MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss ರಜತ್​ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ

Bigg Boss ರಜತ್​ಗೆ ಹೀಗೆಲ್ಲಾ ಮಾಡಬಾರದೆಂದು ಗೊತ್ತೇ ಇರಲಿಲ್ವಂತೆ! ಕ್ಷಮೆ ಕೋರಿ ಕೊಟ್ರು ಒಂದು ಸ್ಪಷ್ಟನೆ

ಬಿಗ್​ಬಾಸ್​ ಖ್ಯಾತಿಯ ರಜತ್ ಇದೀಗ ಸಾರ್ವಜನಿಕ ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಮಾದರಿಯ ಸ್ಫೋಟದ ವಿಡಿಯೋ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ.  ಮಚ್ಚು ಹಿಡಿದು ರೀಲ್ಸ್ ಹಾಗೂ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಅವರು, ಈಗ ಹೀಗೊಂದು ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದಾರೆ.

2 Min read
Author : Suchethana D
Published : Apr 28 2026, 10:10 PM IST
Share this Photo Gallery
  • FB
  • TW
  • Linkdin
  • Whatsapp
16
ಹೇಗಾದರೂ ಹೆಸ್ರು ಮಾಡಬೇಕು!
Image Credit : Asianet News

ಹೇಗಾದರೂ ಹೆಸ್ರು ಮಾಡಬೇಕು!

ಕೆಲವರಿಗೆ ಬಹುಶಃ ಹೇಗಾದರೂ ಮಾಡಿ ಸುದ್ದಿಯಲ್ಲಿ ಇರುವ ಆಸೆ. ಅದಕ್ಕೆ ಅವರಿಗೆ ಸಿಗುವುದು ಕಾಂಟ್ರವರ್ಸಿಗಳೇ. ಏಕೆಂದರೆ ಜನರಿಗೂ ಒಳ್ಳೆಯ ಮಾರ್ಗದಲ್ಲಿ ಹೋದರೆ, ಅವರ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ, ಆದ್ರೆ ಕಾಂಟ್ರವರ್ಸಿ ಮಾಡಿಕೊಂಡರೆ ಸಾಕು, ಒಳ್ಳೊಳ್ಳೆ ಆಫರ್​ಗಳು ಬರುತ್ತವೆ, ಜೊತೆಗೆ ಇಂಥ ಕಾಂಟ್ರವರ್ಸಿಗಳಿಗಾಗಿಯೇ ಬಾಗಿಲು ತೆರೆಯುವ ದೊಡ್ಡ ದೊಡ್ಡ ರಿಯಾಲಿಟಿ ಷೋಗಳು ಕೈಬೀಸಿ ಕರೆಯುತ್ತವೆ ಎನ್ನುವುದು ಚೆನ್ನಾಗಿ ಗೊತ್ತಿದೆ. ಜೊತೆಗೆ ಜಾಹೀರಾತು ಕಂಪೆನಿಗಳು ಕೂಡ ಯಾರು ಹಾಳಾದ್ರೆ ಏನಂತೆ, ಕಾಂಟ್ರವರ್ಸಿಯಾದರೆ ಅದನ್ನು ಹೆಚ್ಚೆಚ್ಚು ಜನ ನೋಡಿ ತಮ್ಮ ಪ್ರಾಡಕ್ಟ್​​ ಹೆಚ್ಚು ಪ್ರಚಾರ ಆಗುತ್ತದೆ ಎನ್ನುವುದು ಅವರಿಗೂ ಗೊತ್ತಿದೆ.

26
ಜೈಲಿಗೆ ಹೋಗಿದ್ದರೂ ಹೀಗೆ ಮಾಡೋದಾ?
Image Credit : our own

ಜೈಲಿಗೆ ಹೋಗಿದ್ದರೂ ಹೀಗೆ ಮಾಡೋದಾ?

ಇದೀಗ ಬಿಗ್​ಬಾಸ್​ ರಿಯಾಲಿಟಿ ಷೋಗೆ ಹೋಗಿ ಬಂದ ಮೇಲೆ ಸದಾ ಸದ್ದು ಮಾಡುವ ಹುಮ್ಮಸ್ಸಿನಲ್ಲಿದ್ದಂತೆ ಕಾಣುತ್ತಿದ್ದಾರೆ ರಜತ್​. ಈ ಹಿಂದೆ ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಶೂಟಿಂಗ್ ಮಧ್ಯೆ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ರಜತ್ ಹಾಗೂ ವಿನಯ್ ವಿರುದ್ಧ ಕೇಸ್‌ ದಾಖಲಾಗಿತ್ತು. ಇವರನ್ನು ಜೈಲಿಗೂ ಕಳುಹಿಸಲಾಗಿತ್ತು.

Related Articles

Related image1
KD Movie ಸೆರಗ ಸರಿಸೋ ಬಗ್ಗೆ ಮೊದಲ ಬಾರಿ ರಿಯಾಕ್ಷನ್​ ಕೊಟ್ಟ ಸುದೀಪ್​: ಕಿಚ್ಚ ಹೇಳಿದ್ದೇನು
Related image2
Animal ಫಿಲ್ಮ್​ ನಾಯಕಿಯಾಗಿದ್ರೆ ರಾಘವ್​ ಚಡ್ಡಾ ಜೊತೆ ಮದ್ವೆನೇ ಆಗ್ತಿರಲಿಲ್ಲ: ನಟಿ ಪರಿಣೀತಿ ಚೋಪ್ರಾ ರಿವೀಲ್​
36
ಮೈಸೂರಿನ ಪಾರಂಪರಿಕ ಕಟ್ಟಡದ ವಿವಾದ
Image Credit : rajath instagram

ಮೈಸೂರಿನ ಪಾರಂಪರಿಕ ಕಟ್ಟಡದ ವಿವಾದ

ಇದಾದ ಬಳಿಕ ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿಸಿ ರಜತ್ ಸಂಕಷ್ಟಕ್ಕೆ ಸಿಲುಕಿದ್ದರು. ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಬಳಿ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಾ ವಿಲನ್ ಲುಕ್‌ನಲ್ಲಿ ಪೋಸ್ ಕೊಟ್ಟಿರುವ ರ ಈ ಚಿತ್ರಗಳನ್ನು ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದರು. ಈ ಚಿತ್ರಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

46
ಭೀಕರ ಸ್ಫೋಟ
Image Credit : colors kannada

ಭೀಕರ ಸ್ಫೋಟ

ಇದೀಗ ಸಾರ್ವಜನಿಕ ರಸ್ತೆಯಲ್ಲೇ ಪೆಟ್ರೋಲ್ ಬಾಂಬ್ ಮಾದರಿಯ ಭೀಕರ ಸ್ಫೋಟ ನಡೆಸಿ ಅದನ್ನು ವೀಡಿಯೊ ಚಿತ್ರೀಕರಿಸುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದು ಭಾರಿ ಟ್ರೋಲ್​ ಆಗುತ್ತಲೇ ಲೈವ್​ನಲ್ಲಿ ಬಂದು ಸ್ಪಷ್ಟನೆ ಕೊಟ್ಟಿದ್ದಾರೆ ರಜತ್​. ಇದು ಯಾರಿಗೂ ನೋವು ಮಾಡುವ ವಿಡಿಯೋ ಅಲ್ಲ. ಹಾಗೆಯೇ ಮಿಡಿಯಾದವರು ಕಾಲ್ ಮಾಡುವವರೆಗೂ ಈ ವಿಡಿಯೋ ಇಷ್ಟು ಸುದ್ದಿ ಆಗಿದೆ ಅನ್ನೋದೇ ಗೊತ್ತಿಲ್ಲ ಎಂದು ರಜತ್ ಹೇಳಿದ್ದಾರೆ.

56
ಪ್ರಮೋಷನ್ ವಿಡಿಯೋ ಅಷ್ಟೇ
Image Credit : Instagram

ಪ್ರಮೋಷನ್ ವಿಡಿಯೋ ಅಷ್ಟೇ

ಇದೊಂದು ಪ್ರಮೋಷನ್ ವಿಡಿಯೋ ಅಷ್ಟೇ. ನನಗೆ ಯಾವ ರೀತಿ ಆಕ್ಟ್ ಮಾಡಬೇಕು ಎಂದು ಹೇಳಿದ್ರೋ ಆ ರೀತಿ ಆಕ್ಟ್ ಮಾಡಿದ್ದೀನಿ. ಹಾಗೆಯೇ ಮುಖ್ಯವಾಗಿ ಸೇಫ್ಟಿ ಪ್ರಿಕಾಷನ್ ತಗೊಂಡು ವಿಡಿಯೋ ಮಾಡಲಾಗಿದೆ. ಅಷ್ಟೇ ಅಲ್ಲದೆ ಜನ ಇಲ್ಲದಾಗ ಸ್ಥಳೀಯರ ಅನುಮತಿ ಪಡೆದು ವಿಡಿಯೋ ಮಾಡಲಾಗಿದೆ. ಆದರೆ ಇಷ್ಟೆಲ್ಲಾ ಕಾಂಟ್ರವರ್ಸಿ ಆಗುತ್ತದೆ, ಜನರಿಗೆ ಇದರಿಂದ ಹರ್ಟ್​ ಆಗುತ್ತದೆ ಎನ್ನುವುದು ಗೊತ್ತೇ ಆಗಲಿಲ್ಲ ಎಂದು ರಜತ್ ಸ್ಪಷ್ಟನೆ‌ ನೀಡಿದ್ದಾರೆ.

66
ಡಿಸ್​ಕ್ಲೇಮರ್​ ಬೇರೆ
Image Credit : colors kannada

ಡಿಸ್​ಕ್ಲೇಮರ್​ ಬೇರೆ

ಅಷ್ಟಕ್ಕೂ ಈ ವಿಡಿಯೋದಲ್ಲಿ, ಹಿಂದೆ ಬೆಂಕಿ.. ಮುಂದೆ ಮಾಡಿಫೈ ಆಗಿರುವ ಬುಲೆಟ್ ಓಡಿಸುತ್ತಾ ತಾವು ಬರುವ ರೀಲ್ಸ್‌ನ ರಜತ್ ಶೇರ್‌ ಮಾಡಿಕೊಂಡಿದ್ದರು. ಇದಕ್ಕೆ, ಸುಮ್ಮನೆ ತಮಾಷೆಗೆ ಮಾಡಿರೋ ಶೂಟ್. ಇದಕ್ಕೂ ಒಂದು ಕೇಸ್ ಹಾಕ್ಬೇಡ್ರಪ್ಪಾ ರಾಜ’’ ಎಂದು ರಜತ್ ಬರೆದುಕೊಂಡಿದ್ದಾರೆ. ‘’ಈ ಕಂಟೆಂಟ್ ಕ್ರಿಯೇಟ್ ಮಾಡಿರೋದು ಚಿತ್ರೀಕರಣದ ಸಲುವಾಗಿ ಮಾತ್ರ. ಎಲ್ಲಾ ಅವಶ್ಯಕ ಸುರಕ್ಷತಾ ಕ್ರಮಗಳನ್ನ ಕೈಗೊಂಡು, ಪರಿಣತಿ ಹೊಂದಿರುವ ತಜ್ಞರಿಂದ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ಈ ಚಿತ್ರೀಕರಣ ಮಾಡಿದ್ದೇವೆ. ಇದನ್ನ ಅನುಕರಿಸಬೇಡಿ. ಇದನ್ನ ಮರುಸೃಷ್ಟಿಸಬೇಡಿ. ಬೆಂಕಿ ಅಪಾಯಕಾರಿ. ಚಿತ್ರೀಕರಣದ ವೇಳೆ ಹೆಲ್ಮೆಟ್ ಧರಿಸಿಲ್ಲ. ಇದು ಅಸುರಕ್ಷಿತ. ರಸ್ತೆ ಸುರಕ್ಷತಾ ಕ್ರಮಗಳನ್ನ ಪಾಲಿಸಿ. ವಾಹನ ಚಲಾಯಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ. ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ವಿಡಿಯೋ ಧೂಮಪಾನವನ್ನ ಪ್ರಮೋಟ್ ಮಾಡುವುದಿಲ್ಲ’’ ಎಂಬ ಡಿಸ್‌ಕ್ಲೈಮರ್‌ನ ತಮ್ಮ ರೀಲ್ಸ್‌ ಜೊತೆಗೆ ಹಾಕಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
ಯಾರೂ ಊಹಿಸದ ಸ್ಥಳದಲ್ಲಿ ನಟಿ Sanjana Burli ಹನಿಮೂನ್​: ಸ್ಥಳ ರಿವೀಲ್ ಮಾಡಲ್ಲ ಎಂದಿದ್ದು ಇದಕ್ಕೇನಾ
Recommended image2
ಸದ್ದಿಲ್ಲದೇ ಹಸೆಮಣೆ ಏರಿದ ‘ಮೈನಾ’ ನಾಯಕ ನಟ ಸಿದ್ದಾರ್ಥ್‌… ಹುಡುಗಿ ಯಾರು?
Recommended image3
ನಂದನ ಕಾಳಜಿಗೆ ಕರಗಿದ ಕೇಶವ, ಅಪ್ಪ ಮಗನ ಪ್ರೀತಿ ನೋಡಿ ವೀಕ್ಷಕರು ಭಾವುಕ
Related Stories
Recommended image1
KD Movie ಸೆರಗ ಸರಿಸೋ ಬಗ್ಗೆ ಮೊದಲ ಬಾರಿ ರಿಯಾಕ್ಷನ್​ ಕೊಟ್ಟ ಸುದೀಪ್​: ಕಿಚ್ಚ ಹೇಳಿದ್ದೇನು
Recommended image2
Animal ಫಿಲ್ಮ್​ ನಾಯಕಿಯಾಗಿದ್ರೆ ರಾಘವ್​ ಚಡ್ಡಾ ಜೊತೆ ಮದ್ವೆನೇ ಆಗ್ತಿರಲಿಲ್ಲ: ನಟಿ ಪರಿಣೀತಿ ಚೋಪ್ರಾ ರಿವೀಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved