- Home
- Entertainment
- TV Talk
- Kiccha Sudeep ಮಗಳು ಹೀಗಿದ್ರೆ ಅವ್ರು ಸುಮ್ನೆ ಇರ್ತಿದ್ರಾ? BBK ರಕ್ಷಿತಾ ಶೆಟ್ಟಿ ವಿರುದ್ಧ ಸಿಡಿದೆದ್ದ ನಟಿ
Kiccha Sudeep ಮಗಳು ಹೀಗಿದ್ರೆ ಅವ್ರು ಸುಮ್ನೆ ಇರ್ತಿದ್ರಾ? BBK ರಕ್ಷಿತಾ ಶೆಟ್ಟಿ ವಿರುದ್ಧ ಸಿಡಿದೆದ್ದ ನಟಿ
ಬಿಗ್ ಬಾಸ್ ಕನ್ನಡ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಜಾಹ್ನವಿ, ಅಶ್ವಿನಿ ಗೌಡ, ರಿಷಾ ಗೌಡ, ಅಶ್ವಿನಿ ಗೌಡ ಜೊತೆ ರಕ್ಷಿತಾ ಜಗಳ ಆಡಿದ್ದರು. ಈಗ ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ದಾರೆ, ದೂರು ಕೊಡ್ತೀನಿ ಎಂದು ರಂಗಭೂಮಿ ಕಲಾವಿದೆ ಕುಶಲಾ ಎನ್ನುವವರು ಹೇಳಿದ್ದಾರೆ.

ರಂಗಭೂಮಿ ಕಲಾವಿದೆ ಆಕ್ರೋಶ
ಕುಶಲಾ ಎನ್ನುವವರು ಕುಶಲ ಕಲಾ ಸಂಘ ಎನ್ನುವ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಮಾಧ್ಯಮವೊಂದರ ಜೊತೆ ಅವರು ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
“ನನ್ನ ಹೆಸರು ಕುಶಲಾ. ಕಳೆದ 25 ವರ್ಷಗಳಿಂದ ನಾನು ರಂಗಭೂಮಿಯಲ್ಲಿದ್ದೇನೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ನೋಡಿದ್ದೇನೆ. ಹಲವಾರು ಜಗಳ, ಕಂಟೆಂಟ್ ಟಿಆರ್‌ಪಿ ಏನೇನೋ ನಡೆಯುವುದು. ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನೀವು ಮೇಕಪ್ ಹಾಕ್ತೀರಿ, ಡ್ರಾಮಾ ಮಾಡ್ತೀರಿ ಅಂತ ರಕ್ಷಿತಾ ಶೆಟ್ಟಿ ಹೇಳಿದರು” ಎಂದು ಕುಶಲಾ ಹೇಳಿದ್ದಾರೆ.
ಅಶ್ವಿನಿ ಗೌಡಗೆ ಚಪ್ಪಲಿ ತೋರಿಸಿದರು
“ರಕ್ಷಿತಾ ಶೆಟ್ಟಿ ಅವರು ಐದು ಬಾರಿ ಅಶ್ವಿನಿ ಗೌಡಗೆ ಚಪ್ಪಲಿ ತೋರಿಸಿದರು. ಇದರ ಬಗ್ಗೆ ಕಿಚ್ಚ ಸುದೀಪ್ ಅವರು ಯಾಕೆ ಮಾತನಾಡಲಿಲ್ಲ? ಕಿಚ್ಚ ಸುದೀಪ್ ಅವರು ರಕ್ಷಿತಾ ಫಾಲೋವರ್ ಆದರೂ ತಪ್ಪಿಲ್ಲ. ಆದರೂ ಇದರ ಬಗ್ಗೆ ಕಿಚ್ಚ ಸುದೀಪ್ ಯಾಕೆ ಮಾತನಾಡಲಿಲ್ಲ? ಕಿಚ್ಚ ಸುದೀಪ್ ಅವರು ಕಲಾವಿದರು ಅಲ್ಲವೇ?” ಎಂದಿದ್ದಾರೆ ಕುಶಲಾ.
ಕಿಚ್ಚ ಸುದೀಪ್ ಯಾಕೆ ಮೇಕಪ್ ಮಾಡ್ಕೋಬೇಕು?
“ಬಿಗ್ ಬಾಸ್ ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಕ್ಷಮೆ ಕೇಳಬೇಕು. ನಾನು ರಕ್ಷಿತಾ ಶೆಟ್ಟಿ ವಿರುದ್ಧ ಕಂಪ್ಲೆಂಟ್ ಮಾಡ್ತೀನಿ. ಕಿಚ್ಚ ಸುದೀಪ್ ಅವರು ಜೆಪಿ ನಗರದಿಂದ ಬಂದು ಶೋ ನಡೆಸಬೇಕು? ಯಾಕೆ ಡಿಸೈನರ್ ಬಟ್ಟೆ ಹಾಕ್ಕೊಂಡು, ಮೇಕಪ್ ಹಾಕ್ಕೊಂಡು ಕಿಚ್ಚ ಸುದೀಪ್ ಹೋಸ್ಟ್ ಮಾಡಬೇಕು?” ಎಂದಿದ್ದಾರೆ ಕುಶಲಾ.
ಬಿಗ್ ಬಾಸ್ ಶೋ ನಿಲ್ಲಬೇಕು
“ಕಲಾವಿದರಿಗೆ ಬೆಲೆ ಇಲ್ಲದ ಕಡೆ ಇಲ್ಲ ಅಂದರೆ ಅಲ್ಲಿ ಇರಬಾರದು. ಅಶ್ವಿನಿ ಗೌಡ ಅವರಿಗೆ ಶೋ ಬಿಟ್ಟು ಬನ್ನಿ ಅಂತ ನಾನು ಹೇಳೋದಿಲ್ಲ. ಆದರೆ ಕಲಾವಿದರಿಗೆ ಬೆಲೆ ಕೊಟ್ಟಿಲ್ಲ ಅಂದ್ರೆ ಬಿಗ್ ಬಾಸ್ ಶೋ ನಿಲ್ಲಬೇಕು” ಎಂದು ಹೇಳಿದ್ದಾರೆ.
ಕಾವ್ಯ ಕಲಾವಿದೆ ಆಗಿದ್ರೆ...?
“ರಕ್ಷಿತಾ ಕಲಾವಿದರ ವಿರೋಧವಾಗಿ ಮಾತನಾಡಿಲ್ಲ ಎಂದು ಕಾವ್ಯ ಹೇಳುತ್ತಾರೆ. ಅದನ್ನು ನಾನು ಒಪ್ಪೋದಿಲ್ಲ. ಕಾವ್ಯ ಅವರು ನಿಜವಾದ ಕಲಾವಿದೆ ಆಗಿದ್ದರೆ ರಕ್ಷಿತಾ ಪರ ಮಾತನಾಡುತ್ತಿರಲಿಲ್ಲ” ಎಂದಿದ್ದಾರೆ.
ಕಿಚ್ಚ ಸುದೀಪ್‌ಗೂ ಮಗಳಿದ್ದಾಳೆ
“ಕಿಚ್ಚ ಸುದೀಪ್ ಅವರಿಗೂ ಮಗಳಿದ್ದಾಳೆ. ಮನೆಯಲ್ಲಿ ಕೂದಲು ಬಿಟ್ಕೊಂಡು ಜಗಳ ಆಡ್ಕೊಂಡು ಓಡಾಡುತ್ತಿದ್ದರೆ ಅವರು ಸುಮ್ಮನಿರುತ್ತಿದ್ದರಾ?” ಎಂದು ಕೂಡ ಕುಶಲಾ ಅವರು ಪ್ರಶ್ನೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

