- Home
- Entertainment
- TV Talk
- ಕರ್ಮ ಯಾರನ್ನೂ ಬಿಡಲ್ಲ ಗುರು; ಸಂತೋಷ್‌ಗೆ ಇದು ಆಗಬೇಕಾಗಿತ್ತು! ಯಾರಿಗೂ ಹೇಳ್ಬೇಡಿ ಕತೆಯಾಯ್ತಾ
ಕರ್ಮ ಯಾರನ್ನೂ ಬಿಡಲ್ಲ ಗುರು; ಸಂತೋಷ್‌ಗೆ ಇದು ಆಗಬೇಕಾಗಿತ್ತು! ಯಾರಿಗೂ ಹೇಳ್ಬೇಡಿ ಕತೆಯಾಯ್ತಾ
Zee Kannada Serial Lakshmi Nivasa serial update: ದುರಾಸೆಯಿಂದ ಪೋಷಕರಿಗೆ ಮೋಸ ಮಾಡಿದ ಸಂತೋಷ್‌ಗೆ ಕರ್ಮಫಲ ಸಿಕ್ಕಿದೆ. ಹಣ ಕಳೆದುಕೊಂಡು ಸಾಲ ಮಾಡಲು ಹೋದಾಗ, ತಾನು ಕಟ್ಟಿದ ಮನೆಯೇ ತನ್ನದಲ್ಲ ಎಂಬ ಸತ್ಯ ತಿಳಿದು ಆಘಾತಕ್ಕೊಳಗಾಗಿದ್ದಾನೆ. ಇದು ಕರ್ಮದ ಫಲ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಕರ್ಮ ಯಾರನ್ನೂ ಬಿಡಲ್ಲ
ಕರ್ಮ ಯಾರನ್ನೂ ಬಿಡಲ್ಲ ಎಂಬುದನ್ನು ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ತೋರಿಸಲಾಗಿದೆ. ದುಡಿಯದ ಅಪ್ಪ-ಅಮ್ಮ ಜೊತೆಯಲ್ಲಿದ್ದರೆ ಖರ್ಚು ಅಂತ ತಿಳಿದು ಇಬ್ಬರನ್ನ ಮನೆಯಿಂದ ಹೊರಗೆ ಹಾಕಿದ್ದನು. ಸುಳ್ಳು ಹೇಳಿ ಅಪ್ಪನಿಂದ ಹಣ ಪಡೆದುಕೊಂಡಿದ್ದ ಸಂತೋಷ್‌ಗೆ ಬಿಗ್ ಶಾಕ್ ಎದುರಾಗಿದೆ.
ದುರಾಸೆಯುಳ್ಳ ವ್ಯಕ್ತಿ
ದುರಾಸೆಯುಳ್ಳ ವ್ಯಕ್ತಿ ಹೇಗಿರುತ್ತಾನೆ ಎಂಬುದನ್ನು ಸಂತೋಷ್ ಪಾತ್ರದ ಮೂಲಕ ತೋರಿಸಲಾಗಿದೆ. ಬಡ್ಡಿ ಆಸೆಗಾಗಿ ಸಂತೋಷ್ 10 ಲಕ್ಷ ರೂಪಾಯಿ ಕಳೆದುಕೊಂಡಿದ್ದಾನೆ. ಇದೀಗ ಮನೆಯ ಮೇಲೆ ಸಾಲ ಪಡೆಯಲು ಬ್ಯಾಂಕ್‌ಗೆ ಹೋಗಿದ್ದ ಸಂತೋಷ್‌ಗೆ ಬರಸಿಡಿಲು ಬಡಿದಿದೆ.
ಸಂತೋಷ್ ಮಾಡಿಕೊಂಡ ಎಡವಟ್ಟು
ಬ್ಯಾಂಕ್ ಅಧಿಕಾರಿಗಳು ಮನೆಯ ದಾಖಲೆಗಳನ್ನು ಪರಿಶೀಲಿಸಿದಾಗ ಸಂತೋಷ್ ಮಾಡಿಕೊಂಡ ಎಡವಟ್ಟು ಗಮನಕ್ಕೆ ಬಂದಿದೆ. ಮನೆಯನ್ನು ಕಟ್ಟಿರೋದು ಬೇರೆಯವರ ನಿವೇಶನದಲ್ಲಿ ಅನ್ನೋ ಸತ್ಯ ಸಂತೋಷ್‌ಗೆ ಗೊತ್ತಾಗಿದೆ. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಸಂತೋಷ್‌ಗೆ ಬ್ಯಾಂಕ್ ಅಧಿಕಾರಿಗಳು ಹೇಳಿದ ಮಾತು ಕೇಳಿ ದಿಗ್ಬ್ರಮೆಗೊಂಡಿದ್ದಾನೆ.
ಹಣವೂ ಹೋಯ್ತು, ಕಟ್ಟಿಸಿದ ಮನೆಯೂ ಕೈ ತಪ್ಪಿ ಹೋಗುವ ಆತಂಕ
ಇತ್ತ ಹಣವೂ ಹೋಯ್ತು, ಕಟ್ಟಿಸಿದ ಮನೆಯೂ ಕೈ ತಪ್ಪಿ ಹೋಗುವ ಆತಂಕದಲ್ಲಿ ಸಂತೋಷ್ ಇದ್ದಾನೆ. ಇಂದು ಬಿಡುಗಡೆಯಾಗಿರುವ ಪ್ರೋಮೋ ನೋಡಿದ ನೆಟ್ಟಿಗರು ಇದಪ್ಪಾ ವರಸೆ ಎಂದು ಕಮೆಂಟ್ ಮಾಡಿದ್ದಾರೆ. ಕರ್ಮ ಯಾರನ್ನು ಬಿಡಲ್ಲ. ಅಪ್ಪ ಅಮ್ಮನಿಗೆ ಮೋಸ ಮಾಡಿದಕ್ಕೆ ಸರಿಯಾಗೇ ಆಗ್ತಿದೆ ಎಂದು ಹೇಳಿದ್ದಾರೆ.
ಯಾರಿಗೂ ಹೇಳಬೇಡಿ ಸಿನಿಮಾ
ಸಂತೋಷ್ ಕಥೆ ಅನಂತ್ ನಾಗ್ ನಟನೆಯ ಯಾರಿಗೂ ಹೇಳಬೇಡಿ ಸಿನಿಮಾದಂತಾಗಿದೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಕರ್ಮವೆಂಬುದು ಯಾರನ್ನು ಬಿಡುವುದಿಲ್ಲ ಅದಕ್ಕೆ ಬಡವ ಶ್ರೀಮಂತ ಬಲ್ಲಿದನೆಂಬ ಬೇಧ ,ಬಾವ ಗೊತ್ತಿಲ್ಲ. ತಂದೆ ತಾಯಿಯ ಶಾಪ ನಿನಗೆ ತಟ್ಟಿದೆ, ಮಗನೆ ನಿನಗೆ ಅನುಭವಿಸು ಎಂದು ಶಪಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

