- Home
- Entertainment
- TV Talk
- BBK 12: ವೀಕೆಂಡ್ ಎಪಿಸೋಡ್‌ನಲ್ಲಿ Ashwini Gowda ಮಾಡೋ ಕಿತಾಪತಿ ಬಯಲು ಮಾಡಿದ Spandana Somanna
BBK 12: ವೀಕೆಂಡ್ ಎಪಿಸೋಡ್‌ನಲ್ಲಿ Ashwini Gowda ಮಾಡೋ ಕಿತಾಪತಿ ಬಯಲು ಮಾಡಿದ Spandana Somanna
Bigg Boss Kannada 12 ವೀಕೆಂಡ್ ಎಪಿಸೋಡ್‌ನಲ್ಲಿ ಕೆಲವು ವಿಷಯಗಳ ಬಗ್ಗೆ ಕ್ಲಾರಿಟಿ ಸಿಗುವುದು. ಕೆಲ ಗೊಂದಲಗಳು, ಸಮಸ್ಯೆಗಳನ್ನು ಕಿಚ್ಚ ಸುದೀಪ್ ಅವರು ಅಡ್ರೆಸ್ ಮಾಡಿ ಮಾತನಾಡುತ್ತಾರೆ. ಆ ವೇಳೆ ಅಶ್ವಿನಿ ಗೌಡ ಮ್ಯಾನಿಪ್ಯುಲೇಶನ್ ಮಾಡೋದರ ಬಗ್ಗೆ ಸ್ಪಂದನಾ ಸೋಮಣ್ಣ, ಧನುಷ್ ಗೌಡ ಚರ್ಚೆ ಮಾಡಿದ್ದಾರೆ.

ಚರ್ಚೆ ಮಾಡಿರುವ ಸ್ಪರ್ಧಿಗಳು
ವೀಕೆಂಡ್ ಎಪಿಸೋಡ್‌ನಲ್ಲಿ ಪಕ್ಕದ್ದಲ್ಲಿದ್ದವರನ್ನು ಅಶ್ವಿನಿ ಗೌಡ ಅವರು ಹೇಗೆ ಮ್ಯಾನಿಪ್ಯುಲೇಟ್ ಮಾಡ್ತಾರೆ ಎನ್ನೋದನ್ನು ಸ್ಪಂದನಾ ಸೋಮಣ್ಣ, ಧನುಷ್ ಗೌಡ, ಅಭಿಷೇಕ್ ಶ್ರೀಕಾಂತ್, ಸೂರಜ್ ಸಿಂಗ್ ಅವರು ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಸೂರಜ್ ಅವರಿಗೆ ಅಶ್ವಿನಿ ಅವರ ಕೆಲ ಗುಣಗಳು ಇಷ್ಟ ಆಗೋದಿಲ್ಲ. ಆದರೆ ಇದನ್ನು ಅವರು ಇನ್ನೂ ಖಂಡಿಸಿ ಮಾತನಾಡಿಲ್ಲ.
ಇವರೇ ಒಬ್ಬರ ಹೆಸರನ್ನು ತಗೋತಾರೆ
ಅಶ್ವಿನಿ ಗೌಡ ಅವರು ವೀಕೆಂಡ್ ಎಪಿಸೋಡ್‌ನಲ್ಲಿ ಯಾರು ಹೆಸರು ತಗೊಳ್ತೀರಾ? ಎಂದೆಲ್ಲ ಪ್ರಶ್ನೆ ಮಾಡುತ್ತಾರೆ. ಬೇರೆಯವರು ಹೆಸರು ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದಾಗ ಇವರೇ ಒಬ್ಬರ ಹೆಸರನ್ನು ತಗೋತಾರೆ ಎಂದು ಸ್ಪಂದನಾ ಸೋಮಣ್ಣ ಹೇಳಿದ್ದಾರೆ.
ಸ್ಪಂದನಾ ಸೋಮಣ್ಣ ಹೇಳಿದ್ದೇನು?
“ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡುತ್ತಿರುತ್ತಾರೆ, ಆಗ ಇವರು ಏನೂ ಎಕ್ಸ್‌ಪ್ರೆಶನ್ ಬದಲಾಯಿಸದೆ, ಸರ್‌ನನ್ನು ನೋಡುತ್ತಿರುತ್ತಾರೆ, ಕಳೆದ ವಾರ ನಾನು ತುಂಬ ಗಮನವಿಟ್ಟು ನೋಡಿದೆ. ಮೆತ್ತಗೆ ಮಾತನಾಡುತ್ತಾರೆ. ಅಭಿಪ್ರಾಯ ಹೇಳಿ ಅಂದಾಗಲೂ ಹೀಗೆ ಮಾಡ್ತಾರೆ. ಇದು ತಪ್ಪು” ಎಂದು ಸ್ಪಂದನಾ ಸೋಮಣ್ಣ ಹೇಳಿದ್ದಾರೆ.
ಎಲ್ಲ ಟೈಮ್‌ನಲ್ಲೂ ಹೀಗೆ ಆಗಿದೆ
ಧನುಷ್ ಗೌಡ ಕೂಡ, “ನಾನು ಇದನ್ನು ನೋಡಿದ್ದೇನೆ, ಎಲ್ಲ ವಾರಗಳಲ್ಲಿಯೂ ಹೀಗೆ ಆಗಿದೆ” ಎಂದು ಹೇಳಿದ್ದಾರೆ. ಇವರಿಬ್ಬರ ಮಾತು ಕೇಳಿ ಸೂರಜ್ ಸಿಂಗ್ ಆಶ್ಚರ್ಯಚಕಿತರಾಗಿದ್ದಾರೆ.
ರಕ್ಷಿತಾ ಶೆಟ್ಟಿ ಕ್ಯಾರೆಕ್ಟರ್ ಬಗ್ಗೆ ಮಾತಾಡಿದ್ರು
ಈ ಬಾರಿ ರಕ್ಷಿತಾ ಶೆಟ್ಟಿ ಕ್ಯಾರೆಕ್ಟರ್ ಬಗ್ಗೆ ಅಶ್ವಿನಿ ಗೌಡ ಮಾತನಾಡಿದ್ದರು. ಇದನ್ನು ಉಳಿದವರು ಕೂಡ ಖಂಡಿಸಿದ್ದರು. ಈಗ ಕಿಚ್ಚ ಸುದೀಪ್ ಅವರು ಈ ವಿಷಯವನ್ನು ಮಾತಾಡ್ತಾರಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

