್ಯಮಗಳಲ್ಲಿ ಮಾತನಾಡಿದ್ದರು. 10 ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಿರುವುದಕ್ಕೆ ಅವರು ಕಾರಣ ನೀಡಿದ್ದರು. ಈ ಮೂಲಕ ಸದ್ದು ಮಾಡುತ್ತಿರುವಾಗಲೇ ಅವರಿಗೆ ಬಿಗ್​ಬಾಸ್​ನಿಂದ ಕರೆ ಬಂದಿದ್ದು ಕೂಡ ಕಾಕತಾಳಿಯವೋ ಗೊತ್ತಿಲ್ಲ. ಆದರೆ ಇದೇ ವಿಷಯವನ್ನು ಬಿಗ್​ಬಾಸ್​ ಮನೆಯಲ್ಲಿಯೂ ಹೇಳುವ ಮೂಲಕ, ಹೊರ ಪ್ರಪಂಚದಲ್ಲಿ ಅವರು ಸದ್ದು ಮಾಡುತ್ತಿದ್ದಾರೆ.

Related Articles

Related image1
Bigg Boss ಕಾರ್ತಿಕ್​ ಮಹೇಶ್​ ಹುಟ್ಟುಹಬ್ಬ: ನಮ್ರತಾ ಗೌಡ ಪೋಸ್ಟ್​ ನೋಡಿ 'ಗೊತ್ತಾಯ್ತು ಬಿಡಿ' ಎಂದ ಫ್ಯಾನ್ಸ್​!
Related image2
Lakshmi Nivasa: ಪತಿಯ ಪ್ರೀತಿಗೆ ಕರಗಿ ಹೋಗ್ತಾಳಾ ಚಿನ್ನುಮರಿ ಅಥ್ವಾ ಜಯಂತ್​ ಕೈಯಲ್ಲಿ ಸಿಕ್ಕಿಬೀಳ್ತಾಳಾ?
37
ನೇರಪ್ರಸಾರದಲ್ಲಿ ಮಾತು
Image Credit : anchor jhanvi instagram

ನೇರಪ್ರಸಾರದಲ್ಲಿ ಮಾತು

ಇದರ ನಡುವೆಯೇ, ಅವರು ಬಿಗ್​ಬಾಸ್​ಗೂ ಹೋಗುವ ಮುನ್ನ ನೇರಪ್ರಸಾರದಲ್ಲಿ ಮಾತನಾಡಿರುವ ವಿಡಿಯೋ ವೈರಲ್​ ಆಗುತ್ತಿದೆ. ಬಿಗ್​ಬಾಸ್​ ಒಳಗೆ ಹೋಗುವ ಪೂರ್ವದಲ್ಲಿ ತಮ್ಮ ಸೋಷಿಯಲ್​ ಮೀಡಿಯಾ ಅನ್ನು ಹ್ಯಾಂಡಲ್​ ಮಾಡಲು ಸ್ಪರ್ಧಿಗಳು ತಮ್ಮವರಿಗೆ ಕೊಟ್ಟು ಹೋಗಬೇಕು. ಆಗಾಗ್ಗೆ ಅವರು, ಖುದ್ದು ಸ್ಪರ್ಧಿಗಳೇ ಮಾತನಾಡಿದಂತೆ ವಿಡಿಯೋ ಮಾಡಿ ವೋಟ್​ ಕೇಳುವುದು ಇದೆ. ಅದೇ ರೀತಿ ದೊಡ್ಮನೆಗೂ ಹೋಗುವ ಪೂರ್ವದಲ್ಲಿ ಜಾಹ್ನವಿ ಮಾತನಾಡಿರುವ ವಿಡಿಯೋ ಇದಾಗಿದೆ.

47
ನನ್ನದೇ ರೂಲ್ಸ್​ ಇರುತ್ತದೆ
Image Credit : instagram

ನನ್ನದೇ ರೂಲ್ಸ್​ ಇರುತ್ತದೆ

ಇಲ್ಲಿ ನನ್ನದೇ ಇಷ್ಟಕಷ್ಟ ಇರುತ್ತೆ. ನನ್ನದೇ ರೂಲ್ಸ್​ ಇರುತ್ತದೆ. ಅವೆಲ್ಲವೂ ನನಗೆ ಒಳ್ಳೆಯದ್ದನ್ನೇ ಮಾಡುತ್ತದೆ ಎಂದು ಭಾವಿಸಿದ್ದೇನೆ. ಬಿಗ್​ಬಾಸ್​ ಎನ್ನೋದು ವ್ಯಕ್ತಿತ್ವದ ಆಟ. ಈ ರೀತಿ ನಾನು ಪಾಷ್ ಆಗಿ ಕಾಣಿಸಿಕೊಳ್ಳುವುದರಿಂದ ಜಾಹ್ನವಿ ಎಂದರೆ ಬೇರೆಯದ್ದೇ ಎಂದು ಕೆಲವು ಅರ್ಥೈಸಿಕೊಂಡಿದ್ದಾರೆ. ಆದರೆ ನನ್ನ ವ್ಯಕ್ತಿತ್ವ ಏನು ಎಂದು ಬಿಗ್​ಬಾಸ್​​ ಮೂಲಕ ತಿಳಿದು ಇಷ್ಟಪಡ್ತೀರಾ ಎಂದುಕೊಳ್ಳುತ್ತೇನೆ. ಈ ಬಟ್ಟೆ ನೋಡುವ ಬದಲು ವ್ಯಕ್ತಿತ್ವ ನೋಡಿ ಎಂದು ಅವರು ತಿಳಿಸಿದ್ದಾರೆ. 

57
ಯಾರ ಮೇಲೂ ಡಿಪೆಂಡ್​ ಆಗುವುದಿಲ್ಲ
Image Credit : our own

ಯಾರ ಮೇಲೂ ಡಿಪೆಂಡ್​ ಆಗುವುದಿಲ್ಲ

ಯಾರ ಮೇಲೂ ಡಿಪೆಂಡ್​ ಆಗುವುದಿಲ್ಲ. ಲೆಕ್ಕಾಚಾರ ಇಟ್ಟುಕೊಂಡೇ ಹೋಗಿದ್ದೇನೆ. ಎಲ್ಲಾ ಪ್ರಿಪರೇಷನ್​ ಮಾಡಿಕೊಂಡೇ ಹೋಗಿದ್ದೇನೆ. ನಿಮ್ಮ ಸಪೋರ್ಟ್​ ನನಗೆ ಬೇಕು. ಕೊನೆಯವರೆಗೂ ಸಪೋರ್ಟ್​ ಮಾಡಿ ಎಂದು ಜಾಹ್ನವಿ ಕೇಳಿಕೊಂಡಿದ್ದಾರೆ. 

67
ನನ್ನ ಎಂಟ್ರಿ ನಿಮಗೆಲ್ಲಾ ತುಂಬಾ ಇಷ್ಟ ಆಗಿದೆ
Image Credit : youtube

ನನ್ನ ಎಂಟ್ರಿ ನಿಮಗೆಲ್ಲಾ ತುಂಬಾ ಇಷ್ಟ ಆಗಿದೆ

 ನನ್ನ ಎಂಟ್ರಿ ನಿಮಗೆಲ್ಲಾ ತುಂಬಾ ಇಷ್ಟ ಆಗಿದೆ ಎಂದುಕೊಳ್ಳುತ್ತೇನೆ. ಇದು ಬಹಳ ದಿವಸಗಳ ವಿಷ್​. ಅದೀಗ 12ನೇ ಸೀಸನ್​ನಲ್ಲಿ ಫುಲ್​ಫಿಲ್​ ಆಗಿದೆ. ನಾನು ಹುಟ್ಟಿರೋದು ಸೆಪ್ಟೆಂಬರ್​ 21. ಅದಕ್ಕಾಗಿಯೇ 12 ಮತ್ತು 21 ನನ್ನ ಲಕ್ಕಿ ನಂಬರ್​ ಆಗಿದೆ ಎಂದಿದ್ದಾರೆ ಜಾಹ್ನವಿ.

77
ಸೀಸನ್​ ಬಿಗ್​ಬಾಸ್​ ತುಂಬಾನೇ ವಿಶೇಷ
Image Credit : instagram

ಸೀಸನ್​ ಬಿಗ್​ಬಾಸ್​ ತುಂಬಾನೇ ವಿಶೇಷ

ಈ ಸೀಸನ್​ ಬಿಗ್​ಬಾಸ್​ ತುಂಬಾನೇ ವಿಶೇಷವಾಗಿರುತ್ತದೆ. ಈ ಸೀಸನ್​ನಲ್ಲಿ ನಾನು ಎಂಟ್ರಿ ಕೊಡ್ತಿರೋದು ನಿಮಗೆ ಖುಷಿಯಾಗಿದೆ ಎಂದುಕೊಂಡಿದ್ದೇನೆ. ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತಿದ್ದೇನೆ. ನನ್ನ ಜೀವನ, ನನ್ನ ನಿಯಮ (My life, my rules) ಎಂದುಕೊಂಡು ಒಳಗೆ ಹೋಗುತ್ತಿದ್ದೇನೆ. ಇದ್ಯಾವುದು ಜಂಬದ ಮಾತಲ್ಲ. ಆದರೆ ನನ್ನ ಬದುಕಿನಲ್ಲಿ ಹೊಸ ಹೆಜ್ಜೆ ಶುರುವಾಗಿ ಎಂದು ಅರ್ಥ ಎಂದಿದ್ದಾರೆ ನಿರೂಪಕಿ. ಎಲ್ಲರೂ ಕೊನೆಯವರೆಗೂ ಸಪೋರ್ಟ್​ ಮಾಡಿ ಎಂದು ಕೋರಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಕಲರ್ಸ್ ಕನ್ನಡ
ಕಿಚ್ಚ ಸುದೀಪ್
ರಿಯಾಲಿಟಿ ಶೋ
ಸಂಬಂಧಗಳು

Latest Videos
Recommended Stories
Recommended image1
ಬೆಂಗಳೂರಿನ ಜನತೆಗೆ ಮುದ್ದಾದ ಪ್ರಶ್ನೆ ಕೇಳಿದ ರಕ್ಷಿತಾ ಶೆಟ್ಟಿ: ಬೆಂಗಳೂರಿಗರೇ ನಿಮ್ಮ ಉತ್ತರ ಏನು?
Recommended image2
3 ಕೋಟಿ ಆಸ್ತಿ ಒಡತಿ ಆಗ್ತಿದ್ದಂತೆಯೇ ಬದಲಾಯ್ತು Karna Serial ನಿತ್ಯಾ ಲುಕ್​! ನಟಿಯ ಕ್ಯೂಟ್​ ಫೋಟೋಶೂಟ್​
Recommended image3
‌ದೊಡ್ಮನೆ ಹಬ್ಬ ಮಾಡಿ Bigg Boss ಸ್ಪರ್ಧಿಗಳ ಗುಟ್ಟು ರಟ್ಟು ಮಾಡಿದ Bhagyalakshmi Serial ನಟಿ ಸುಷ್ಮಾ ರಾವ್
Related Stories
Recommended image1
Bigg Boss ಕಾರ್ತಿಕ್​ ಮಹೇಶ್​ ಹುಟ್ಟುಹಬ್ಬ: ನಮ್ರತಾ ಗೌಡ ಪೋಸ್ಟ್​ ನೋಡಿ 'ಗೊತ್ತಾಯ್ತು ಬಿಡಿ' ಎಂದ ಫ್ಯಾನ್ಸ್​!
Recommended image2
Lakshmi Nivasa: ಪತಿಯ ಪ್ರೀತಿಗೆ ಕರಗಿ ಹೋಗ್ತಾಳಾ ಚಿನ್ನುಮರಿ ಅಥ್ವಾ ಜಯಂತ್​ ಕೈಯಲ್ಲಿ ಸಿಕ್ಕಿಬೀಳ್ತಾಳಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved