MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಆಗ 'ನಿಮ್ಮಜ್ಜಿಗೆ ಅವ್ನು ಗೊತ್ತಾ' ಎಂದ್ರು, ಈಗ ಇವಳಿಗೆ ಛಾನ್ಸ್​ ಕೊಟ್ರು: ನಂದೇನು ತಪ್ಪು? ಕಣ್ಣೀರಿಟ್ಟ ವೈರಲ್​ ಹುಡುಗಿ ನಿತ್ಯಶ್ರೀ

ಆಗ 'ನಿಮ್ಮಜ್ಜಿಗೆ ಅವ್ನು ಗೊತ್ತಾ' ಎಂದ್ರು, ಈಗ ಇವಳಿಗೆ ಛಾನ್ಸ್​ ಕೊಟ್ರು: ನಂದೇನು ತಪ್ಪು? ಕಣ್ಣೀರಿಟ್ಟ ವೈರಲ್​ ಹುಡುಗಿ ನಿತ್ಯಶ್ರೀ

‘ಹೂವಿನ ಬಾಣದಂತೆ’ ಹಾಡಿನಿಂದ ವೈರಲ್ ಆದ ಮೈಸೂರಿನ ನಿತ್ಯಶ್ರೀ, ಇದೀಗ ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಅವಕಾಶ ಪಡೆದಿದ್ದಾರೆ. ಈ ಬೆಳವಣಿಗೆಯಿಂದಾಗಿ ತೀವ್ರ ಟ್ರೋಲ್‌ಗೆ ಒಳಗಾದ ಅವರು, ಸೋಷಿಯಲ್ ಮೀಡಿಯಾ ಲೈವ್‌ನಲ್ಲಿ ಕಣ್ಣೀರಿಟ್ಟು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.  

2 Min read
Author : Suchethana D
Published : Jan 07 2026, 04:39 PM IST
Share this Photo Gallery
  • FB
  • TW
  • Linkdin
  • Whatsapp
15
ಹೂವಿನ ಬಾಣದಂತೆ ವೈರಲ್​ ಹುಡುಗಿ
Image Credit : Instagram

ಹೂವಿನ ಬಾಣದಂತೆ ವೈರಲ್​ ಹುಡುಗಿ

ಗಾಯಕಿ ಶ್ರೇಯಾ ಘೋಷಲ್​ ಅವರ ಹೂವಿನ ಬಾಣದಂತೆ ಹಾಡನ್ನು ಫ್ರೆಂಡ್ಸ್​ಗಾಗಿ ಅಪಶ್ರುತಿಯಲ್ಲಿ ಹಾಡಿ ರಾತ್ರೋ ರಾತ್ರಿ ಫೇಮಸ್​ ಆದವರು ಮೈಸೂರಿನ ವೈರಲ್​ ಹುಡುಗಿ ನಿತ್ಯಶ್ರೀ. ಅವರೇನೂ ವೈರಲ್​ ಆಗಲಿ ಎಂದು ಹಾಡಿದವರಲ್ಲ. ಸುಖಾಸುಮ್ಮನೆ ಅವರ ಪಾಡಿಗೆ ಅವರು ಇದ್ದರು. ಆದರೆ ಕೆಲವೊಮ್ಮೆ ಅದೃಷ್ಟ ಬಂದರೆ, ಯಾರಾದರೇನೂ ಲಾಟರಿ ಹೊಡೆಯುತ್ತದೆ ಎನ್ನುವಂತೆ ನಿತ್ಯಶ್ರೀ ಅವರು ಸೋಷಿಯಲ್​ ಮೀಡಿಯಾ ಸೆನ್ಸೇಷನ್​ ಆದರು. ಹಲವರು ತಮ್ಮ ಕಾರ್ಯಕ್ರಮಗಳಿಗೆ ಈಕೆಯನ್ನು ಆಹ್ವಾನಿಸಿದರು. ಈಕೆಯನ್ನು ರಾತ್ರೋರಾತ್ರಿ ಸೆಲೆಬ್ರಿಟಿಯನ್ನಾಗಿ ಮಾಡಿದ್ದು ಇದೇ ನೆಟ್ಟಿಗರು ಹಾಗೂ ಜನರೇ.

25
ಇನ್ನಿಲ್ಲದಂತೆ ಟ್ರೋಲ್​
Image Credit : Instagram

ಇನ್ನಿಲ್ಲದಂತೆ ಟ್ರೋಲ್​

ಆದರೆ, ಯಾವಾಗ ನಿತ್ಯಶ್ರೀ ಅವರ ಡಿಮಾಂಡ್​ ಹೆಚ್ಚಾಯ್ತೋ ಅದೇ ಜನರು ಇನ್ನಿಲ್ಲದಂತೆ ಟ್ರೋಲ್​ ಮಾಡುತ್ತಿದ್ದಾರೆ. ಕೆಟ್ಟಕೆಟ್ಟದ್ದಾಗಿ ಈಕೆಗೆ ಚುಚ್ಚು ಮಾತುಗಳನ್ನಾಡುತ್ತಿದ್ದಾರೆ. ಆದರೆ, ಇಂಥ ವೈರಲ್​ ಆದವರಿಗೆ ಸಹಜವಾಗಿ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಅವಕಾಶ ಸಿಗುವುದು ಉಂಟು. ಅದರಂತೆಯೇ ಇದೀಗ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಷೋನಲ್ಲಿ ನಿತ್ಯಶ್ರೀ ಅವರಿಗೆ ಅವಕಾಶ ಸಿಕ್ಕಿದ್ದೇ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಈಕೆಯನ್ನು ಬಾಯಿಗೆ ಬಂದಂತೆ ನಿಂದಿಸುತ್ತಿದ್ದಾರೆ.

Related Articles

Related image1
Viral Poster: 'ಯಾರಿವಳು, ಯಾರಿವಳು ಭಯಂಕರ ಕಣ್ಣವಳು' ಎಂದು ತಲೆ ಕೆಡಿಸಿಕೊಂಡಿದ್ರಾ? ಕೊನೆಗೂ ರಿವೀಲ್​ ಆಗೋಯ್ತು!
Related image2
'ಗಿಲ್ಲಿ, ಗಿಲ್ಲಿ, ಗಿಲ್ಲಿ ಏನ್​ ದಬ್ಬಾಕಿದ್ಯಾ ಇಲ್ಲಿ?' ಎಂದು ಭರ್ಜರಿ ಸ್ಟೆಪ್​ ಹಾಕಿದ Bigg Boss ಜಾಹ್ನವಿ- 10 ದಿನ ಕಾಯಮ್ಮಾ ಎಂದ ನೆಟ್ಟಿಗರು
35
ನಿಮ್ಮಜ್ಜಿಗೆ ಗೊತ್ತಾ ಎಂದವರೇ ಈಗ...
Image Credit : Instagram

ನಿಮ್ಮಜ್ಜಿಗೆ ಗೊತ್ತಾ ಎಂದವರೇ ಈಗ...

ಪ್ರತಿಯೊಬ್ಬ ಕನ್ನಡಿಗರ ಮನಸ್ಸನ್ನು ಗೆದ್ದಿರುವ, ಯಾರೂ ಮಾಡದ ಸಾಧನೆ ಮಾಡುತ್ತಿರುವ, ದೇಶ-ವಿದೇಶಗಳನ್ನು ಸುತ್ತಾಡಿ, ಕೆಲವೊಮ್ಮೆ ಜೀವದ ಹಂಗನ್ನೂ ತೊರೆದು ಕನ್ನಡದಲ್ಲಿಯೇ ಆ ದೇಶಗಳ ಮಾಹಿತಿ ನೀಡಿ ಕನ್ನಡದ ಕಣ್ಮಣಿ ಎನ್ನಿಸಿಕೊಂಡಿರುವ ಡಾ.ಬ್ರೋ ಅರ್ಥಾತ್​ ಗಗನ್​ ಅವರನ್ನು ವಾಹಿನಿಗೆ ಕರೆಸಿ ಎಂದಾಗ, 'ಇವನ್ಯಾರೆಂದು ನಿಮ್ಮ ಅಮ್ಮನಿಗೆ ಗೊತ್ತಾ, ಅಜ್ಜಿಗೆ ಗೊತ್ತಾ' ಎಂದು ಮೂದಲಿಸಿದವರೇ ಇದೀಗ ನಿತ್ಯಶ್ರೀ ಅವರಿಗೆ ಇಂಥ ದೊಡ್ಡ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ ಎಂದು ಜಾಲತಾಣದಲ್ಲಿ ಟ್ರೋಲ್​ ಮಾಡುವುದು ಒಂದೆಡೆಯಾದರೆ, ಯಾವ ತಪ್ಪೂ ಮಾಡದ ನಿತ್ಯಶ್ರೀ ಅವರನ್ನೂ ಇದರ ಜೊತೆಗೆ ಹಂಗಿಸಲಾಗುತ್ತಿದೆ.

45
ನೊಂದು ನುಡಿದ ನಿತ್ಯಶ್ರೀ
Image Credit : Instagram

ನೊಂದು ನುಡಿದ ನಿತ್ಯಶ್ರೀ

ಇದರಿಂದ ನೊಂದು ನಿತ್ಯಶ್ರೀ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಲೈವ್​ ಬಂದು ಕಣ್ಣೀರಿಟ್ಟಿದ್ದಾರೆ. ನಾನು ಆ ಹಾಡನ್ನು ಕೆಟ್ಟದ್ದಾಗಿ ಹೇಳಿದ್ದೇನೆ ನಿಜ. ಅದಕ್ಕೆ ಕ್ಷಮೆಯನ್ನೂ ಕೋರಿದ್ದೇನೆ. ನೀನೇನೂ ಕ್ಷಮೆ ಕೋರುವ ಅಗತ್ಯವಿಲ್ಲ ಎಂದು ಅರ್ಜುನ್​ ಜನ್ಯ ಸರ್​ ಅವರೂ ಹೇಳಿದ್ದಾರೆ. ಇದರ ಹೊರತಾಗಿಯೂ ನನ್ನ ವಿರುದ್ಧ ಸಿಕ್ಕಾಪಟ್ಟೆ ನೆಗೆಟಿವ್​ ಕಮೆಂಟ್ಸ್​ ಬರುತ್ತಿವೆ. ಇದೀಗ ಕಾಮಿಡಿ ಕಿಲಾಡಿ ಷೋನಲ್ಲಿ ಛಾನ್ಸ್​ ಸಿಕ್ಕಿರುವುದಕ್ಕೆ ಟ್ರೋಲ್​ ಮಾಡಲಾಗುತ್ತಿದೆ. ಇಂಥ ಛಾನ್ಸ್​ ನಿಮ್ಮ ಅಕ್ಕನಿಗೋ, ತಂಗಿಗೋ ಸಿಕ್ಕಿದ್ದರೆ ಹೀಗೆಯೇ ಮಾಡ್ತಿದ್ರಾ ಎಂದು ನಿತ್ಯಶ್ರೀ ಪ್ರಶ್ನಿಸಿದ್ದಾರೆ.

55
ಆಡಿಷನ್​ ಕೊಟ್ಟೇ ಪಾಸಾದೆ
Image Credit : Instagram

ಆಡಿಷನ್​ ಕೊಟ್ಟೇ ಪಾಸಾದೆ

ನಿನಗೇನು ಟ್ಯಾಲೆಂಟ್​ ಇದೆ ಎಂದು ಕೇಳುತ್ತೀರಲ್ಲ. ನಾನು ಸುಮ್ಮನೇ ಏನೂ ಸೆಲೆಕ್ಟ್​ ಆಗಲಿಲ್ಲ. ಹಲವು ಜಡ್ಜಸ್​ ಮುಂದೆ ನಾನು ಆಡಿಷನ್​ ಕೊಟ್ಟೆ. ನನಗೆ ನಟನೆ ಗೊತ್ತಿಲ್ಲ, ಇದೇ ಮೊದಲ ಬಾರಿಗೆ ಸ್ಟೇಜ್​ ಹತ್ತಿರುವುದು ನಿಜ. ಆದರೆ, ಆಡಿಷನ್​ನಲ್ಲಿ ನಾನು ಪಾಸಾದ ಬಳಿಕವೇ ನನ್ನನ್ನು ಸೆಲೆಕ್ಟ್​ ಮಾಡಿದ್ರು. ನನ್ನ ಅರ್ಹತೆ ಏನು ಎನ್ನುವುದು ಅವರಿಗೆ ತಿಳಿದೇ ಸೆಲೆಕ್ಟ್​ ಆಗಿದ್ದೇನೆ. ಹೀಗಿರುವಾಗ ಸುಮ್ಮನೇ ಯಾಕೆ ಟ್ರೋಲ್ ಮಾಡಿ ಮನಸ್ಸಿಗೆ ಬೇಸರ ಮಾಡುತ್ತೀರಾ ಎಂದು ನಿತ್ಯಶ್ರೀ ಭಾವುಕರಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀ ಕನ್ನಡ
ವೈರಲ್ ಸುದ್ದಿ
ವೈರಲ್ ವಿಡಿಯೋ
ಮಹಿಳೆಯರು
ಟಿವಿ ಶೋ
ಮನರಂಜನಾ ಸುದ್ದಿ

Latest Videos
Recommended Stories
Recommended image1
‌ದೊಡ್ಮನೆ ಹಬ್ಬ ಮಾಡಿ Bigg Boss ಸ್ಪರ್ಧಿಗಳ ಗುಟ್ಟು ರಟ್ಟು ಮಾಡಿದ Bhagyalakshmi Serial ನಟಿ ಸುಷ್ಮಾ ರಾವ್
Recommended image2
Amruthadhaare ರೋಚಕ ಸಂಚಿಕೆ: ಮರಳಲಿದೆ ಗೌತಮ್​ ದಿವಾನ್​ ಸಾಮ್ರಾಜ್ಯ- ಬಿಟ್ಟಿ ತಿಂದವರು ಬೀದಿಗೆ!
Recommended image3
Bigg Boss ಶೋಗೆ ಕಾಲಿಟ್ಟಿದ್ದೇ ಕಾಲಿಟ್ಟಿದ್ದು.. ರಾಜಯೋಗ ಬಂತು..! ಜಾಕ್‌ಫಾಟ್‌ ಹೊಡೆದ Gilli Nata
Related Stories
Recommended image1
Viral Poster: 'ಯಾರಿವಳು, ಯಾರಿವಳು ಭಯಂಕರ ಕಣ್ಣವಳು' ಎಂದು ತಲೆ ಕೆಡಿಸಿಕೊಂಡಿದ್ರಾ? ಕೊನೆಗೂ ರಿವೀಲ್​ ಆಗೋಯ್ತು!
Recommended image2
'ಗಿಲ್ಲಿ, ಗಿಲ್ಲಿ, ಗಿಲ್ಲಿ ಏನ್​ ದಬ್ಬಾಕಿದ್ಯಾ ಇಲ್ಲಿ?' ಎಂದು ಭರ್ಜರಿ ಸ್ಟೆಪ್​ ಹಾಕಿದ Bigg Boss ಜಾಹ್ನವಿ- 10 ದಿನ ಕಾಯಮ್ಮಾ ಎಂದ ನೆಟ್ಟಿಗರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved