- Home
- Entertainment
- TV Talk
- ಜೀನ್ಸ್ ಪ್ಯಾಂಟ್, ಜಾಕೆಟ್- ಸಾಧನೆಯ ಮಗನ ಜೊತೆ ಆಸ್ಟ್ರೇಲಿಯಾ ಪ್ರವಾಸದಲ್ಲಿ Lakshmi Nivasa Serial ನಟಿ; Photos
ಜೀನ್ಸ್ ಪ್ಯಾಂಟ್, ಜಾಕೆಟ್- ಸಾಧನೆಯ ಮಗನ ಜೊತೆ ಆಸ್ಟ್ರೇಲಿಯಾ ಪ್ರವಾಸದಲ್ಲಿ Lakshmi Nivasa Serial ನಟಿ; Photos
Lakshmi Nivasa Serial vijayalakshmi subramani: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ವಿಜಯಲಕ್ಷ್ಮೀ ಸುಬ್ರಹ್ಮಣಿ ಅವರು ಜೀನ್ಸ್ ಪ್ಯಾಂಟ್, ಜಾಕೆಟ್ ಧರಿಸಿ ಆಸ್ಟ್ರೇಲಿಯಾದ ಪ್ರವಾಸದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೀವು ನೋಡಿ…

ಆಸ್ಟ್ರೇಲಿಯಾ ಪ್ರವಾಸ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವಿಶ್ವನ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ವಿಜಯಲಕ್ಷ್ಮೀ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸಿನಿಮಾಗಳಲ್ಲಿ ನಟನೆ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿರುವ ವಿಜಯಲಕ್ಷ್ಮೀ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
ಸೀರಿಯಲ್‌ನಲ್ಲಿ ಪಾಸಿಟಿವ್ ಪಾತ್ರ
ವಿಜಯಲಕ್ಷ್ಮೀ ಅವರದ್ದು ಪಾಸಿಟಿವ್ ಪಾತ್ರ. ಗಂಡನ ತಂಗಿ ಲಕ್ಷ್ಮೀ ಕಂಡರೆ ತುಂಬ ಇಷ್ಟ. ಒಟ್ಟಿನಲ್ಲಿ ಹೀರೋ ವಿಶ್ವನ ಪಾತ್ರವಾಗಿದ್ದು, ಸಾಕಷ್ಟು ಜನರ ಮನಸ್ಸು ಗೆದ್ದಿದ್ದಾರೆ.
ಶಿಕ್ಷಣಕ್ಕೆ ಗಮನ
ವಿಜಯಲಕ್ಷ್ಮೀ ಅವರು ಬಿಎಡ್ ಓದಿದ್ದಾರೆ. ಇವರು ಶಿಕ್ಷಣಕ್ಕೆ ಹೆಚ್ಚಿನ ಗಮನ ಕೊಡುತ್ತಾರೆ. ಸೇಲಂ ಇವರ ಮೂಲ ಊರು. ಸುಂದರವಾಗಿ ಹಳೆಗನ್ನಡ ಮಾತಾಡುವ ವಿಜಯಲಕ್ಷ್ಮೀ, ಲೈಫ್‌ನಲ್ಲಿ ಸಾಕಷ್ಟು ಕಷ್ಟಗಳನ್ನು ನೋಡಿದ್ದಾರೆ, ಅನುಭವಿಸಿದ್ದಾರೆ.
ಮಗನ ಜೊತೆ ಸಮಯ ಕಳೆಯುತ್ತಿದ್ದಾರೆ
ವಿಜಯಲಕ್ಷ್ಮೀ ಅವರು ಮಗನಿಗೂ ಕೂಡ ಶಿಕ್ಷಣ ಕೊಡಿಸಲು ಕಷ್ಟಪಟ್ಟಿದ್ದುಂಟು. ಈಗ ಅವರ ಮಗ ಆಸ್ಟ್ರೇಲಿಯಾದಲ್ಲಿದ್ದಾರೆ. ಸೀರಿಯಲ್‌ನಿಂದ ಬ್ರೇಕ್ ಪಡೆದಿರುವ ವಿಜಯಲಕ್ಷ್ಮೀ ಈಗ ಮಗನ ಜೊತೆ ಸಮಯ ಕಳೆಯುತ್ತಿದ್ದಾರೆ.
ಉನ್ನತ ಹಂತದ ಜಾಬ್
ವಿಜಯಲಕ್ಷ್ಮೀ ಅವರ ಮಗ ಆಸ್ಟ್ರೇಲಿಯಾದಲ್ಲಿ ಉನ್ನತ ಮಟ್ಟದ ಜಾಬ್‌ನಲ್ಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಡೆವಿಲ್ ಸಿನಿಮಾದಲ್ಲಿ ನಟನೆ
ನಟ ದರ್ಶನ್ ತೂಗುದೀಪ ಅವರ ‘ದಿ ಡೆವಿಲ್’ ಸಿನಿಮಾದಲ್ಲಿ ವಿಜಯಲಕ್ಷ್ಮೀ ಅವರು ನಟಿಸಿದ್ದಾರೆ. ಇನ್ನು ಶ್ವಾನಗಳು ಅಂದರೆ ತುಂಬ ಇಷ್ಟವಂತೆ. ಮನೆಯಲ್ಲಿ ಅವರು ಶ್ವಾನಗಳನ್ನು ಸಾಕಿದ್ದಾರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

