- Home
- Entertainment
- TV Talk
- ಬ್ಯಾಕ್ ಟು ಬ್ಯಾಕ್ ಕಾಂಟ್ರವರ್ಸಿಗಳಿಗೆ ಬೇಸತ್ತು, ಪೊಲೀಸ್ ಆಫೀಸರ್ ಆದ ಸೋನು ಶ್ರೀನಿವಾಸ್ ಗೌಡ!
ಬ್ಯಾಕ್ ಟು ಬ್ಯಾಕ್ ಕಾಂಟ್ರವರ್ಸಿಗಳಿಗೆ ಬೇಸತ್ತು, ಪೊಲೀಸ್ ಆಫೀಸರ್ ಆದ ಸೋನು ಶ್ರೀನಿವಾಸ್ ಗೌಡ!
ಆಗಾಗ ಕಾಂಟ್ರವರ್ಸಿ ಮಾಡಿಕೊಂಡು ಸದ್ದು ಮಾಡುವ ಸೋನು ಶ್ರೀನಿವಾಸ್ ಗೌಡ ಅವರು ಈ ಬಾರಿ ಪೊಲೀಸ್ ಅಧಿಕಾರಿಯಾಗಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಅವರೇ ಈ ವಿಷಯ ತಿಳಿಸಿದ್ದಾರೆ.

ಸದ್ಯ ಸೋನು ಗೌಡ ಅವರು ಯುಟ್ಯೂಬ್ ಚಾನೆಲ್‌ನಲ್ಲಿ ಫಿಟ್‌ನೆಸ್ ಬಗ್ಗೆ ಹೆಚ್ಚು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಆರೋಗ್ಯಕರ ಜೀವನದ ಬಗ್ಗೆ ಅವರು ಹೇಳಿದ್ದಾರೆ.
ಸೋನು ಗೌಡ ಅವರ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಅದಾದ ಬಳಿಕ ಅವರೇ ಬಾಲಿಯಲ್ಲಿ ಬೋಲ್ಡ್ ಇರುವ ವಿಡಿಯೋ ಶೇರ್ ಮಾಡಿದ್ದರು. ಇದಕ್ಕೆ ಸಾಕಷ್ಟು ಟೀಕೆಗಳು ಎದುರಾಗಿತ್ತು.
ಖಾಸಗಿ ವಿಡಿಯೋ ಸೇರಿದಂತೆ, ಬಾಲಕಿಯನ್ನು ದತ್ತು ಪಡೆಯುತ್ತಿದ್ದೇನೆ ಎಂದು ಹೇಳಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆ ಬಾಲಕಿ ಫೋಟೋ ಹಂಚಿಕೊಂಡಿದ್ದಕ್ಕೆ ಅವರು ಕೆಲ ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು.
“ಎಲ್ಲರಿಗೂ ನಮಸ್ಕಾರ ನಾನು ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ ಚಿತ್ರ Detective SOMASHEKAR GR .. ಇದೀಗ King of Hell YouTube channel ನಲ್ಲಿ ರಿಲೀಸ್ ಆಗಿದೆ.. ಈಗಲೇ ಕೊಟ್ಟಿರುವ link ಅಥವಾ youtube ನಲ್ಲಿ search ಮಾಡಿ ನೋಡಿ ನಿಮ್ಮ ಅನಿಸಿಕೆಯನ್ನು comment ಮಾಡಿ. ಇಂತಿ ಸೋನು ಶ್ರೀನಿವಾಸ್ ಗೌಡ” ಎಂದು ಹೇಳಿದ್ದಾರೆ.
ಅಂದಹಾಗೆ ಸೋನು ಪೋಸ್ಟ್‌ಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ಅನೇಕರು ನಾವು ಖೈದಿಗಳಾಗೋಕೆ ರೆಡಿ ಎಂದು ಹೇಳಿದ್ದರು. ಅದಕ್ಕೆ ಸೋನು ಅವರು ನಕ್ಕು ಸುಮ್ಮನಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

