- Home
- Entertainment
- TV Talk
- ಕುಡುಕ ತಂದೆಯ ಚಿತ್ರಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು, ಅಪ್ಪನ ಆರೋಪಗಳಿಗೆ ಚೈತ್ರಾ ಕುಂದಾಪುರ ಖಡಕ್ ರಿಪ್ಲೈ
ಕುಡುಕ ತಂದೆಯ ಚಿತ್ರಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು, ಅಪ್ಪನ ಆರೋಪಗಳಿಗೆ ಚೈತ್ರಾ ಕುಂದಾಪುರ ಖಡಕ್ ರಿಪ್ಲೈ
ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರ ತಂದೆ ಮಾಡಿರುವ ಆರೋಪಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಮದುವೆಗೆ ತಂದೆ ಬರಲಿಲ್ಲ, ಹಣ ಕೊಡಲಿಲ್ಲ ಎಂಬ ಆರೋಪಗಳಿಗೆ ಚೈತ್ರಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕುಡುಕ ತಂದೆಯಿಂದ ಅನುಭವಿಸಿದ ನೋವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ ತಮ್ಮ ತಂದೆ ಮಾಡಿರುವ ಆರೋಪಕ್ಕೆ ಸ್ಪಷ್ಟತೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಸ್ಟೇಟಸ್ ಹಾಕಿಕೊಂಡಿದ್ದಾರೆ. ಚೈತ್ರ ಮದುವೆ ನಾನು ಒಪ್ಪಲ್ಲ. ಅವಳು ಮದುವೆಗೆ ಕರೆದಿಲ್ಲ. ಮೋಸ ಮಾಡಿದ್ದಾಳೆ. ನನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದೆಲ್ಲ ಮಾಡಿರುವ ತಂದೆಯ ಆರೋಪಕ್ಕೆ ಉತ್ತರ ನೀಡಿರುವ ಚೈತ್ರಾ ಕುಂದಾಪುರ ತಮ್ಮ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂಥ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. "ಎರಡು ಕ್ವಾಟರ್ ನಾನು ಕೊಟ್ಟರೆ ನನ್ನ ಮಕ್ಕಳು ದೇವರು" ಹೀಗೆನ್ನುವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ! ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಸ್ಟೇಟಸ್ ಹಾಕಿರುವ ಚೈತ್ರಾ ಕುಂದಾಪುರ "ಹೆತ್ತ ಮಕ್ಕಳನ್ನ ಸಾಕಲಿಲ್ಲ. ಫೀಸು ಕಟ್ಟಿ ಓದಿಸಲಿಲ್ಲ, ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ.... ಕಟ್ಟಿಕೊಂಡ ಹೆಂಡತಿದೆ ಹೊಡೆದು ಚಿತ್ರ ಹಿಂದೆ ಮಾಡಿದ್ದು ಬಿಟ್ರೆ ಬೇರೆ ಏನೂ ಇಲ್ಲಾ.... ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು. ವಾವ್... ಎಂದು ಬರೆದುಕೊಂಡಿದ್ದಾರೆ.
ಚೈತ್ರಾ ಕುಂದಾಪುರ, ಮೇ 9, 2025ರಂದು ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾನು ಪ್ರೀತಿಸಿದ ಹುಡುಗ ಶ್ರೀಕಾಂತ್ ಕಶ್ಯಪ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಸಂತಸದಲ್ಲಿ ಇರುವಾಗಲೇ ತಂದೆ ಬಾಲಕೃಷ್ಣ ನಾಯ್ಕ್, ತಮ್ಮ ಮಗಳ ಮದುವೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೊತೆಗೆ ಚೈತ್ರಾ ಮತ್ತು ಆಕೆಯ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಆರೋಪ ಏನಾಗಿತ್ತು?
ತಮ್ಮ ಮಗಳಾದ ಚೈತ್ರಾ ಕುಂದಾಪುರ ನನ್ನನ್ನು ಕರೆದಿಲ್ಲ, ನಾನೂ ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರಾ ಮತ್ತು ಆಕೆಯ ಪತಿ ಶ್ರೀಕಾಂತ್ ಕಶ್ಯಪ್ ಇಬ್ಬರನ್ನೂ 'ಕಳ್ಳರು. ಅವರಿಗೆ 'ಮಾನ-ಮರ್ಯಾದೆ ಇಲ್ಲ. ಚೈತ್ರ ಮದುವೆ ಸಂದರ್ಭ ನನ್ನಲ್ಲಿ ಹಣ ಕೇಳಿದಳುನಾನು ಹೋಟೆಲ್ ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ. ಹಣ ಕೊಡಲಾಗಿಲ್ಲ. ಹೀಗಾಗಿ ನನ್ನನ್ನು ದೂರವಿಟ್ಟಿದ್ದಾರೆ. ಚೈತ್ರಾ ಮತ್ತು ನನ್ನ ಪತ್ನಿ ಹಣದ ಆಸೆಗಾಗಿ ನನ್ನನ್ನು ದೂರವಿಟ್ಟಿದ್ದಾರೆ. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥನಾಗಿದ್ದೇನೆ ಎಂದು ಚೈತ್ರಾ ತಂದೆ ಬಾಲಕೃಷ್ಣ ನಾಯಕ್ ಹೇಳಿದ್ದಾರೆ.
ಇದರ ಜೊತೆಗೆ ಮತ್ತಷ್ಟು ಆರೋಪ ಮಾಡಿ ಗೋವಿಂದ ಬಾಬು ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿದಂತೆಯತೂ ಮಾತನಾಡಿ. 5 ಕೋಟಿ ಹಣವನ್ನು ಮನೆಯಲ್ಲಿಯೇ ತಂದು ಲೆಕ್ಕ ಮಾಡಿದ್ದರು ಎಂದಿದ್ದಾರೆ. ನನ್ನ ಪತ್ನಿಯೂ ಚೈತ್ರಾಳನ್ನು ಬೆಂಬಲಿಸುತ್ತಿದ್ದಾಳೆ. ನನ್ನ ಹೆಂಡತಿಗೆ ಗೌರವ ಬೇಕಾಗಿಲ್ಲ. ಹಣವಿದ್ದರೆ ಸಾಕು. ಹಣಕ್ಕಾಗಿ ಚೈತ್ರಾಗೆ ಸಪೋರ್ಟ್ ಮಾಡ್ತಿದ್ದಾಳೆ. ಚೈತ್ರಾ ಬಿಗ್ ಬಾಸ್‌ಗೆ ಹೋಗುವಾಗಲೂ ನನಗೆ ತಿಳಿಸಿಲ್ಲ. ನನ್ನ ಪತ್ನಿ ನನ್ನನ್ನು ಜಗಲಿಯಲ್ಲಿ ಕೂಡಿಹಾಕಿ ಬಿಗ್ ಬಾಸ್‌ಗೆ ಹೋಗಿದ್ದಳು.
ಚೈತ್ರಾ ನನ್ನ ಮಗಳು ಎಂದು ಹೇಳಲು ನಾಚಿಕೆಯಾಗುತ್ತದೆ. ಆಕೆ ಮತ್ತೆಂದೂ ನನ್ನ ಜೀವನದಲ್ಲಿ ಬರಲೇಬಾರದು. ಅವಳಿಗೆ ನನ್ನ ಶಾಪ ಇದೆ. ತಂದೆಯನ್ನು ದೂರವಿಟ್ಟವರು ಸಂಸ್ಕೃತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ? ನಾನು ಸತ್ಯ, ನ್ಯಾಯ, ಧರ್ಮದಲ್ಲಿರುವ ವ್ಯಕ್ತಿ. ನನ್ನ ಕುಟುಂಬದ ಮಾನ-ಮರ್ಯಾದೆಯನ್ನು ಚೈತ್ರಾ ಮತ್ತು ಆಕೆಯ ಪತಿ ತೆಗೆದಿದ್ದಾರೆ. ಅವನನ್ನು ಚಿಕ್ಕದಿನಿಂದಲೂ ನೋಡಿದ್ದೇನೆ ಆತ ಸರಿ ಇಲ್ಲ ಎಂದು ಬಾಲಕೃಷ್ಣ ನಾಯಕ್ ಆರೋಪಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

