- Home
- Entertainment
- TV Talk
- BBK 12: ಈ ಕೀಳು ಕೆಲಸಕ್ಕೆ ಕರ್ಮ ಬಿಡೋದಿಲ್ಲ Rakshita Shetty ಅವ್ರೇ; ದ್ವೇಷಕ್ಕಾಗಿ ಹೀಗೆಲ್ಲ ಮಾಡ್ತಾರಾ?
BBK 12: ಈ ಕೀಳು ಕೆಲಸಕ್ಕೆ ಕರ್ಮ ಬಿಡೋದಿಲ್ಲ Rakshita Shetty ಅವ್ರೇ; ದ್ವೇಷಕ್ಕಾಗಿ ಹೀಗೆಲ್ಲ ಮಾಡ್ತಾರಾ?
Bigg Boss Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸೀಕ್ರೆಟ್ ರೂಮ್‌ಗೆ ರಕ್ಷಿತಾ ಶೆಟ್ಟಿ ಹೋದಾಗಿನಿಂದ ವೀಕ್ಷಕರಿಗೆ ಇರಿಟೇಟ್ ಅನಿಸಿದೆ. ಅದಕ್ಕೂ ಮೊದಲೇ ರಕ್ಷಿತಾ ಇರಿಟೇಟ್ ಅನಿಸಿದ್ದರು. ಈಗ ಇದು ಅತಿರೇಕಕ್ಕೆ ಹೋಗಿದೆ. ರಕ್ಷಿತಾ ವ್ಯಕ್ತಿತ್ವ ಏನು ಎನ್ನೋದು ಬಯಲಾಗಿದೆ.

ಪಾಸಿಟಿವ್ ಪ್ರತಿಕ್ರಿಯೆ ಇತ್ತು
ಬಿಗ್ ಬಾಸ್ ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ಮುಗ್ಧೆ, ಕೆಲವೊಮ್ಮೆ ವಯಸ್ಸಿಗೂ ಮೀರಿದ ಮಾತುಗಳನ್ನು ಆಡುತ್ತಾರೆ, ಎಲ್ಲರಿಗೂ ಸಹಾಯ ಮಾಡುತ್ತಾರೆ, ಬೇರೆಯವರು ನೋವಿನಲ್ಲಿದ್ದರೆ ಸ್ಪಂದಿಸುತ್ತಾರೆ, ಹಾಗೆ ಹೀಗೆ ಎಂದು ವೀಕ್ಷಕರು ಅಂದುಕೊಂಡಿದ್ದರು.
ಧ್ರುವಂತ್ ಹೇಳಿದ್ದೇ ಸತ್ಯ
ರಕ್ಷಿತಾ ಶೆಟ್ಟಿ ಅವರು ಬಡತನದ ಕುಟುಂಬದಿಂದ ಬಂದಿದ್ದರು, ಅಷ್ಟೊಂದು ಬಟ್ಟೆಗಳಿಲ್ಲ ಹಾಗೆ ಹೀಗೆ ಎಂದು ವೀಕ್ಷಕರು ಮರುಕಗೊಂಡಿದ್ದರು. ಆದರೆ ಇತ್ತೀಚೆಗೆ ಅವರ ವರ್ತನೆ ಮಾತ್ರ ಅತಿರೇಕಕ್ಕೆ ಹೋಗಿದ್ದು, ಇರಿಟೇಟ್, ಮುಖವಾಡ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಧ್ರುವಂತ್ ಅವರು ಆರಂಭದಲ್ಲಿ ಈ ಮಾತು ಹೇಳಿದಾಗ ಯಾರೂ ನಂಬಿರಲಿಲ್ಲ. ಈಗ ಸತ್ಯ ಎಂದು ಗೊತ್ತಾಗಿದೆ
ಆಟದಲ್ಲಿಯೂ ತಾರತಮ್ಯ
ಬಿಗ್ ಬಾಸ್ ಮನೆಯೊಳಗಡೆ ಸೀಕ್ರೆಟ್ ರೂಮ್‌ನಲ್ಲಿದ್ದ ರಕ್ಷಿತಾ ಶೆಟ್ಟಿ ಅವರು ಅಲ್ಲಿಂದಲೇ ಗೇಮ್ ಪ್ಲ್ಯಾನ್ ಮಾಡುತ್ತಿದ್ದರು. ಯಾರು ಯಾವ ಆಟವನ್ನು ಜೋಡಿಯಾಗಿ ಆಡಬೇಕು ಎಂದೆಲ್ಲ ಅವರೇ ಡಿಸೈಡ್ ಮಾಡಿದ್ದರು. ತನಗೆ ಬೇಕಾದವರಿಗೆ ಪ್ರಾಮುಖ್ಯತೆ ಕೊಟ್ಟು, ಉಳಿದವರನ್ನು ಸೈಡ್‌ಲೈನ್ ಮಾಡಿದ್ದರು. ಇದಕ್ಕೂ ಕೂಡ ಜನರಿಂದ ವಿರೋಧ ಬಂದಿತ್ತು.
ಮೇಕಪ್ ಸೆಟ್ ಬಿಸಾಕಿದ್ರು
ಬಿಗ್ ಬಾಸ್ ಮನೆಯನ್ನು ಗಲೀಜು ಮಾಡಿ ಎಂದು ಬಿಗ್ ಬಾಸ್ ಟಾಸ್ಕ್ ಕೊಟ್ಟಿದ್ದರು. ಕಾವ್ಯ ಶೈವ ತನ್ನನ್ನು ಫೇಕ್ ಎಂದರು, ನಾಮಿನೇಟ್ ಮಾಡಿದರು ಎನ್ನುವ ದ್ವೇಷಕ್ಕೆ ರಕ್ಷಿತಾ ಶೆಟ್ಟಿ ಈಗ ಅವರ ಮೇಕಪ್ ಸೆಟ್‌ನ್ನು ಎಲ್ಲೆಡೆ ಬಿಸಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಗಿಲ್ಲಿ ನಟ ಹೀಗೆಲ್ಲ ಮಾಡಲ್ಲ
ಗಿಲ್ಲಿ ನಟ ತನಗೆ ಇಷ್ಟ ಆಗದ ವ್ಯಕ್ತಿತ್ವಗಳನ್ನು ಮಾತಿನಲ್ಲಿ ತಿವಿಯಬಹುದು, ಆದರೆ ಈ ರೀತಿ ಮಾಡೋದಿಲ್ಲ. ಈಗ ರಕ್ಷಿತಾ ಶೆಟ್ಟಿ ಮಾತ್ರ ಅಕ್ಷರಶಃ ದ್ವೇಷ ಸಾಧಿಸುತ್ತಿದ್ದಾರೆ. ಕಿಚ್ಚ ಸುದೀಪ್ ಮಾತ್ರ ಈ ವಿಷಯಕ್ಕೆ ಕ್ಲಾಸ್ ತಗೋಬೇಕು, ಕುಣಿಯೋದು, ಬೇರೆಯವರ ಮಾತನ್ನು ಕೇಳಿಸಿಕೊಳ್ಳೋದಿಲ್ಲ ಎಂದು ವೀಕ್ಷಕರು ಕೂಡ ಸಿಟ್ಟಾಗಿದ್ದಾರೆ.
ರಕ್ಷಿತಾ ಶೆಟ್ಟಿಗೆ ಶಿಕ್ಷೆ ಆಗಲೇಬೇಕು
ಬ್ಯಾಗ್‌ನಲ್ಲಿದ್ದ ಬ್ರಶ್ ಎಲ್ಲವನ್ನು ತಗೊಂಡು ಕಸದ ಮಧ್ಯೆ ಬಿಸಾಕೋದು, ಲಿಪ್‌ಸ್ಟಿಕ್‌ನಿಂದ ಎಲ್ಲವನ್ನು ಬಿಸಾಕೋದು ಸರಿಯೇ? ಗಿಲ್ಲಿ ನಟ ಹಾಗೂ ರಘು ಅವರು ಅಶ್ವಿನಿ ವಿರುದ್ಧ ಮಾತನಾಡಿದಾಗ, ಇದು ಆಟ, ಕ್ಷಮೆ ಕೇಳಿ ಎಂದು ಹೇಳಿದ್ದ ರಕ್ಷಿತಾಗೆ ಇದು ತಪ್ಪು, ಗಲೀಜು ಮಾಡೋಕೆ ಹೇಳಿದ್ದಾರೆ, ಇದೆಲ್ಲ ಎಸೆಯಿರಿ ಎಂದು ಹೇಳಿಲ್ಲ ಎನ್ನೋದು ಗೊತ್ತಾಗೋದಿಲ್ಲವೇ? ಕೇವಲ ಕಾವ್ಯ ಶೈವ ವಸ್ತುಗಳನ್ನು ಮಾತ್ರ ಎಸೆದಿದ್ದಾರೆ. ಇದಕ್ಕೆ ಶಿಕ್ಷೆ ಆಗಲೇಬೇಕು, ಕರ್ಮ ಬಿಡೋದಿಲ್ಲ ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

