- Home
- Entertainment
- TV Talk
- Karna Serial: ನಿತ್ಯಾ ಒಡಲ ಸತ್ಯ ತಾರಾಗೆ ಗೊತ್ತಾಗಿ ಹೋಯ್ತಾ? ಗರ್ಭಿಣಿ ರಹಸ್ಯದ ಗುಟ್ಟು ರಟ್ಟು?
Karna Serial: ನಿತ್ಯಾ ಒಡಲ ಸತ್ಯ ತಾರಾಗೆ ಗೊತ್ತಾಗಿ ಹೋಯ್ತಾ? ಗರ್ಭಿಣಿ ರಹಸ್ಯದ ಗುಟ್ಟು ರಟ್ಟು?
ಹನಿಮೂನ್ ನಾಟಕವಾಡಿ ಮನೆಗೆ ಮರಳಿದ ಕರ್ಣ ಮತ್ತು ನಿತ್ಯಾಗೆ ಮನೆಯವರಿಂದ ಅನಿರೀಕ್ಷಿತ ಪ್ರಶ್ನೆಗಳು ಎದುರಾಗುತ್ತವೆ. ಇದೇ ವೇಳೆ ಹೊಟ್ಟೆನೋವಿನಿಂದ ಬಳಲುತ್ತಿರುವ ನಿತ್ಯಾಳ ರಹಸ್ಯವು ನಾಡಿ ಪರೀಕ್ಷೆಯ ಮೂಲಕ బయಲಾಗುವ ಆತಂಕಕಾರಿ சூழல் ನಿರ್ಮಾಣವಾಗಿದೆ.

ಇನ್ನೊಂದು ಘಟ್ಟಕ್ಕೆ
ಕರ್ಣ ಸೀರಿಯಲ್ (Karna Serial) ಇದೀಗ ಇನ್ನೊಂದು ಘಟ್ಟಕ್ಕೆ ಬಂದು ತಲುಪಿದೆ. ಚಿಕ್ಕಮಗಳೂರಿನಲ್ಲಿ ತೇಜಸ್ ಇರುವುದು ತಿಳಿದ ಕರ್ಣ ಮತ್ತು ನಿತ್ಯಾ ಅಲ್ಲಿ ಅವನನ್ನು ಹುಡುಕಿ ಹೊರಟಿದ್ದರು. ಆದರೆ ರಮೇಶ್ನ ಕುತಂತ್ರದಿಂದ ಆತ ಸಿಗಲಿಲ್ಲ.
ರೇಗಿಸಿದ ಮನೆಮಂದಿ
ಮನೆಯವರಿಗೆ ಹನಿಮೂನ್ಗೆ ಹೋಗುವುದಾಗಿ ಇಬ್ಬರೂ ಹೇಳಿ ಹೋಗಿದ್ದರಿಂದ ಅವರು ವಾಪಸ್ ಆಗುತ್ತಿದ್ದಂತೆಯೇ ಮನೆಯಲ್ಲಿ ಶಾಂತಿ ಸೇರಿ ಎಲ್ಲಾ ರೇಗಿಸಿದ್ದಾರೆ. ಹನಿಮೂನ್ ಹೇಗಿತ್ತು ಎಂದು ಕೇಳಿದ್ದಾರೆ. ಇದರಿಂದ ನಿತ್ಯಾಗೆ ಇರಿಟೇಟ್ ಆಗಿದೆ. ಆದರೆ ಸತ್ಯ ಬಾಯಿ ಬಿಡುವ ಹಾಗಿಲ್ಲ.
ಹನಿಮೂನ್ ವಿಷಯ
ಇದೇ ವೇಳೆ, ನಿತ್ಯಾಳಿಗೆ ಹನಿಮೂನ್ ಬಗ್ಗೆ ಪದೇ ಪದೇ ಕೇಳುತ್ತಿದ್ದಂತೆಯೇ ಗರ್ಭಿಣಿ ನಿತ್ಯಾಗೆ ಹೊಟ್ಟೆ ನೋವು ಶುರುವಾಗಿದೆ. ಆದರೆ ಖುದ್ದು ಡಾಕ್ಟರ್ ಆಗಿರೋ ತಾರಾ ಅವಳಿಗೆ ನಿತ್ಯಾಗೆ ಏನಾಯಿತು ಎಂದು ನೋಡಲು ಹೇಳಿದಾಗ, ನಿತ್ಯಾ ಹಿಂದೇಟು ಹಾಕಿದ್ದಾಳೆ.
ನಿತ್ಯಾಳ ಕೈ
ಆದರೆ ಒತ್ತಾಯಪೂರ್ವಕವಾಗಿ ನಿತ್ಯಾಳ ಕೈಯನ್ನು ನೋಡಲು ಮುಂದಾಗಿದ್ದಾಳೆ ತಾರಾ. ಅಳುಕಿನಿಂದಲೇ ನಿತ್ಯಾ ಕೈಯನ್ನು ನೀಡಿದ್ದಾಳೆ. ಸದ್ಯ ಇದರ ಪ್ರೊಮೋ ರಿಲೀಸ್ ಆಗಿದೆ.
ನಿತ್ಯಾ ಗರ್ಭಿಣಿ ಎನ್ನುವ ವಿಷಯ ಗೊತ್ತಾಗತ್ತಾ?
ನಿತ್ಯಾ ಗರ್ಭಿಣಿ ಎನ್ನುವ ವಿಷಯ ಗೊತ್ತಾಗತ್ತಾ? ಎಂದು ಪ್ರೊಮೋದಲ್ಲಿ ಶೀರ್ಷಿಕೆ ನೀಡಲಾಗಿದೆ. ಆದರೆ ಅದು ಅಷ್ಟು ಸುಲಭದಲ್ಲಿ ಗೊತ್ತಾಗಲು ಸಾಧ್ಯವೇ ಇಲ್ಲ ಬಿಡಿ. ಅಷ್ಟರಲ್ಲಿ ಕರ್ಣ ಬಂದು ತಪ್ಪಿಸುತ್ತಾನೆ, ಅಷ್ಟೇ. ನಿತ್ಯಾ ಗರ್ಭಿಣಿ ಎಂದು ತಿಳಿಯುವಷ್ಟರಲ್ಲಿ ಆಕೆಗೆ ಹೊಟ್ಟೆ ಬಂದು, ಅದು ಕರ್ಣನದ್ದೇ ಮಗು ಎಂದು ತಿಳಿದುಕೊಳ್ಳುತ್ತಾರೆ. ಅಲ್ಲಿಗೆ ನಿಧಿ ಮತ್ತು ಕರ್ಣನ ಕನಸು ನುಚ್ಚು ನೂರಾದಂತೆ ಸರಿ!
ಮಾತು ಕೊಟ್ಟ ಕರ್ಣ
ಅಷ್ಟಕ್ಕೂ ಇದಾಗಲೇ ಮಗು ಸಾಯಬಾರದು. ಅದಕ್ಕೆ ನಾನೇ ಅಪ್ಪ ಆಗುತ್ತೇನೆ. ಯಾವ ಮಗುವೂ ಅನಾಥ ಆಗಬಾರದು ಎಂದು ಕರ್ಣ ನಿತ್ಯಾಗೆ ಮಾತು ಕೊಟ್ಟಾಗಿದೆಯಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

